ಚಂದನ್ ಶೆಟ್ಟಿ ರವರನ್ನು ಮನಬಂದಂತೆ ನಿಂದಿಸಿದ ಅಹೋರಾತ್ರ, ಕಾರಣವೇನು ಗೊತ್ತೇ?? ಕಿಚ್ಚ ಸುದೀಪ್ ರವರನ್ನೂ ಎಳೆದು ತಂದು ಅಹೋರಾತ್ರ ಹೇಳಿದ್ದೇನು ಗೊತ್ತೇ??
ಅಹೋರಾತ್ರ ಇತ್ತೀಚೆಗೆ ನಟ ಸುದೀಪ್ ಅವರ ವಿಚಾರದಲ್ಲಿ ಬಹಳ ಸುದ್ದಿಯಾದ ವ್ಯಕ್ತಿ. ಇದೀಗ ಇವರು ಮತ್ತೊಂದು ವಿಚಾರದಿಂದ ಸುದ್ದಿಯಾಗಿದ್ದಾರೆ. ಈ ಬಾರಿ ಅಹೋರಾತ್ರ ಅವರು ಸುದ್ದಿಯಾಗಿರುವುದು ಚಂದನ್ ಶೆಟ್ಟಿ ಅವರ ಬಗ್ಗೆ ಮಾತನಾಡಿರುವ ವಿಡಿಯೋ ಇಂದ. ಇದ್ದಕ್ಕಿದ್ದ ಹಾಗೆ ಅಹೋರಾತ್ರ ಅವರು ಚಂದನ್ ಶೆಟ್ಟಿ ಅವರನ್ನು ಬೈದು ವಿಡಿಯೋ ಒಂದನ್ನು ಫೇಸ್ ಬುಕ್ ನಲ್ಲಿ ಹರಿಬಿಟ್ಟಿದ್ದಾರೆ. ಚಂದನ್ ಶೆಟ್ಟಿ ಅವರನ್ನು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ ಅಹೋರಾತ್ರ. ಇದಕ್ಕೆ ಕಾರಣ ಕೆಲ ಸಮಯದ ಹಿಂದೆ ಚಂದನ್ ಶೆಟ್ಟಿ ಕಾಣಿಸಿಕೊಂಡ ರಮ್ಮಿ ಜಾಹಿರಾತು. ಕರ್ನಾಟಕದ ಜನರಿಗೆ ಯಾವ ರೀತಿಯ ಸಂದೇಶ ಕೊಡುತ್ತಿದ್ದೀರಾ ಎಂದು ಉಗಿದು ಉಪ್ಪಿನಕಾಯಿ ಹಾಕಿದ್ದಾರೆ ಅಹೋರಾತ್ರ.
ಚಂದನ್ ಶೆಟ್ಟಿ ಬಗ್ಗೆ ಮಾತನಾಡಿರುವುದು ಹೀಗೆ.. “ಹೇ ಚಂದನ್ ಶೆಟ್ಟಿ, ಇತ್ತೀಚೆಗಷ್ಟೇ ಮದುವೆ ಆಗಿದ್ದೀಯಾ, ಮದುವೆ ಆಗಿರುವ ಗಂಡಸು ಹೇಗಿರಬೇಕು, ಆ ಥರ ಇರು. ಹೆಂಡತಿ ಎದುರು ತಲ್ಲೇ ಎತ್ತಿ ನಿಲ್ಲುವ ಹಾಗೆ ಇರಬೇಕು. ಅದು ಬಿಟ್ಟು ನಾನು ಜೂಜು ಆಡಿಸಿದ್ದೀನಿ, ಅವರು ಕಷ್ಟಪಟ್ಟು ದುಡಿದಿರುವ ಹಣ ಅದು, ಆ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂತಹ ದುಡ್ಡಲ್ಲಿ ನಿನಗೆ ನೆಕ್ಲೇಸ್ ತಂದಿದ್ದೀನಿ ಅಂತ ಯಾವ ಬಾಯಲ್ಲಿ ಹೇಳ್ತೀರಾ. ಇಂತಹ ತಲೆಹರಟೆಗಳು ಒಳ್ಳೆಯದಲ್ಲ. ಹೇಳುತ್ತಾ ಇದ್ರೆ ಇನ್ನು ಹೆಚ್ಚು ಮಾಡ್ತಾ ಇದ್ದೀರಾ, ಜೂಜಾಡಿ ಜೂಜಾಡಿ ಅಂತ ಸಾಯ್ತಾ ಇದ್ದೀರಲ್ಲಾ, ಇದೆಲ್ಲಾ ಒಳ್ಳೆಯದಲ್ಲ..” ಎಂದು ಹೇಳಿ ಚಂದನ್ ಶೆಟ್ಟಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಅಹೋರಾತ್ರ.
ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ಚಂದನ್ ಶೆಟ್ಟಿ ಆ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸಾಕಷ್ಟು ಸಮಯ ಆಗಿದೆ, ಆದರೆ ಈ ವಿಡಿಯೋ ವೈರಲ್ ಆಗುತ್ತಿರುವುದು ಈಗ. ಹಾಗಾಗಿ ಇದು ಹಳೆಯ ವಿಡಿಯೋ ಆಗಿದ್ದು, ಈಗ ವೈರಲ್ ಆಗ್ತಾ ಇದೆಯಾ ಅಥವಾ, ಇದು ಈಗ ಮಾಡಿರೋ ವಿಡಿಯೋನ ಎಂದು ಸ್ಪಷ್ಟನೆ ಇಲ್ಲ. ಈ ವಿಡಿಯೋ ಬಗ್ಗೆ ಚಂದನ್ ಶೆಟ್ಟಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಸ್ತುತ ಚಂದನ್ ಶೆಟ್ಟಿ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ ಸುದೀಪ್ ಅವರ ಬಗ್ಗೆ ಸಹ ಇಲ್ಲ ಸಲ್ಲದ ವಿಚಾರಗಳನ್ನು ಈ ವ್ಯಕ್ತಿ ಹೇಳಿದ್ದರು.
Comments are closed.