ವಯಸ್ಸು ನಲವತ್ತು ದಾಟಿದ್ದರೂ ಕೂಡ ಮದುವೆಯಾಗದೆ ಉಳಿದಿರುವ ನಟಿಯರು ಯಾರ್ಯಾರು ಗೊತ್ತೇ?? ಇವರಿಗೆಲ್ಲ ಇನ್ನು ಮದುವೆ ಆಗಿಲ್ಲ.
ಹಿಂದಿ ಚಿತ್ರರಂಗದಲ್ಲಿ ನಾಯಕರಿಗೆ ಇರುವಷ್ಟೇ ಬೇಡಿಕೆ ನಾಯಕಿಯರಿಗು ಇದೆ. ನಾಯಕಿಯರು ಸಹ ನಾಯಕರಷ್ಟೇ ಪ್ರಮುಖ ಪಾತ್ರ ಇರಬೇಕು ಎಂದು ಡಿಮ್ಯಾಂಡ್ ಮಾಡುತ್ತಾರೆ. ಸಂಭಾವನೆ ವಿಚಾರದಲ್ಲು ಅಷ್ಟೇ, ನಾಯಕರಷ್ಟೇ ನಾಯಕಿಯರಿಗೂ ಕೋಟಿ ಕೋಟಿ ಸಂಭಾವನೆ ನೀಡಲಾಗುತ್ತದೆ. ಬಾಲಿವುಡ್ ನ ಕೆಲವ್ಯ ನಾಯಕಿಯರು ತಮ್ಮದೇ ಆದ ಛಾಪು ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ, ಕೆಲಸ ಬಗ್ಗೆಯೇ ಕಾಳಜಿ ವಹಿಸಿ, ವಯಸ್ಸು 40 ದಾಟಿದ್ದರು ಸಹ ಮದುವೆ ಆಗುವುದನ್ನೇ ಮರೆತಿದ್ದಾರೆ. ಅಂತಹ ಬಾಲಿವುಡ್ ನಟಿಯರು ಯಾರ್ಯಾರು ಗೊತ್ತಾ?
ನಟಿ ತಬು.. 90ರ ದಶಕ ಮುಗಿಯುವ ಸಮಯದಲ್ಲಿ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟವರು ತಬು. ಇವರು ಬಾಲಿವುಡ್ ನಲ್ಲಿ ಈಗಲೂ ಸಹ ಅತ್ಯುತ್ತಮ ನಟಿ ಎನ್ನಿಸಿಕೊಂಡಿದ್ದಾರೆ. ಹಿಂದಿ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸಹ ನಟಿಸಿ ಹೆಸರು ಮಾಡಿದ್ದಾರೆ ತಬು. ತೆರೆ ಮೇಲೆ ಸಾಕಷ್ಟು ಲವ್ ಸ್ಟೋರಿಗಳಲ್ಲಿ ನಟಿಸಿದ್ದರೂ ಸಹ, ನಿಜ ಜೀವನದಲ್ಲಿ ಇವರು ಇನ್ನು ಮದುವೆಯಾಗಿಲ್ಲ, ವಯಸ್ಸು 51 ಆಗಿದ್ದರೂ, ಇನ್ನು ಸಿಂಗಲ್ ಆಗಿದ್ದಾರೆ ನಟಿ ತಬು.
ನಟಿ ಸುಶ್ಮಿತಾ ಸೇನ್.. ಮಾಜಿ ವಿಶ್ವಸುಂದರಿ ಆಗಿರುವ ಸುಶ್ಮಿತಾ ಸೇನ್ ಅವರು ಭಾರತದ ಹೆಮ್ಮೆಯ ಹೆಣ್ಣುಮಗಳು, ಬಾಲಿವುಡ್ ನಲ್ಲಿ ಖ್ಯಾತಿ ಪಡೆದಿದ್ದ ಇವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗು ಸಹ ವಯಸ್ಸು 46, ಆದರೆ ಇಲ್ಲಿಯವರೆಗೂ ಮದುವೆಯಾಗಿಲ್ಲ. ನಟಿ ಸುಶ್ಮಿತಾ ಸೇನ್ ಇತ್ತೀಚೆಗೆ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಬ್ರೇಕಪ್ ಮಾಡಿಕೊಂಡರು. ರೆನಿ ಮತ್ತು ಅಲಿಸಾ ಹೆಸರಿನ ಇಬ್ಬರು ಮಕ್ಕಳನ್ನು ದತ್ತು ಪಡೆದಿದ್ದಾರೆ ನಟಿ ಸುಶ್ಮಿತಾ ಸೇನ್.
