Neer Dose Karnataka
Take a fresh look at your lifestyle.

ಕೊಹ್ಲಿ ಗೆ ನೀವು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂದ ಡೇವಿಡ್ ವಾರ್ನರ್, ಯಾಕೆ ಅಂತೇ ಗೊತ್ತೇ? ಹೀಗೆ ಹೇಳಲು ಕಾರಣವಾದರು ಏನು ಗೊತ್ತೇ??

ಐಪಿಎಲ್ ಶುರುವಾದಾಗಿನಿಂದಲೂ ಆರ್.ಸಿ.ಬಿ ತಂಡದ ಜೊತೆಗಿರುವುದು ಅದ್ಭುತವಾದ ಕ್ರಿಕೆಟರ್ ವಿರಾಟ್ ಕೋಹ್ಲಿ ಅವರು. ಆರ್.ಸಿ.ಬಿ ತಂಡದ ಕ್ಯಾಪ್ಟನ್ ಆಗಿ, 10 ವರ್ಷಗಳ ಕಾಲ ತಂಡವನ್ನು ಮುನ್ನಡೆಸಿದ್ದಾರೆ ವಿರಾಟ್. ಈ ವರ್ಷ ಕ್ಯಾಪ್ಟನ್ ಸ್ಥಾನದಿಂದ ಹೊರಗುಳಿದಿರುವ ವಿರಾಟ್  ಕೋಹ್ಲಿ ಅವರು ಆರ್.ಸಿ.ಬಿ ತಂಡದ ಪರವಾಗಿ ಆಡುತ್ತಿದ್ದಾರೆ. ಈ 15 ವರ್ಷಗಳಲ್ಲಿ ಆರ್.ಸಿ.ಬಿ ತಂಡ ಒಂದು ಬಾರಿ ಸಹ ಕಪ್ ಗೆದ್ದಿಲ್ಲ, ಆದರೆ ಆರ್.ಸಿ.ಬಿ ಅಭಿಮಾನಿಗಳು ವಿರಾಟ್ ಕೋಹ್ಲಿ ಅವರ ಆಟದ ವೈಖರಿಯನ್ನು ಮೆಚ್ಚಿಕೊಂಡು, ಪ್ರತಿಬಾರಿಯೂ ತಂಡಕ್ಕೆ ಸಪೋರ್ಟ್ ಮಾಡುತ್ತಿದ್ದರು. ಈ ವರ್ಷ ವಿರಾಟ್ ಅವರು ಉತ್ತಮವಾದ ಫಾರ್ಮ್ ನಲ್ಲಿಲ್ಲ ಹಾಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಡೇವಿಡ್ ವಾರ್ನರ್ ಅವರು ವಿರಾಟ್ ಅವರಿಗೆ ಸಲಹೇ ನೀಡಿದ್ದಾರೆ..

ಕಳೆದ ಎರಡು ವರ್ಷಗಳಿಂದ ವಿರಾಟ್ ಕೋಹ್ಲಿ ಅವರು ತಮ್ಮ ಫಾರ್ಮ್ ಕಳೆದುಕೊಂಡಿದ್ದು, ಆರ್.ಸಿ.ಬಿ ತಂಡದ ಪರವಾಗಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಈ ವರ್ಷ ವಿರಾಟ್ ಕೋಹ್ಲಿ ಅವರು 20.66 ಸರಾಸರಿಯಲ್ಲಿ, 10 ಪಂದ್ಯಗಳಲ್ಲಿ ಕೇವಲ 186 ರನ್ ಗಳಿಸಿದ್ದಾರೆ. ಇದು ಅವರಿಗೆ ತಕ್ಕ ಸ್ಕೋರ್ ಅಲ್ಲ ಎನ್ನಲಾಗುತ್ತಿದೆ. ವಿರಾಟ್ ಕೋಹ್ಲಿ ಅವರು ಅವರು ಮೊನ್ನೆಯ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದರು, ಆದರೆ 58 ರನ್ ಪೂರ್ಣಗೊಳಿಸಲು 53 ಎಸೆತ ತೆಗೆದುಕೊಂಡರು. ಇದು ವಿರಾಟ್ ಕೋಹ್ಲಿ ಅವರಿಗೆ ಬಹಳ ಕಡಿಮೆ ಸ್ಕೋರ್ ಎನ್ನಲಾಗುತ್ತಿದ್ದು, ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ ಎಂದು ಹಲವರು ವ್ಯಕ್ತಪಡಿಸಿದ್ದಾರೆ. ಇನ್ನು ಡೇವಿಡ್ ವಾರ್ನರ್ ಅವರು ಸಹ ವಿರಾಟ್ ಕೋಹ್ಲಿ ಅವರಿಗೆ ಸಂದರ್ಶನ ಒಂದರಲ್ಲಿ ಸಲಹೆ ನೀಡಿದ್ದಾರೆ.

“ಇನ್ನು ಒಂದೆರಡು ಮಕ್ಕಳನ್ನು ಹೊಂದುವ ಮೂಲಕ, ಅವರ ಜೊತೆಗಿನ ಕ್ಷಣಗಳನ್ನು ಎಂಜಾಯ್ ಮಾಡಿ. ಫಾರ್ಮ್ ಶಾಶ್ವತವಾಗಿ ಇರುವುದಿಲ್ಲ, ಆದರೆ ಕ್ಲಾಸ್ ಯಾವಾಗಲೂ ಶಾಶ್ವತವಾಗಿ ಇರುತ್ತದೆ. ಆ ಕ್ಲಾಸ್ ಅನ್ನು ನೀವು ಕಳೆದುಕೊಳ್ಳುವುದಿಲ್ಲ.. ಈ ರೀತಿಯ ಪರಿಸ್ಥಿತಿ ಪ್ರಪಂಚದ ಎಲ್ಲಾ ಆಟಗಾರರಿಗೂ ಸಂಭವಿಸುತ್ತದೆ..ಎಷ್ಟೇ ಉತ್ತಮ ಆಟಗಾರ ಆಗಿದ್ದರೂ ಸಹ ಈ ರೀತಿಯ ಏರಿಳಿತಗಳನ್ನು ಅನುಭವಿಸಲೇಬೇಕು. ಹಾಗಾಗಿ ಮೂಪಭೂತ ಅಂಶಗಳನ್ನೇ ಪಾಲಿಸುವುದು ಒಳ್ಳೆಯದು..” ಎಂದಿದ್ದಾರೆ ಡೇವಿಡ್ ವಾರ್ನರ್. ಸಧ್ಯಕ್ಕೆ ವಿರಾಟ್ ಕೋಹ್ಲಿ ಅವರು, ಲೀನ್ ಪ್ಯಾಚ್ ಮೂಲಕ ಹೋಗುತ್ತಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಇವರ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Comments are closed.