ಮುಂಬೈ ನಲ್ಲಿ ಹೊಸ ಮನೆ ಖರೀದಿ ಮಾಡಿದ ಪೃಥ್ವಿ ಶಾ, ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ?? ಎಷ್ಟು ವರ್ಷದ ದುಡಿಮೆ ಗೊತ್ತೇ?
ಐಪಿಎಲ್ ನಲ್ಲಿ ಬಹುಬೇಡಿಕೆ ಇರುವ ಆಟಗಾರರಲ್ಲಿ ಒಬ್ಬರು ಪೃಥ್ವಿ ಶಾ. ಪ್ರಸ್ತುತ ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಐಪಿಎಲ್ ನಲ್ಲಿ ಆಟವಾಡುತ್ತಿದ್ದಾರೆ. ಇವರ ಬ್ಯಾಟಿಂಗ್ ಪ್ರದರ್ಶನ ಹೇಳಿಕೊಳ್ಳುವಷ್ಟರ ಮಟ್ಟಿಗೆ ಇಲ್ಲದೆ ಹೋದರು ಇವರಿಗೆ ಐಪಿಎಲ್ ನಲ್ಲಿರುವ ಬೇಡಿಕೆ ಕಡಿಮೆಯಾಗಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಪೃಥ್ವಿ ಶಾ ಅವರು ಮುಂಬೈ ಮಹಾನಗರದಲ್ಲಿ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದು,ಐಪಿಎಲ್ ನಲ್ಲಿ ಇದುವರೆಗೂ ಗಳಿಸಿದ ಪೂರ್ತಿ ಹಣವನ್ನು ಮನೆಗೆ ಹಾಕಿದ್ದಾರೆ ಪೃಥ್ವಿ ಶಾ..
ಮುಂಬೈ ಮಹಾನಗರದಲ್ಲಿ ಸ್ವಂತ ಮನೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಸಾಮಾನ್ಯ ಜನರಿಗಾಗಲಿ ಅಥವಾ ಸೆಲೆಬ್ರಿಟಿಗಳಿಗೆ ಆಗಲಿ ಮುಂಬೈನಲ್ಲಿ ಮನೆ ಕೊಂಡುಕೊಳ್ಳುವುದು ಬಹಳ ಕಷ್ಟದ ವಿಚಾರ. ಅಂಥದ್ರಲ್ಲಿ ಪೃಥ್ವಿ ಶಾ ಅವರು ಇದೀಗ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಕಳೆದ ಐದು ವರ್ಷಗಳ ಐಪಿಎಲ್ ಆದಾಯವನ್ನು ಪೂರ್ತಿ ಮನೆಗೆ ಇನ್ವೆಸ್ಟ್ ಮಾಡಿದ್ದಾರೆ. ಇದೀಗ ಬಾಂದ್ರಾದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ. 81 Aureate ವಸತಿ ಗೋಪುರದ 8ನೇ ಅಂತಸ್ತಿನಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಪೃಥ್ವಿ ಶಾ..ಬಾಂದ್ರಾದಲ್ಲಿ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳ ಮನೆ ಇದೆ..

ಪೃಥ್ವಿ ಶಾ ಅವರು ಖರೀದಿ ಮಾಡಿರುವ ಅಪಾರ್ಟ್ಮೆಂಟ್ 2209 ಅಡಿ ಚದರ ಕಾರ್ಪೆಟ್ ಪ್ರದೇಶ ಇದೆ, 1654 ಮೀಟರ್ ಟೆರೇಸ್ ಇದೆ. ಮೂರು ಕಾರ್ ಪಾರ್ಕ್ ಮಾಡಲು ಸ್ಲಾಟ್ ಇದೆ ಎನ್ನಲಾಗಿದೆ. ಮನೆ ಖರೀದಿ ಮಾಡುವಾಗ 52.50 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಿದ್ದರು, ರಿಜಿಸ್ಟ್ರೇಷನ್ ನಂತರ 10.5ಕೋಟಿ ರೂಪಾಗಿ ಪಾವತಿ ಮಾಡಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಕಟ್ಟಡವನ್ನು ಪಿರಮಿಡ್ ಡೆವಲಪರ್ಸ್ ಮತ್ತು ಅಲ್ಟ್ರಾ ಲೈಫ್ ಸ್ಪೇಸ್ ಸಂಸ್ಥೆ ನಿರ್ಮಾಣ ಮಾಡಿದೆ. ಪೃಥ್ವಿ ಶಾ ಅವರನ್ನು ಮೊದಲ ಬಾರಿಗೆ 2018ರಲ್ಲಿ 1.2ಕೋಟಿ ಕೊಟ್ಟು ಐಪಿಎಲ್ ನಲ್ಲಿ ಪೃಥ್ವಿ ಶಾ ಅವರನ್ನು ಖರೀದಿ ಮಾಡಲಾಗಿತ್ತು. ಈಗ ಇವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಆಟಗಾರ ಆಗಿದ್ದಾರೆ.