ರಾಧಾ ರಮಣ ಧಾರಾವಾಹಿ ನಟಿ ಮಾನ್ಸಿ ಜೋಶಿ ಈಗ ಫುಲ್ ಬ್ಯುಸಿ.. ಕಾರಣ ಏನು ಗೊತ್ತೇ??
ಕನ್ನಡ ಕಿರುತೆರೆಯಲ್ಲಿ ಖ್ಯಾತಿ ಪಡೆದುಕೊಂಡಿರುವವರು ನಟಿ ಮಾನ್ಸಿ ಜೋಶಿ. ಇಂದು ಇವರು ಕನ್ನಡ ಧಾರಾವಾಹಿಗಳು ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಧಾರಾವಾಹಿಯಲ್ಲಿ ಸಹ ನಟಿಸಿ, ಸೈ ಎನ್ನಿಸಿಕೊಂಡಿದ್ದಾರೆ ಮಾನ್ಸಿ ಜೋಶಿ. ಕನ್ನಡ ಕಿರುತೆರೆಗೆ ಬಿಳಿ ಹೆಂಡ್ತಿ ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟರು. ಮೊದಲಿಗೆ ಇವರು ಯೂಟ್ಯೂಬ್ ವೆಬ್ ಸೀರೀಸ್ ನಲ್ಲಿ ನಟಿಸಿದ್ದರು, ಅದರ ಮೂಲಕ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮಾನ್ಸಿ ಜೋಶಿ ಅವರು ರಾಧಾ ರಮಣ ಧಾರಾವಾಹಿಯಲ್ಲಿ ರಮಣ್ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ಇವರ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಇಂದು ತಿಳಿಸುತ್ತೇವೆ..
ಮಾನ್ಸಿ ಜೋಶಿ ಅವರ ತಂದೆ ಸುಹಾಸ್ ಅವರು ಮೂಲತಃ ಧಾರವಾಡದವರು, ತಾಯಿ ಕುಂದಾಪುರದವರು. ಮದುವೆಯ ನಂತರ ಇವರಿಬ್ಬರು ಸಹ ಬೆಂಗಳೂರಿನಲ್ಲಿ ನೆಲೆಸಿದರು. ಹಾಗಾಗಿ ಮಾನ್ಸಿ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ಮಾನ್ಸಿ ಜೋಶಿ ಅವರಿಗೆ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಚಿಕ್ಕ ವಯಸ್ಸಿನಿಂದಲೂ ಮಾನ್ಸಿ ಡ್ಯಾನ್ಸ್ ಕಲಿಯುತ್ತಿದ್ದು, ತಮ್ಮದೇ ಆದ ಒಂದು ನೃತ್ಯಶಾಲೆ ತೆರೆಯಬೇಕು ಎನ್ನುವ ಕನಸು ಹೊಂದಿದ್ದಾರೆ. 250ಕ್ಕಿಂತ ಹೆಚ್ಚು ಡ್ಯಾನ್ಸ್ ಶೋಗಳನ್ನು ಸಹ ನೀಡಿದ್ದಾರೆ. ಡ್ಯಾನ್ಸ್ ಕಲಿಯುವ ಆಸಕ್ತಿ ಇರುವ ಎಲ್ಲರಿಗೂ ಡ್ಯಾನ್ಸ್ ಕಲಿಸುವ ಆಸೆ ಇವರದ್ದು.
ಬಿಳಿ ಹೆಂಡ್ತಿ ಧಾರಾವಾಹಿ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದ ಮಾನ್ಸಿ, ನಂತರ ಕಾಣಿಸಿಕೊಂಡಿದ್ದು ರಾಧಾ ರಮಣ ಧಾರಾವಾಹಿಯಲ್ಲಿ. ಜೀಕನ್ನಡ ವಾಹಿನಿಯ ಪಾರು ಧಾರಾವಾಹಿಯಲ್ಲಿ ನೆಗಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೇ ನಾಯಕಿ ಹೆಸರಿನ ಧಾರಾವಾಹಿಯಲ್ಲಿ ಸಹ ಮಾನ್ಸಿ ಅಬರು ಕಾಣಿಸಿಕೊಂಡಿದ್ದರು..ಕನ್ನಡದ ಕಸ್ತೂರಿ ನಿವಾಸ ಧಾರಾವಾಹಿಯ ತೆಲುಗು ರಿಮೇಕ್ ನಲ್ಲಿ ಸಹ ಮಾನ್ಸಿ ಜೋಶಿ ಅವರು ನಟಿಸುತ್ತಿದ್ದಾರೆ. ತಮಿಳಿನಲ್ಲಿ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಮಾನ್ಸಿ ಅವರು ಕೋವಿಡ್ ಕಾರಣದಿಂದ ಆ ಧಾರಾವಾಹಿಯಿಂದ ಹೊರಬಂದಿದ್ದರು.
Comments are closed.