ನಟನೆಯಿಂದ ಸಂಸದೆಯಾಗಿ ಲೋಕಸಭೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಂಸದೆಯೇ ಕುರಿತು ನಿಮಗೆಷ್ಟು ಗೊತ್ತು??
ಖ್ಯಾತ ನಟಿಯಾಗಿದ್ದಾ ನುಸ್ರತ್ ಜಹಾನ್ ಅವರು ಅನೇಕ ವಿಚಾರಗಳಿಂದ ಸುದ್ದಿಯಾಗುತ್ತಾರೆ. ಇವರು ಒಬ್ಬ ನಟಿಯಷ್ಟೇ ಅಲ್ಲ, ರಾಜಕೀಯದಲ್ಲಿ ಸಕ್ರಿಯವಾಗಿರುವ ಸಂಸದೆ ಸಹ ಹೌದು. ನುಸ್ರತ್ ಜಹಾನ್ ಅವರು ವೈಯಕ್ತಿಕ ಜೀವನದ ವಿಚಾರಗಳಿಂದ ಬಹಳಷ್ಟು ಸುದ್ದಿಯಾಗಿದ್ದು, ಇವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತದೆ. ಕಾಂಗ್ರೆಸ್ ಪಕ್ಷದ ಸದಸ್ಯೆ ಆಗಿದ್ದಾರೆ ನುಸ್ರತ್. 2019ರ ಜೂನ್ ನಲ್ಲಿ ನುಸ್ರತ್ ಜಹಾನ್ ಅವರು ಕೈಗಾರಿಕೋದ್ಯಮಿ ನಿಖಿಲ್ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಟರ್ಕಿಯ ಬೊಡ್ರಮ್ ನಲ್ಲಿ ಇವರಿಬ್ಬರ ಮದುವೆ ನಡೆದಿತ್ತು. ಮದುವೇ ನಂತರ ಸಂಸತ್ ನಲ್ಲಿ ಅಧಿಕಾರ ಸ್ವೀಕರಿಸಿದ್ದರು.
ಆದರೆ ಇಬ್ಬರ ನಡುವೆ ವೈಮನಸ್ಸು ಮೂಡಿದ ಕಾರಣ, ಕಳೆದ ವರ್ಷ ಇಬ್ಬರು ವಿಚ್ಛೇದನ ಪಡೆದುಕೊಂಡರು. ಸುಸ್ರತ್ ಜಹಾನ್ ಅವರು ಗರ್ಭಿಣಿ ಎನ್ನುವ ವಿಚಾರ ಹೊರಬಂದಾಗ ಅದಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಅವರ ಪತಿ ನಿಖಿಲ್ ಹೇಳಿಕೆ ನೀಡಿದ್ದರು, ಈ ಹೇಳಿಕೆ ದೊಡ್ಡದಾಗಿ ಸುದ್ದಿಯಾಗಿತ್ತು. ನುಸ್ರತ್ ಅವರು ಬಿಜೆಪಿ ನಾಯಕ ಯಶ್ ದಾಸ್ ಗುಪ್ತ ಅವರೊಡನೆ ಡೇಟ್ ಮಾಡುತ್ತಿದ್ದರು ಎಂದು ಸಹ ವರದಿಯಾಗಿದೆ. ಇನ್ನು ಕಳೆದ ವರ್ಷ ಸೆಪ್ಟೆಂಬರ್ ತಿಂಗಳ 26ರಂದು ಕೋಲ್ಕತ್ತಾದ ಭಾಗೀರಥಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು ನುಸ್ರತ್. ಮಗುವಿನ ತಂದೆಯ ಹೆಸರನ್ನು ದೆಬಾಶಿಷ್ ಗುಪ್ತ ಎಂದು ಬರೆಸಿದ್ದರು.
ಮಗುವಿನ ವಿಚಾರದಲ್ಲಿ ತಾನು ತೆಗೆದುಕೊಂಡ ನಿರ್ಧಾರ ವಿವೇಕದಿಂದ ಕೂಡಿದೆ, ತಾನು ಯಾವ ತಪ್ಪನ್ನು ಮಾಡಿಲ್ಲ. ತನ್ನ ನಿರ್ಧಾರದ ಬಗ್ಗೆ ತನಗೆ ಹೆಮ್ಮೆ ಇದೆ. ತನ್ನ ಮಗುವಿಗೆ ತಂದೆ ಇದ್ದಾರೆ ಎಂದು ಹೇಳಿಕೊಂಡಿದ್ದರು ನುಸ್ರತ್. ಹಾಗೂ ನಿಖಿಲ್ ಜೈನ್ ಅವರೊಡನೆ ನಡೆದಿದ್ದ ಮದುವೆ ಭಾರತದ ಕಾನೂನಿನ ಪ್ರಕಾರ ಮಾನ್ಯವಲ್ಲ ಎಂದು ಸಹ ಹೇಳಿಕೆ ನೀಡಿದ್ದರು. ಸೆಲೆಬ್ರಿಟಿಗಳ ಜೀವನದ ಬಗ್ಗೆ ಚರ್ಚೆಗಳು ನಡೆಯುವುದು ಸಾಮಾನ್ಯ. ಅದೇ ರೀತಿ ನುಸ್ರತ್ ಅವರ ಬಗ್ಗೆ ಸಹ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
Comments are closed.