Neer Dose Karnataka
Take a fresh look at your lifestyle.

ಸಮಂತಾ ರವರ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಒಂದು ಪೋಸ್ಟ್ ಹಾಕಲು ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

ನಟಿ ಸಮಂತಾ ರುತ್ ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್. ಅನೇಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ ನಟಿ ಸಮಂತಾ. ವಿಚ್ಛೇದನವಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಅವರು ಬಹಳಷ್ಟು ಪೋಸ್ಟ್ ಗಳನ್ನು ಶೇರ್ ಮಾಡುತ್ತಾರೆ. ಕೆಲವೊಮ್ಮೆ ತಮ್ಮ ದಿನನಿತ್ಯ ಚಟುವಟಿಕೆ ಬಗ್ಗೆ, ತಮ್ಮ ಮುದ್ದಿನ ಶ್ವಾನಗಳ ಬಗ್ಗೆ, ಕೆಲವೊಮ್ಮೆ ಆಧ್ಯಾತ್ಮಿಕತೆ ಕುರಿತ ಪೋಸ್ಟ್ ಗಳು, ಬುದ್ಧಿವಾದ ಹೇಳಿದಂತಹ ಪೋಸ್ಟ್ ಗಳು ಹೀಗೆ ಅನೇಕ ವಿಷಯಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಾರೆ. ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ ಸಮಂತಾ ಅವರು ಎಷ್ಟು ಹಣ ಪಡೆಯುತ್ತಾರೆ ಗೊತ್ತಾ? ತಿಳಿದರೆ ನೀವು ಕೂಡ ಶಾಕ್ ಆಗುವುದು ಗ್ಯಾರಂಟಿ..

ನಟಿ ಸಮಂತಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವರಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಪುಷ್ಪ ಸಿನಿಮಾ ಉ ಅಂಟಾವ ಹಾಡಿನ ಬಳಿಕ ಸಮಂತಾ ಅವರ ಸಂಭಾವನೆ ದುಪ್ಪಟ್ಟಾಗಿದೆ. ಹಾಗೂ ಜನಪ್ರಿಯತೆ ಸಹ ಹೆಚ್ಚಾಗಿದೆ. ಸಮಂತಾ ಅವರು ಸಾಕಷ್ಟು ಬ್ರಾಂಡ್ ಎಂಡ್ರೋಸ್ಮೆಂಟ್ ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಸಮಂತಾ ಅವರು ಒಂದೊಂದು ಬ್ರಾಂಡ್ ಗಳ ಪೋಸ್ಟ್ ಗು ಇಂತಿಷ್ಟು ಎಂದು ಹಣ ಚಾರ್ಜ್ ಮಾಡುತ್ತಾರೆ. ಬ್ರಾಂಡ್ ಎಂಡೋರ್ಸ್ಮೆಂಟ್ ಗಳ ಪೋಸ್ಟ್ ಗಳಿಗೆ ಒಂದು ಪೋಸ್ಟ್ ಗೆ 20 ರಿಂದ 30 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ ನಟಿ ಸಮಂತಾ. ಇದಲ್ಲದೆ ಸಮಂತಾ ಅವರು ಬೇರೆ ಪೋಸ್ಟ್ ಗಳನ್ನು ಮಾಡಿದಾಗ, ನಟಿ ಸಮಂತಾ ಅವರು ಇದರ ಮೂರು ಪಟ್ಟು ಹೆಚ್ಚು ಹಣ ಪಡೆಯುತ್ತಾರೆ ಎನ್ನಲಾಗಿದೆ.

ಇನ್ಸ್ಟಾಗ್ರಾಮ್ ಪೋಸ್ಟ್ ಇಂದಲೂ ಸಮಂತಾ ಅವರು ಹಣ ಸಂಪಾದನೆ ಮಾಡುತ್ತಾರೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಸಾಕಷ್ಟು ಜಾಹೀರಾತುಗಳಲ್ಲಿ ಸಹ ಸಮಂತಾ ಅವರು ಕಾಣಿಸುಕೊಳ್ಳುತ್ತಾರೆ. ಅದರ ಮೂಲಕ್ಕ ಸಹ ಇವರಿಗೆ ಸಂಭಾವನೆ ಸಿಗುತ್ತದೆ. ಸಧ್ಯಕ್ಕೆ ಸಮಂತಾ ಅವರು ಸಿನಿಮಾ ಚಿತ್ರೀಕರಣಗಳಲ್ಲಿ ಪಾಲ್ಗೊಂಡಿದ್ದಾರೆ ನಟಿ ಸಮಂತಾ. ವಿಜಯ್ ದೇವರಕೊಂಡ ಜೊತೆ ಅಭಿನಯಿಸುತ್ತಿರುವ ಹೊಸ ಸಿನಿಮಾ ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ಹಾರಿದ್ದಾರೆ ನಟಿ ಸಮಂತಾ. ಇದಲ್ಲದೆ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಆಗೇಟ್ ತಿಂಗಳಿನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ ನಟಿ ಸಮಂತಾ ಇಷ್ಟು ಚಾರ್ಜ್ ಮಾಡುತ್ತಾರೆ ಎನ್ನುವುದು ನಿಜಕ್ಕು ಆಶ್ಚರ್ಯ ಪಡುವ ವಿಷಯ ಆಗಿದೆ.

Comments are closed.