ಶಮಿತಾ ಶೆಟ್ಟಿ.. ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ತಂಗಿ ಇವರು. ಬಾಲಿವುಡ್ ನಲ್ಲಿ ನಟಿಯಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು, ಆದರೆ ಚಿತ್ರರಂಗದಿಂದ ಇವರು ದೂರ ಬಂದು ಸಾಕಷ್ಟು ವರ್ಷಗಳೇ ಆಗಿದೆ. ಇತ್ತೀಚೆಗೆ ಹಿಂದಿ ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಬಂದಿದ್ದರು ಶಮಿತಾ. ಇವರ ಒಟ್ಟು ಆಸ್ತಿ, 1 ರಿಂದ 1.5 ಮಿಲಿಯನ್ ಡಾಲರ್ ಗಳಷ್ಟಿದ್ದರೂ ಸಹ, ಸರಿಯಾದ ಸಂಗಾತಿ ಸಿಗದೆ, 43 ವರ್ಷವಾಗಿದ್ದರು ಸಹ ಇವರು ಇನ್ನು ಮದುವೆಯಾಗಿಲ್ಲ.
ತನಿಷಾ ಮುಖರ್ಜಿ.. 2000 ಇಸವಿ ಆರಂಭದ ವರ್ಷಗಳಲ್ಲಿ ಬಾಲಿವುಡ್ ಎಂಟ್ರಿ ಕೊಟ್ಟ ನಟಿ ಇವರು. ಸಿನಿಮಾಗಿಂತ ಹೆಚ್ಚಾಗಿ ಇವರು ಸೋಷಿಯಲ್ ಮೀಡಿಯಾ ಮೂಲಕ ಸುದ್ದಿಯಲ್ಲಿರುತ್ತಾರೆ. ತನಿಶಾ ಅವರು 2003 ರಲ್ಲಿ ಬಿಡುಗಡೆಯಾದ ಶ್ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು, ಬಳಿಕ ಸರ್ಕಾರ, ಟ್ಯಾಂಗೋ ಚಾರ್ಲಿ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಿಂದ ದೂರ ಉಳಿದಿರುವ ಈ ನಟಿ ವಯಸ್ಸು 43 ಆಗಿದ್ದರೂ ಈಗಲೂ ಮದುವೆಯಾಗದೆ ಸಿಂಗಲ್ ಆಗಿದ್ದಾರೆ.
ಇಷಾ ಗುಪ್ತಾ.. ಬಾಲಿವುಡ್ ನ ಬೋಲ್ಡ್ ನಟಿಯರಲ್ಲಿ ಇವರು ಕೂಡ ಒಬ್ಬರು. ಇಮ್ರಾನ್ ಹಾಷ್ಮೀ ಅವರ ಜನ್ನತ್2 ಸಿನಿಮಾ ಮೂಲಕ ಇಷಾ ಗುಪ್ತಾ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಹಾಟ್ ಫೋಟೋಶೂಟ್ ಗಳ ಮೂಲಕ ಇವರು ಹೆಚ್ಚು ಸುದ್ದಿಯಾಗುತ್ತಾರೆ. ಇವರು ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಸ್ಪರ್ಧೆಯ ವಿಜೇತರು ಸಹ ಆಗಿದ್ದರು. ಇವರ ವಯಸ್ಸು 36 ಆಗಿದ್ದರೂ ಸಹ, ಇನ್ನು ಇವರು ಮದುವೆಯಾಗಿಲ್ಲ.
ಕಂಗನಾ ರನೌತ್.. ಬಾಲಿವುಡ್ ನಲ್ಲಿ ಬಹಳ ಬೋಲ್ಡ್ ಆದ ಹೇಳಿಕೆಗಳಿಂದಲೇ ಸುದ್ದಿಯಾಗಿರುವವರು ಕಂಗನಾ. ಇವರಿಗೆ ವಯಸ್ಸು 35 ದಾಟಿದ್ದರು ಸಹ ಇಂದಿಗೂ ಇವರು ಮದುವೆಯಾಗಿಲ್ಲ. ಕಂಗನಾ ಅವರು ಇತ್ತೀಚಿನ ದಿನಗಳಲ್ಲಿ ಹೇಳುತ್ತಿರುವ ಮಾತುಗಳನ್ನು ಕೇಳಿದರೆ, ಮದುವೆಯ ಮೇಲೆ ಅವರಿಗೆ ಆಸಕ್ತಿ ಮೂಡಿರುವ ಹಾಗೆ ಕಾಣಿಸುತ್ತದೆ.
Comments are closed.