ಪಿಎಂ ಮೋದಿ ಅವರು ಮತ್ತು ಕಿಂಗ್ ಕೋಹ್ಲಿ ಅವರಲ್ಲಿದೆ ಒಂದು ಸಾಮ್ಯತೆ.. ಟ್ರೆಂಡ್ ಆಗಿರುವ ಈ ವಿಚಾರ ಏನು ಗೊತ್ತೇ?
ನಮ್ಮ ದೇಶದ ಪ್ರಮುಖ ವ್ಯಕ್ತಿಗಳು, ದೊಡ್ಡ ಅಭಿಮಾನಿ ಬಳಗ ಹೊಂದಿರುವವರು ಹಾಗೂ ಪ್ರಭಾವಿ ಶಾಲಿ ವ್ಯಕ್ತಿಗಳಾಗಿ ಗುರುತಿಸಿಕೊಂಡಿರುವವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಕ್ರಿಕೆಟ್ ಲೋಕದ ಸಾಮ್ರಾಟ್ ವಿರಾಟ್ ಕೋಹ್ಲಿ ಅವರು. ಇದೀಗ ಇವರಿಬ್ಬರ ನಡುವೆ ಒಂದು ವಿಚಾರದಲ್ಲಿ ಸಾಮ್ಯತೆ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ದೊಡ್ಡದಾಗಿ ಚರ್ಚೆಯಾಗುತ್ತಿದೆ. ಇವರಿಬ್ಬರ ನಡುವೆ ಸಾಮ್ಯತೆ ಮೂಡಿರುವುದು ಗಡ್ಡದ ವಿಚಾರದಲ್ಲಿ. ಇದೀಗ ವಿರಾಟ್ ಕೋಹ್ಲಿ ಮತ್ತು ನರೇಂದ್ರ ಮೋದಿ ಅವರ ಗಡ್ಡದ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಯಾಗುತ್ತಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಎರಡು ವರ್ಷಗಳಿಂದ ಕರೊನಾ ಲಾಕ್ ಡೌನ್ ಸಮಯದಲ್ಲಿ ಉದ್ದನೆಯ ಗಡ್ಡ ಬಿಟ್ಟು ಗಮನ ಸೆಳೆದಿದ್ದ ಮೋದಿ ಅವರು ಇದೀಗ ತಮ್ಮ ಗಡ್ಡವನ್ನು ಟ್ರಿಮ್ ಮಾಡಿ, ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೋದಿ ಅವರ ಈ ಹೊಸ ಲುಕ್ ಜನರ ಗಮನ ಸೆಳೆಯುತ್ತಿದೆ. ಮೋದಿ ಅವರು ತಮ್ಮ ಲುಕ್ಸ್ ಮತ್ತು ಹೇರ್ ಸ್ಟೈಲ್ ಬಗ್ಗೆ ಗಮನ ಹರಿಸುತ್ತಾರೆ, ಇದರ ಬಗ್ಗೆ ಹಲವು ಬಾರಿ ಚರ್ಚೆ ಸಹ ಆಗಿದೆ. ಪ್ರಸ್ತುತ ಮೋದಿ ಅವರ ಹೊಸ ಲುಕ್ ಸಹ ಚರ್ಚೆಯಾಗುತ್ತಿದೆ. ಇದೀಗ ಮೋದಿ ಅವರು ತಮ್ಮ ಕೆನ್ನೆಯ ಬಳಿ ಇರುವ ಗಡ್ಡವನ್ನು ಬಹುತೇಕ ಟ್ರಿಮ್ ಮಾಡಿ, ಗಲ್ಲದ ಬಳಿ ಇರುವ ಗಡ್ಡವನ್ನು ಸ್ವಲ್ಪ ಉದ್ದವಾಗಿ ಬಿಟ್ಟಿದ್ದಾರೆ. ಈ ಹೊಸ ಲುಕ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ವಿರಾಟ್ ಕೋಹ್ಲಿ ಅವರು ಸಹ ಇದೇ ರೀತಿಯ ಗಡ್ಡದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವಿರಾಟ್ ಕೋಹ್ಲಿ ಅವರು ಪ್ರಸ್ತುತ ಐಪಿಎಲ್ ಪಂದ್ಯಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕ್ರಿಕೆಟ್ ಲೋಕದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ವಿರಾಟ್ ಕೋಹ್ಲಿ ಅವರು ತಮ್ಮ ಸ್ಟೈಲ್ ಮೂಲಕ ಹೊಸ ಟ್ರೆಂಡ್ ಸೃಷ್ಟಿಸುತ್ತಾರೆ. ಅನೇಕ ರೀತಿಯ ಗಡ್ಡಗಳನ್ನು ಬಿಟ್ಟು ಗಮನ ಸೆಳೆದಿದ್ದಾರೆ ವಿರಾಟ್. ಪ್ರಸ್ತುತ ಮೋದಿ ಅವರು ಮತ್ತು ವಿರಾಟ್ ಕೋಹ್ಲಿ ಅವರು ಒಂದೇ ರೀತಿ ಗಡ್ಡ ಬಿಟ್ಟಿರುವುದು ಜನರಲ್ಲಿ ಚರ್ಚೆಗೆ ಕಾರಣವಾಗಿದೆ.
Comments are closed.