ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ, ಟೀಮ್ ಇಂಡಿಯಾ ದಲ್ಲಿ ಸ್ಥಾನ ಕಳೆದುಕೊಳ್ಳಬಹುದಾದ ಒಂದು ಕಾಲದ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??
ಇನ್ನು 6 ತಿಂಗಳಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಅಕ್ಟೊಬರ್ ತಿಂಗಳಿನಲ್ಲಿ ಶುರುವಾಗುವ ಪಂದ್ಯಕ್ಕೆ, ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಬಲಿಷ್ಟ ಆಟಗಾರರು ಬೇಕಾಗಿದ್ದಾರೆ. ಹಾಗಾಗಿ ಬಿಸಿಸಿಐ ತಂಡ, ಹೆಡ್ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಅತ್ಯುತ್ತಮವಾದ ತಂಡ ರಚಿಸಲು, ಐಪಿಎಲ್ ಪಂದ್ಯಗಳ ಮೇಲೆ ಕಣ್ಣಿಟ್ಟಿದೆ. ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ತಂಡಕ್ಕೆ ಬಲಿಷ್ಠ ಆಟಗಾರರು ಬೇಕಿದ್ದು, ಐಪಿಎಲ್ ಇಂದ ಯುವಪ್ರತಿಭೆಗಳನ್ನು ಟೀಮ್ ಇಂಡಿಯಾಗೆ ಕರೆದುಕೊಳ್ಳುವ ಪ್ಲಾನ್ ಮಾಡಲಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಸರಣಿ ಪಂದ್ಯಗಳು ಶುರುವಾಗಲಿದೆ. ದಕ್ಷಿಣ ಆಫ್ರಿಕಾ, ಐರ್ಲೆಂಡ್ ಮತ್ತು ಇಂಗ್ಲೆಂಡ್ ತಂಡಗಳ ವಿರುದ್ಧ ಪಂದ್ಯಗಳು ನಡೆಯಲಿದೆ. ಟೀಮ್ ಇಂಡಿಯಾ ಸೆಲೆಕ್ಷನ್ ಗಾಗಿ ಎಲ್ಲರ ಕಣ್ಣುಗಳು ಐಪಿಎಲ್ ಪಂದ್ಯಗಳ ಮೇಲಿರುವಾಗ ಕಳಪೆ ಫಾರ್ಮ್ ಇಂದಾಗಿ ಕೆಲವು ಆಟವಾರರು ಟೀಮ್ ಇಂಡಿಯಾ ಇಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದ್. ಆ ಆಟಗಾರರು ಯಾರು ಎಂದು ತಿಳಿಸುತ್ತೇವೆ ನೋಡಿ..
ಇಶಾನ್ ಕಿಶನ್ :- ಇಶಾನ್ ಕಿಶನ್ ಅವರು ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿದ್ದಾರೆ. ಈ ವರ್ಷದ ಐಪಿಎಲ್ ನಲ್ಲಿ ಆರಂಭಿಕ ಪಂದ್ಯಗಳಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 81 ರನ್ ಗಳು, ಹಾಗೂ ಅರ್.ಆರ್ ತಂಡದ ವಿರುದ್ಧ 43 ರನ್ ಗಳನ್ನು ಗಳಿಸಿದ್ದರು, ಆದರೆ ಮುಂದಿನ ಐದು ಪಂದ್ಯಗಳಲ್ಲಿ ಇವರು ಕಳಪೆ ಪ್ರದರ್ಶನ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟಿ20 ಪಂದ್ಯಗಳಲ್ಲಿ ಇಷಾನ್ ಅವರು 71 ರನ್ ಗಳಿಸಿದ್ದರು, ಆದರೆ ಸಂಜು ಸ್ಯಾಮ್ಸನ್ ಅವರು 244 ರನ್ ಗಳನ್ನು ಭಾರಿಸಿದ್ದರು, ಇವರ ಸ್ಟ್ರೈಕ್ ರೇಟ್, 168.28. ಹಾಗಾಗಿ ಇಶಾನ್ ಬದಲಾಗಿ ಸಂಜು ಸ್ಯಾಮ್ಸನ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ವಂಕಟೇಶ್ ಅಯ್ಯರ್ :- 2021ರಲ್ಲಿ ಕೆಕೆಆರ್ ತಂಡದ ವಿರುದ್ಧ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು ವೆಂಕಟೇಶ್ ಅಯ್ಯರ್. ಆದರೆ ಈ ವರ್ಷ ಇವರು ಫಾರ್ಮ್ ಕಳೆದುಕೊಂಡಿದ್ದು, ಕೆಕೆಆರ್ ತಂಡ ಆರ್.ಆರ್ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ ಇವರು ಪ್ಲೇಯಿಂಗ್ 11 ಟೀಮ್ ನಲ್ಲಿ ಸ್ಥಾನ ಕಳೆದುಕೊಂಡರು. ಇವರು ಕಳೆದ ವರ್ಷ ಇಂಟರ್ನ್ಯಾಷನಲ್ ಕ್ರಿಕೆಟ್ ಪಂದ್ಯಗಳಿವೆ ಎಂಟ್ರಿ ಕೊಟ್ಟರು, 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇವರು ಆಡಿರುವ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ್ ನೀಡಿ, ಟೀಮ್ ಇಂಡಿಯಾಗೆ ಸೆಲೆಕ್ಟ್ ಆಗುತ್ತಾರೆ, ಹಾರ್ದಿಕ್ ಪಾಂಡ್ಯ ಸ್ಥಾನ ತುಂಬುತ್ತಾರೆ ಎನ್ನಲಾಗಿತ್ತು. ಆದರೆ 2022ರ ಐಪಿಎಲ್ ನಲ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿದ್ದು, ಅವರೆ ಟೀಮ್ ಇಂಡಿಯಾಗೆ ಮರಳುವ ಸಾಧ್ಯತೆ ಹೆಚ್ಚಾಗಿದೆ.
