ಪ್ರೀತಿ ಅಭಿಮಾನ ಎಂದರೆ ಮಾಯೆ: ಪೂಜಾ ರವರ ಮೊದಲಿಗೆ ಹಾರ್ಟ್ ಬ್ರೇಕ್ ಆಗಿದ್ದು ಯಾವ ವಯಸ್ಸಿನಲ್ಲಿ ಅಂತೇ ಗೊತ್ತೇ?? ಅದು ಯಾಕೆ ಗೊತ್ತೇ??
ಟಾಲಿವುಡ್ ನ ಟಾಪ್ ನಟಿಯರ ಲಿಸ್ಟ್ ನಲ್ಲಿ ಪೂಜಾ ಹೆಗ್ಡೆ ಸಹ ಟಾಪ್ ನಲ್ಲಿದ್ದಾರೆ. ಅಲಾ ವೈಕುಂಠ ಪುರಮೂಲೋ ಸಿನಿಮಾ ಮೂಲಕ ಪೂಜಾ ಹೆಗ್ಡೆ ಸ್ಟಾರ್ ಸ್ಟೇಟಸ್ ಪಡೆದುಕೊಂಡರು, ಅದಾದ ಬಳಿಕ ಅವರು ಹಿಂದಿರುಗಿ ನೋಡಿದ್ದೇ ಇಲ್ಲ..ಈ ಸಿನಿಮಾ ಇಂದ ಬುಟ್ಟಬೊಮ್ಮ ಅಂತಲೇ ಹೆಸರು ಪಡೆದು, ಪ್ರೇಕ್ಷಕರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಪೂಜಾ ಹೆಗ್ಡೆ, ಕೆಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೂ ಇವರೊಗೆ ಹೃತಿಕ್ ರೋಷನ್ ಅಂದ್ರೆ ತುಂಬಾ ಇಷ್ಟ. ಅವರ ಮೇಲೆ ಅಪಾರವಾದ ಅಭಿಮಾನ ಕೂಡ ಇತ್ತು. ಹೃತಿಕ್ ರೋಷನ್ ನಟಿಸಿದ ಕೋಯಿ ಮಿಲ್ ಗಯಾ ಸಿನಿಮಾ ಸಿನಿಮಾದ ಪ್ರೀಮಿಯರ್ ಗೆ ಪೂಜಾ ಕೂಡ ಅವಕಾಶ ಪಡೆದುಕೊಂಡು ಅಲ್ಲಿಗೆ ಹೋಗಿದ್ದರಂತೆ. ಆಗ ಪೂಜಾ ಅವರಿಗೆ 12 ವರ್ಷ. ಕೋಯಿ ಮಿಲ್ ಗಯಾ ಪ್ರೀಮಿಯರ್ ನಲ್ಲಿ ಹೇಗಾದರೂ ಮಾಡಿ ಅವರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಸ್ಟೇಜ್ ಗೆ ಕೂಡ ಹೋಗಿದ್ದರಂತೆ ಪೂಜಾ. ಆದರೆ ಅದೇ ಸಮಯದಲ್ಲಿ ಹೃತಿಕ್ ರೋಷನ್ ಅವರು ಸ್ಟೇಜ್ ಇಂದ ಹೊರಗೆ ಹೋದರಂತೆ. ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗದೆ ಹೋಗಿದ್ದಕ್ಕೆ, ಅವರ ಮನಸ್ಸಿಗೆ ತುಂಬಾ ಬೇಸರವಾಗಿತ್ತಂತೆ, ಅಂದು ಮೊದಲ ಬಾರಿಗೆ ಪೂಜಾ ಹೆಗ್ಡೆ ಅವರ ಹಾರ್ಟ್ ಬ್ರೇಕ್ ಆಗಿತ್ತಂತೆ. ಹೃತಿಕ್ ಅವರ ಮೇಲಿರುವ ಅಭಿಮಾನ ಎಷ್ಟು ಎನ್ನುವುದು ಆ ಘಟನೆ ಇಂದ ಅರ್ಥವಾಯಿತಂತೆ. ನಂತರ ತಮ್ಮ ಮೆಚ್ಚಿನ ನಟನ ಜೊತೆ ಮೊಹೆಂಜೋದಾರೋ ಸಿನಿಮಾದಲ್ಲಿ ನಟಿಸಿ, ಸ್ಕ್ರೀನ್ ಶೇರ್ ಮಾಡಿಕೊಂಡರು ಪೂಜಾ..
ಇತ್ತೀಚೆಗೆ ಪೂಜಾ ಅಭಿನಯದ ಆಚಾರ್ಯ ಮತ್ತು ಬೀಸ್ಟ್ ಸಿನಿಮಾ ತೆರೆಕಂಡು, ಸೋಲು ಕಂಡಿತು, ಆದರೆ ಪೂಜಾ ಹೆಗ್ಡೆ ಅವರ ಅಭಿನಯವನ್ನು ಪ್ರಶಂಸಿಸಲಾಯಿತು. ಇನ್ನು ಕೆಲವು ಸಿನಿಮಾಗಳು ಪೂಜಾ ಅವರ ಕೈಯಲ್ಲಿದ್ದು, ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅವರಿಗೆ ಸಾಕಷ್ಟು ಅವಕಾಶಗಳು ಸಹ ಸಿಗುತ್ತಿವೆ. ಸಲ್ಮಾನ್ ಖಾನ್ ಅವರ ಜೊತೆ ನಟಿಸುವ ಅವಕಾಶ ಪಡೆದು ಟಾಕ್ ಆಫ್ ದಿ ಟೌನ್ ಆಗಿದ್ದರು ಪೂಜಾ. ಇದಲ್ಲದೆ ಪೂಜಾ ಹೆಗ್ಡೆ ಕೈಯಲ್ಲಿ ಮಹೇಶ್, ತ್ರಿವಿಕ್ರಂ ಸಿನಿಮಾ, ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್ ಸಿನಿಮಾಗಳಿವೆ. ಹಾಗೂ ಹಿಂದಿಯಲ್ಲಿ ನಟಿಸಿರುವ ಸರ್ಕಸ್ ಸಿನಿಮಾ ಬಿಡುಗಡೆಯಾಗಿದೆ. ಹಾಗೆಯೇ ಎಫ್3 ಸಿನಿಮಾದಲ್ಲಿ ವಿಶೇಷವಾದ ಹಾಡಿನಲ್ಲಿ ಸಹ ಕಾಣಿಸಿಕೊಂಡಿದ್ದಾರೆ ಪೂಜಾ ಹೆಗ್ಡೆ. ಹೀಗೆ ಇವರ ಸಕ್ಸಸ್ ಜರ್ನಿ ಕಂಟಿನ್ಯು ಆಗುವ ಹಾಗಿದೆ.
Comments are closed.