ಬಿಜೆಪಿ ಪಕ್ಷಕ್ಕೆ ಮೂರು ಷರತ್ತು ಗಳನ್ನು ವಿಧಿಸಿದ ಸುಮಲತಾ, ಯಾವ್ಯಾವು ಗೊತ್ತೇ?? ಎಲ್ಲಾ ಷರತ್ತುಗಳನ್ನು ಒಪ್ಪಿಕೊಳ್ಳುತ್ತಾ ಬಿಜೆಪಿ??
ಕರ್ನಾಟಕದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಎಲೆಕ್ಷನ್ ನಲ್ಲಿ ನಿಂತ ಸುಮಲತಾ ಅವರನ್ನು ತಮ್ಮ ಪಾರ್ಟಿಗೆ ಸೇರಿಸಿಕೊಳ್ಳಬೇಕು ಎಂದು ಕಮಲನಾಥ್ ಅವರು ಪ್ರಯತ್ನ ಮಾಡುತ್ತಿದ್ದಾರಾ? ತಾನು ಪಕ್ಷಕ್ಕೆ ಸೇರಿಕೊಳ್ಳಲು ಸುಮಲತಾ ಅವರು ಕೆಲವು ಕಂಡೀಷನ್ ಗಳನ್ನು ಹಾಕಿದ್ದಾರಾ? ಈ ಪ್ರಶ್ನೆಗಳಿಗೆ ಹೌದು ಎನ್ನುವ ಉತ್ತರ ಸಿಕ್ಕಿದೆ. ಕಳೆದ ಎಲೆಕ್ಷನ್ ನಲ್ಲಿ ಮಂಡ್ಯ ಜಿಲ್ಲೆಯಿಂದ ಎಂಪಿ ಎಲೆಕ್ಷನ್ ಗೆ ಕಾಂಗ್ರೆಸ್ ಪಕ್ಷ, ಹಾಗೂ ಜೆಡಿಎಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಎಲೆಕ್ಷನ್ ಅಖಾಡಕ್ಕೆ ಇಳಿದಿದ್ದರು. ಆ ಸಮಯದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಟಿ ಸುಮಲತಾ ಅವರಿಗೆ ಬಿಜೆಪಿ ಪಕ್ಷದಿಂದ ಬೆಂಬಲ ಸಿಕ್ಕಿತ್ತು.
ಸುಮಲತಾ ಅಗರಿಗೋಸ್ಕರ ಮಂಡ್ಯದಲ್ಲಿ ಅಂದಿನ ಎಲೆಕ್ಷನ್ ಸಮಯದಲ್ಲಿ ಬಿಜೆಪಿ ಪಕ್ಷದಿಂದ ಯಾರು ಎಲೆಕ್ಷನ್ ಗೆ ನಿಲ್ಲಲಿಲ್ಲ, ಇದರಿಂದಾಗಿ ಸುಮಲತಾ ಅವರು ವಿಜಯ ಸಾಧಿಸಿದರು. ಇನ್ನು 2023 ರಲ್ಲಿ ಕರ್ನಾಟಕದಲ್ಲಿ ಅಸೆಂಬ್ಲಿ ಎಲೆಕ್ಷನ್ ನಡೆಯಲಿದೆ. ಹಾಗಾಗಿ ಮಂಡ್ಯ ಜಿಲ್ಲೆಯಲ್ಲಿ 4 ಸ್ಥಾನಗಳನ್ನಾದರು ಗೆಲ್ಲಲೇಬೇಕು ಎಂದು ಕಮಲನಾಥ್ ಅವರು ಅಂದುಕೊಂಡಿದ್ದಾರೆ. ಹಾಗಾಗಿ ಸುಮಲತಾ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಇದು ಒಳ್ಳೆಯ ಸಮಯ ಎಂದು ಅವರು ಭಾವಿಸಿದ್ದಾರೆ. ಸುಮಲತಾ ಅವರು ಬಿಜೆಪಿಗೆ ಸೇರಿಕೊಳ್ಳುತ್ತಾರೆ ಎನ್ನುವ ಬಗ್ಗೆ ಧನಾತ್ಮಕವಾಗಿಯೇ ಇದೆ..
ಬಿಜೆಪಿ ಪಕ್ಷಕ್ಕೆ ಸೇರಲು, ಸುಮಲತಾ ಅವರು 3 ಕಂಡೀಷನ್ ಗಳನ್ನು ಹಾಕಿದ್ದಾರೆ ಎನ್ನುವುದು ಸಧ್ಯದ ಸಮಾಚಾರ. ಬಿಜೆಪಿ ಪಕ್ಷಕ್ಕೆ ಸೇರಬೇಕು ಅಂದ್ರೆ, ತನಗೆ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ, ತಮ್ಮ ಮಗನಿಗೆ ಮದ್ದೂರಿನಲ್ಲಿ ಎಲೆಕ್ಷನ್ ಗೆ ನಿಲ್ಲಲು ಟಿಕೆಟ್ ಮತ್ತು ಮಂಡ್ಯ ಜಿಲ್ಲೆಯ ಎಲೆಕ್ಷನ್ ಟಿಕೆಟ್ ಗಳು ಮುಕ್ತವಾಗಿರಬೇಕು ಎಂದು ಮೂರು ಕಂಡೀಷನ್ ಗಳನ್ನು ಹಾಕಿದ್ದಾರೆ ಸುಮಲತಾ. ಇದೀಗ ಈ ವಿಷಯ ದೊಡ್ಡದಾಗಿ ಸುದ್ದಿಯಾಗುತ್ತಿದ್ದು, ಸುಮಲತಾ ಅವರ ಮೂರು ಕಂಡೀಷನ್ ಗೆ ಬಿಜೆಪಿ ಸರ್ಕಾರ ಒಪ್ಪಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.
Comments are closed.