ಶಾರ್ದಲ್ ಠಾಕೂರ್ :- ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಈ ವರ್ಷ ಆಡಿರುವ 9 ಪಂದ್ಯಗಲ್ಲಿ, 7 ವಿಕೆಟ್ ಗಳನ್ನು ಪಡೆದಿದ್ದಾರೆ. ಲಕ್ನೌ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ 40 ರನ್ ಗಳನ್ನು ನೀಡಿ, ಮೂರ್ಜ್ ವಿಕೆಟ್ ಗಳನ್ನು ಪಡೆದಿದ್ದರು, ಈ ವರ್ಷ ಇವರು ಪಡೆದ ಹೆಚ್ಚಿನ ವಿಕೆಟ್ಸ್ ಇದು.ಬ್ಯಾಟಿಂಗ್ ನಲ್ಲಿ ಸಹ ಈವರೆಗೂ 88 ರನ್ ಗಳನ್ನು ಗಳಿಸಿದ್ದಾರೆ. 2021ರ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೀಸಲು ಆಟಗಾರನನ್ನಾಗಿ ಶಾರ್ದಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ನಂತರ ಇವರ ಬದಲು ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಲಾಯಿತು. ಪ್ರಸ್ತುತ ವೇಗಿ ಬೌಲರ್ ಗಳು ಸಾಕಷ್ಟು ಇರುವ ಕಾರಣ, ಶಾರ್ದಲ್ ಠಾಕೂರ್ ಅವರು ಟೀಮ್ ಇಂಡಿಯಾದ ಲ್ಲಿರುವ ಅವಕಾಶ ಕಳೆದುಕೊಳ್ಳುಬಹುದು.
ಋತುರಾಜ್ ಗಾಯಕ್ವಾಡ್ :- ಐಪಿಎಲ್ ನಲ್ಲಿ ಸಿ.ಎಸ್.ಕೆ ತಂಡದ ಆರಂಭಿಕ ಬ್ಯಾಟ್ಸ್ಮನ್ ಇವರು. ಕಳೆದ ವರ್ಷ ಗಾಯಕ್ವಾಡ್ ಅವರು ಸಿ.ಎಸ್.ಕೆ ತಂಡದ ಪರವಾಗಿ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಈ ವರ್ಷ ನಿರೀಕ್ಷೆಯ ಮಟ್ಟವನ್ನು ತಲುಪಿಲ್ಲ ಗಾಯಕ್ವಾಡ್. 8 ಇನ್ನಿಂಗ್ಸ್ ಗಳಲ್ಲಿ 236 ರನ್ ಗಳನ್ನು ಗಳಿಸಿದ್ದಾರೆ. ಆದರೆ ಎಸ್.ಆರ್.ಹೆಚ್ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ 99 ರನ್ ಗಳಿಸಿದ್ದರು. ಕಳೆದ ವರ್ಷದ ಪ್ರದರ್ಶನದಿಂದ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದರು ಗಾಯಕ್ವಾಡ್. ಮುಂದಿನ ಪಂದ್ಯಗಳಲ್ಲಿ ಇವರು ಹೇಗೆ ಕಂಬ್ಯಾಕ್ ಮಾಡುತ್ತಾರೆ ಎನ್ನುವುದರ ಮೇಲೆ ಟೀಮ್ ಇಂಡಿಯಾ ಇವರನ್ನು ಆಯ್ಕೆ ಮಾಡಿಕೊಳ್ಳುತ್ತಾ ಎನ್ನುವುದು ನಿರ್ಧಾರ ಆಗಲಿದೆ.
ಭುವನೇಶ್ವರ್ ಕುಮಾರ್ :- ಈ ವರ್ಷ ಇವರು ಐಪಿಎಲ್ ನಲ್ಲಿ ಎಸ್.ಆರ್.ಹೆಚ್ ತಂಡದ ಪರವಾಗಿ ಆಡುತ್ತಿದ್ದಾರೆ. ಇದುವರೆಗೂ ನಡೆದಿರುವ ಪಂದ್ಯಗಳಲ್ಲಿ, 7.52 ಎಕಾನಮಿಯಲ್ಲಿ 9 ವಿಕೆಟ್ ಉರುಳಿಸಿದ್ದಾರೆ. 2021ರಲ್ಲಿ ಸಹ ಇವರು ಟಿ20 ವಿಶ್ವಕಪ್ ಗೆ ಟೀಮ್ ನಲ್ಲಿದ್ದರು. ಆದರೆ ಇವರು ಅಡಿದ್ದು ಒಂದೇ ಒಂದು ಪಂದ್ಯವನ್ನು ಮಾತ್ರ. ಇದಾದ ಬಳಿಕ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳನ್ನು ಸಹ ಆಡಿದ್ದರು. ಇಂಡಿಯನ್ ಟೀಮ್ ನಲ್ಲಿ ಈಗಾಗಲೇ ಮೊಹಮ್ಮದ್ ಶಮ್ಮಿ ಮತ್ತು ಜಸ್ಪ್ರೀತ್ ಬುಮ್ರ ಇದ್ದಾರೆ,ಹಾಗೂ ಉಮ್ರಾನ್ ಮಲಿಕ್ ಮತ್ತು ಟಿ ನಟರಾಜನ್ ಅವರ ಪ್ರದರ್ಶನ ಸಹ ಚೆನ್ನಾಗಿದೆ, ಹಾಗಾಗಿ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಇದೆ
Comments are closed.