ಜಿಮ್ ನಲ್ಲಿ ಸಾಕಷ್ಟು ಕಸರತ್ತು ಆರಂಭ ಮಾಡಿದ ದರ್ಶನ, ಕ್ರಾಂತಿ ಸಿನೆಮಾಗೆ ಅಂದು ಕೊಂಡ್ರಾ?? ಅಲ್ಲವೇ ಅಲ್ಲ ಮತ್ಯಾವ ಸಿನೆಮಾಗೆ ಗೊತ್ತೇ??
ಅಭಿಮಾನಿಗಳ ಮೆಚ್ಚಿನ ಡಿಬಾಸ್ ದರ್ಶನ್ ಅವರು ಸಿನಿಮಾ ಚಿತ್ರೀಕರಣಗಳಲ್ಲಿ ಬ್ಯುಸಿ ಆಗಿದ್ದಾರೆ. ಕ್ರಾಂತಿ ಸಿನಿಮಾ ಚಿತ್ರೀಕರಣ ಒಂದು ಕಡೆ ಭರದಿಂದ ಸಾಗುತ್ತಿದೆ. ಮತ್ತೊಂದು ಕಡೆ ದರ್ಶನ್ ಅವರು ಹೆವಿ ವರ್ಕ್ ಔಟ್ ಮಾಡಿ, ಫಿಟ್ ಆಗುತ್ತಿದ್ದಾರೆ. ರಾಬರ್ಟ್ ಸಿನಿಮಾ ನಂತರ ನಟ ದರ್ಶನ್ ಹೆಚ್ಚಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿಲ್ಲ. ಲಾಕ್ ಡೌನ್ ಸಮಯದಲ್ಲಿ ರಿಲ್ಯಾಕ್ಸ್ ಆಗಿದ್ದ ಡಿಬಾಸ್ ಸ್ವಲ್ಪ ದಪ್ಪಗಾಗಿದ್ದರು. ಫಿಟ್ನೆಸ್ ಫ್ರೀಕ್ ಆಗಿರುವ ದರ್ಶನ್ ಅವರು ವಾರ್ಕೌಟ್ ಗೆ ಸ್ವಲ್ಪ ಬ್ರೇಕ್ ನೀಡಿ, ದಪ್ಪ ಆಗಿದ್ದರು ಆದರೆ ಈಗ ಬ್ಯಾಕ್ ಟು ಫಾರ್ಮ್ ಎನ್ನುವಂತೆ ದರ್ಶನ್ ಅವರು ಮತ್ತೊಮ್ಮೆ ಜಿಮ್ ವಾರ್ಕೌಟ್ ಮಾಡಿ, ಫಿಟ್ ಆಗುತ್ತಿದ್ದಾರೆ. ಡಿಬಾಸ್ ಅವರು ವಾರ್ಕೌಟ್ ಮಾಡುತ್ತಿರುವುದು ಕ್ರಾಂತಿ ಸಿನಿಮಾಗಾಗಿ ಅಲ್ಲ.. ಬೇರೆ ಯಾವ ಸಿನಿಮಾಗಾಗಿ ಗೊತ್ತಾ?
ನಟ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ಜಿಮ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಪ್ರತಿದಿನ ವಾರ್ಕೌಟ್ ಮಾಡಿ ದೇಹ ದಂಡಿಸುತ್ತಾ, ಮತ್ತೆ ಸಣ್ಣ ಆಗಿದ್ದಾರೆ. ಡಿಬಾಸ್ ವಾರ್ಕೌಟ್ ಮಾಡುತ್ತಿರುವ ಫೋಟೋಸ್ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಅಭಿಮಾನಿಗಳು ದರ್ಶನ್ ಅವರು ಸ್ಲಿಮ್ ಆಗಿರುವುದನ್ನು ನೋಡಿ ಶಾಕ್ ಆಗಿದ್ದಾರೆ. ದರ್ಶನ್ ಅವರು ಈ ಪರಿ ವರ್ಕೌಟ್ ಮಾಡಿತ್ತಿರುವುದು ಕ್ರಾಂತಿ ಸಿನಿಮಾಗಾಗಿ ಅಲ್ಲ, ಬದಲಾಗಿ ಗರಡಿ ಸಿನಿಮಾಗಾಗಿ. ಯೋಗರಾಜ್ ಭಟ್ ಅವರು ನಿರ್ದೇಶನ ಮಾಡುತ್ತಿರುವ ಗರಡಿ ಸಿನಿಮಾವನ್ನು, ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ನಿರ್ಮಾಣ ಮಾಡುತ್ತಿದ್ದು, ಯಶಸ್ ಸೂರ್ಯ ನಾಯಕನಾಗಿದ್ದಾರೆ.
ಈ ಸಿನಿಮಾದಲ್ಲಿ ಡಿಬಾಸ್ ದರ್ಶನ್ ಅವರು ಮುಖ್ಯಪಾತ್ರ ಒಂದರಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನಲಾಗುತ್ತಿದೆ. ಆ ಪಾತ್ರಕ್ಕಾಗಿಯೇ ದರ್ಶನ್ ಅವರ ದೇಹ ದಂಡಿಸಿ ವರ್ಕೌಟ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲೇ ದರ್ಶನ್ ಅವರ ದೃಶ್ಯಗಳನ್ನು ಚಿತ್ರೀಕರಣ ಮಾಡಲಿದ್ದಾರಂತೆ ನಿರ್ದೇಶಕ ಯೋಗರಾಜ್ ಭಟ್. ದರ್ಶನ್ ಅವರು ಈ ಹೊಸ ಪಾತ್ರ ಒಪ್ಪಿಕೊಂಡಿರುವುದು ಹಾಗೂ ಮರಳಿ ಜಿಮ್ ಗೆ ಬಂದಿರುವುದು ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ, ವಾರ್ಕೌಟ್ ಫೋಟೋಗಳನ್ನು ಶೇರ್ ಮಾಡಿ, ಬಾಸ್ ಇಸ್ ಬ್ಯಾಕ್ ಎಂದು ಡಿಬಾಸ್ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಇನ್ನು ಕ್ರಾಂತಿ ಸಿನಿಮಾ ಚಿತ್ರೀಕರಣ ಶೇ.60 ರಷ್ಟು ಮುಗಿದಿದ್ದು, ರಚಿತಾ ರಾಮ್ ಈ ಸಿನಿಮಾದ ನಾಯಕಿಯಾಗಿದ್ದಾರೆ. ಈ ವರ್ಷವೇ ಸಿನಿಮಾ ತೆರೆಕಾಣಲಿದೆ ಎನ್ನಲಾಗುತ್ತಿದೆ.
Comments are closed.