ಕಿಚ್ಚನ ಅಭಿಮಾನಿಗಳಿಗೆ ಸರ್ಪ್ರೈಸ್?? ಈ ವರ್ಷದ ಬಿಗ್ ಬಾಸ್ ಆರಂಭವಾಗುವುದು ಯಾವಾಗ?? ಕಾದಿದೆಯೇ ಬಿಗ್ ಸರ್ಪ್ರೈಸ್??
ನಟ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಈಗ ಒಂದು ಸಿಹಿ ಸುದ್ದಿ ಕಾದಿದೆ. ಕನ್ನಡ ಕಿರುತೆರೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಕಾರ್ಯಕ್ರಮ ಬಿಗ್ ಬಾಸ್ ಕನ್ನಡ. ಈ ಶೋ ಬಗ್ಗೆ ಎಲ್ಲರಿಗೂ ಒಂದು ರೀತಿಯ ಆಕರ್ಷಣೆ. ಈ ಶೋನ ಪ್ರಮುಖ ಆಕರ್ಷಣೆ ಕಿಚ್ಚ ಸುದೀಪ್ ಅವರು. ಸುದೀಪ್ ಅವರ ನಿರೂಪಣೆ ನೋಡುವ ಸಲುವಾಗಿ ಸಾಕಷ್ಟು ಜನರು ಬಿಗ್ ಬಾಸ್ ಶೋ ಅನ್ನು ತಪ್ಪದೇ ನೋಡುತ್ತಾರೆ. ಕಳೆದ ಸೀಸನ್ ಕರೊನಾ ಇಂದಾಗಿ ಅರ್ಧಕ್ಕೆ ನಿಂತು, ಮತ್ತೆ ಶುರುವಾಗಿ, ಮುಕ್ತಾಯವಾಗಿತ್ತು. ಅದಾದ ಬಳಿಕ ವಿಗ್ ಬಾಸ್ ಮಿನಿ ಸೀಸನ್ ಸಹ ಶುರುವಾಗಿ, ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡಿತ್ತು. ಅದಾದ ಬಳಿಕ ಈಗ ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗುವುದು ಯಾವಾಗ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ..
ಬಿಗ್ ಬಾಸ್ ಶೋ ಬಗೆಗಿನ ಪ್ರತಿಯೊಂದು ವಿಷಯವು ಜನರಿಗೆ ಕುತೂಹಲ ಹೆಚ್ಚಿಸುತ್ತಿದೆ. ಪ್ರತಿ ಸೀಸನ್ ನಲ್ಲೂ ವಿಭಿನ್ನವಾಗಿ ವಿಶೇಷವಾಗಿ ವಿನ್ಯಾಸಗೊಳ್ಳುವ ಮನೆ ವೀಕ್ಷಕರನ್ನು ಅತಿಹೆಚ್ಚು ಆಕರ್ಷಿಸುತ್ತದೆ. ಹಾಗೆಯೇ ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಕುತೂಹಲ ಸಹ ಜನರಿಗೆ ಹೆಚ್ಚಾಗಿರುತ್ತದೆ. ಸಧ್ಯಕ್ಕೆ ಬಿಗ್ ಬಾಸ್ ಕನ್ನಡ ಸೀಸನ್ 9ರ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ವರ್ಷ ಅಕ್ಟೋಬರ್ ತಿಂಗಳಿನಿಂದ ಶುರುವಾಗಲಿದೆ ಬಿಗ್ ಬಾಸ್. ಅಕ್ಟೋಬರ್ ಮೊದಲ ವಾರದಲ್ಲೇ ಶೋ ಲಾಂಚ್ ಆಗಲಿದ್ದು, ಸುದೀಪ್ ಅವರ ಸಾರಥ್ಯದಲ್ಲೇ ಶೋ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ.
ಈ ಸೀಸನ್ ನಲ್ಲಿ ಬಹಳ ರಗಡ್ ಆಗಿ ಮೂಡಿ ಬರಲಿದೆಯಂತೆ ಬಿಗ್ ಬಾಸ್. ಹಾಗಾಗಿ ಮನೆಯ ವಿನ್ಯಾಸ ಸಹ ಬಹಳ ವಿಭಿನ್ನವಾಗಿ ನಡೆಯುತ್ತಿದೆ. ತಯಾರಿಗಳು ಈಗಾಗಲೇ ಶುರುವಾಗಿದ್ದು, ಬಿಗ್ ಮನೆಗೆ ಬರುವ ಸ್ಪರ್ಧಿಗಳ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ. ಈ ಬಾರಿ ಸೆಲೆಬ್ರಿಟಿಗಳನ್ನು ಮಾತ್ರ ಮನೆಯೊಳಗೆ ಕಳಿಸುತ್ತಾರಾ ಅಥವಾ ಕಾಮನ್ ಮ್ಯಾನ್ ಗು ಅವಕಾಶ ಇದೆಯಾ ಎಂದು ಕಾದು ನೋಡಬೇಕಿದೆ.
Comments are closed.