ಕೆಜಿಎಫ್ ದಾಖಲೆ ಸೃಷ್ಟಿ ಮಾಡಲು ಅಡಿಪಾಯ ಹಾಕಿದ್ದು ನಾನೇ ಎಂದ ರವಿ ಚಂದ್ರನ್, ಅದೇಗೆ ಅಂತೇ ಗೊತ್ತೇ??
ಕೆಜಿಎಫ್2 ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಎನ್ನಿಸಿಕೊಂಡಿದೆ. ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿ ಮೂರು ವಾರ ಕಳೆದಿದ್ದರೂ ಸಹ, ಇಂದಿಗೂ ಕೆಜಿಎಫ್2 ಹವಾ ದೊಡ್ಡದಾಗಿಯೇ ಇದೆ. ಪ್ರಪಂಚಾದ್ಯಂತ ಸಿನಿಮಾದ ಕಲೆಕ್ಷನ್ 1000 ಕೋಟಿ ದಾಟಿದ್ದು, ಬಿಡುಗಡೆಯಾಗಿ 18 ದಿನಗಳು ಕಳೆದಿದ್ದರೂ ಸಹ ಈಗಲೂ ದಿನದ ಕಲೆಕ್ಷನ್ 32 ಕೋಟಿ ಇದೆ. ಎಲ್ಲಾ ಭಾಷೆಗಳಲ್ಲೂ ಕೆಜಿಎಫ್2 ಸಿನಿಮಾ ಹಣಗಳಿಕೆ ಮತ್ತು ಬೇರೆ ಎಲ್ಲ ವಿಚಾರಗಳಲ್ಲು ದಾಖಲೆ ಬರೆದಿದೆ. ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾಗಿ ಇಂದು ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡುತ್ತಾ ಬಂದಿದೆ.
ಇದೀಗ ಕೆಜಿಎಫ್ ಸಿನಿಮಾ ಹೊಸ ವಿಚಾರ ಒಂದನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಿಳಿಸಿದ್ದಾರೆ. ರವಿಚಂದ್ರನ್ ಅವರು ಹೇಳುವ ಕೆಜಿಎಫ್ ಸಿನಿಮಾಗೆ ಫೌಂಡೇಶನ್ ಹಾಕಿಕೊಟ್ಟವರು ಅವರೇ ಅಂತೆ. ಅದು ಹೇಗೆ ? ಯಾವ ರೀತಿಯಲ್ಲಿ ಅಂತ ನಿಮಗೂ ಅನ್ನಿಸಬಹುದು.. ಅದಕ್ಕೂ ಸ್ವತಃ ರವಿಚಂದ್ರನ್ ಅವರೇ ಉತ್ತರ ಕೊಟ್ಟಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಕ್ರೇಜಿಸ್ಟಾರ್ ಕೆಜಿಎಫ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. “ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ದಾಖಲೆ ಸೃಷ್ಟಿಸಲು ಸಧ್ಯ. ಇಂದು ಎಲ್ಲರೂ ಕೆಜಿಎಫ್ ದಾಖಲೆ ಬಗ್ಗೆ ಮಾತಾಡ್ತೀವಿ. ಇಂದು ಕೆಜಿಎಫ್2 ಸಿನಿಮಾ ದಾಖಲೆ ಮಾಡಿರುವುದು ನಿಜ..ಆದರೆ ಅದಕ್ಕೆ ಫೌಂಡೇಶನ್ ಹಾಕಿದ್ದು ಯಾರು ಗೊತ್ತಾ? ಫೌಂಡೇಶನ್ ಹಾಕಿ ಕೊಟ್ಟಿದ್ದು ನಾನೇ.. ‘ಶಾಂತಿ ಕ್ರಾಂತಿ’ ಸಿನಿಮಾ ಫೌಂಡೇಶನ್ ಆಯ್ತು. ಆ ರೆಕಾರ್ಡ್ ಬ್ರೇಕ್ ಮಾಡಲು 30 ವರ್ಷ ಬೇಕಾಯ್ತು.
ಈಗ ಎಲ್ಲರೂ ಕೆಜಿಎಫ್ ದಾಖಲೆ ಮುರಿಯಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಚಿತ್ರರಂಗದ ಎಲ್ಲರು ಇದರ ಬಗ್ಗೆ ಚರ್ಚೆ ಮಾಡಬೇಕು. ಈಗ ಕೆಜಿಎಫ್ ಸಿನಿಮಾ ಎಲ್ಲೆಲ್ಲೂ ದೊಡ್ಡ ಕಲೆಕ್ಷನ್ ಮಾಡ್ತಾ ಇದೆ. 1988ರಲ್ಲಿ ಫಿಲ್ಮ್ ಚೇಂಬರ್ ನಲ್ಲಿ ದೊಡ್ಡ ಗಲಾಟೆಯೇ ಆಗಿತ್ತು. ಬಿಗ್ ಬಜೆಟ್ ಸಿನಿಮಾಗು ಬೇರೆ ಸಿನಿಮಾಗು ಒಂದೇ ರೇಟ್ ಆಫ್ ಅಡ್ಮಿಷನ್ ಇದೆ. ನನ್ನ ಸಿನಿಮಾಗೆ ಜಾಸ್ತಿ ಮಾಡಿ ಎಂದು ಕೇಳಿದ್ದೇ, ಆದರೆ ಆಗ ಅದು ಸಾಧ್ಯ ಆಗಲಿಲ್ಲ. ಇಂದು ಕೆಜಿಎಫ್2 ಸಿನಿಮಾ ಅದನ್ನು ಮಾಡಿ ತೋರಿಸಿದೆ..” ಎಂದಿದ್ದಾರೆ ಕ್ರೇಜಿಸ್ಟಾರ್. ಶಾಂತಿ ಕ್ರಾಂತಿ ಸಿನಿಮಾ ಆಗಿನ ಕಾಲದಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ನಾಲ್ಕು ಭಾಷೆಗಳಲ್ಲಿ ಒಟ್ಟಿಗೆ ಚಿತ್ರೀಕರಣಗೊಂಡು ಬಿಡುಗಡೆ ಆಗಿತ್ತು. ಆದರೆ ಸಿನಿಮಾ ಅಂದುಕೊಂಡ ಹಾಗೆ ಲಾಭ ಮಾಡಲಿಲ್ಲ. ಹಣ ಗಳಿಕೆ ವಿಚಾರ ಹೊರತುಪಡಿಸಿ ನೋಡಿದರೆ ಈ ಸಿನಿಮಾ ಒಂದು ಹಿಸ್ಟರಿ ಕ್ರಿಯೇಟ್ ಮಾಡಿತ್ತು.
Comments are closed.