ಪ್ರಶಾಂತ್ ನೀಲ್ ರವರಿಂದ ಚಿತ್ರ ರಂಗಕ್ಕೆ ನಷ್ಟ ಎಂದ ರಾಮಗೋಪಾಲ್ ವರ್ಮಾ. ಪ್ರಶಾಂತ್ ನೀಲ್ ಹೇಗೆ ಭಾರತೀಯ ಚಿತ್ರರಂಗಕ್ಕೆ ನಷ್ಟ ಉಂಟು ಮಾಡಿದ್ದಾರೆ ಗೊತ್ತೇ??
ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ನೋಡಿ ಇಡೀ ಭಾರತ ಚಿತ್ರರಂಗವೇ ಹೆಮ್ಮೆ ಪಡುತ್ತಿದೆ. ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದ ಕೆಜಿಎಫ್ ಮತ್ತು ಕೆಜಿಎಫ್2 ಸಿನಿಮಾ ಇಂದ ಕನ್ನಡ ಚಿತ್ರರಂಗದ ಕಡೆಗೆ ಇಡೀ ವಿಶ್ವ ತಿರುಗಿ ನೋಡುವ ಹಾಗೆ ಆಗಿದೆ. ಕೆಜಿಎಫ್2 ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರು ತುಂಬಾ ಇಷ್ಟಪಟ್ಟು ನೋಡುತ್ತಿದ್ದಾರೆ. ನಿರ್ದೇಶಕನಾಗಬೇಕು ಎಂದುಕೊಂಡಿರುವವರಿಗೆ ಸ್ಪೂರ್ತಿಯಾಗಿದ್ದಾರೆ ಪ್ರಶಾಂತ್ ನೀಲ್. ಇವರ ಬಗ್ಗೆ ಚಿತ್ರರಂಗದ ಸಾಕಷ್ಟು ಗಣ್ಯರು ಹೂಗಳುತ್ತಿದ್ದಾರೆ. ಆದರೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮಾತ್ರ, ಪ್ರಶಾಂತ್ ನೀಲ್ ಅವರಿಂದ ಸಾಕಷ್ಟು ಕೋಟಿ ಹಣ ನಷ್ಟವಾಗುತ್ತಿದೆ ಎಂದಿದ್ದಾರೆ.
ಮೇ 4ರಂದು ವಿಶ್ವ ಡೈರೆಕ್ಟರ್ ಗಳ ದಿನ, ಆ ದಿನದಂದು ಎಲ್ಲರೂ ತಮಗೆ ಇಷ್ಟವಾದ ಡೈರೆಕ್ಟರ್ ಗಳಿಗೆ ವಿಶ್ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರು ಸಹ ಪ್ರಶಾಂತ್ ನೀಲ್ ಅವರಿಗೆ ವಿಶ್ ಮಾಡಿದ್ದು, ತಮ್ಮದೇ ಆದೇ ವಿಭಿನ್ನವಾದ ಶೈಲಿಯಲ್ಲಿ ವಿಶ್ ಮಾಡಿದ್ದಾರೆ. ಪ್ರಶಾಂತ್ ನೀಲ್ ಅವರನ್ನು ಹೋಗಳಿರುವುದು ಸಹ ವಿಭಿನ್ನವಾಗಿದೆ. “ಬಾಲಿವುಡ್, ಕಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಎಲ್ಲಾ ನಿರ್ದೇಶಕರ ತಲೆ ಕೆಡಿಸಿದ್ದಕ್ಕೆ ಪ್ರಶಾಂತ್ ನೀಲ್ ಅವರಿಗೆ ಅನ್ ಹ್ಯಾಪಿ ಡೈರೆಕ್ಟರ್ಸ್ ಡೇ ಎಂದು ವಿಶ್ ಮಾಡುತ್ತೇನೆ. ಪ್ರಶಾಂತ್ ನೀಲ್ ನೀವು ಭಾರತೀಯ ಚಿತ್ರರಂಗದ ವೀರಪ್ಪನ್..
ನೀವು quintal ಗಟ್ಟಲೇ ಹಣ ಮಾಡಿದ್ದೀರಿ ಪ್ರಶಾಂತ್ ನೀಲ್ ಅವರೇ, ಇದರಿಂದಾಗಿ ಭಾರತೀಯ ಚಿತ್ರರಂಗಕ್ಕೆ ಟನ್ ಗಳಷ್ಟು ಹಣ ನಷ್ಟವಾಗಿದೆ. ಹೊಸ ರೀತಿಯಲ್ಲಿ ಚಿತ್ರೀಕರಣ ಮಾಡಲು, ಹೊಸ ಥರ ಡ್ರಾಫ್ಟ್ ಮಾಡಲು, ಹೊಸ ರೀತಿ ಆಲೋಚನೆ ಮಾಡಲು, ಬೇರೆ ಚಿತ್ರತಂಡಗಳು ಹಣ ಖರ್ಚು ಮಾಡಲಿದೆ. ಕೆಜಿಎಫ್2 ಸಿನಿಮಾ ಗೆಲುವಿಗೆ ಕಾರಣ ಏನು ಎನ್ನುವುದು ಅವರಿಗೆ ಗೊತ್ತಿಲ್ಲ..” ಎಂದು ಟ್ವೀಟ್ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮಾ. ಪ್ರಶಾಂತ್ ನೀಲ್ ಅವರನ್ನು ತಮ್ಮದೇ ಆದ ಶೈಲಿಯಲ್ಲಿ ಹೊಗಳಿದ್ದಾರೆ. ಪ್ರಸ್ತುತ ರಾಮ್ ಗೋಪಾಲ್ ವರ್ಮಾ ಅವರು ನಟ ಉಪೇಂದ್ರ ಅವರ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇತ್ತ ಪ್ರಶಾಂತ್ ನೀಲ್ ಅವರು ಸಲಾರ್ ಸಿನಿಮಾದಲ್ಲಿ ಬ್ಯಸಿ ಆಗಿದ್ದಾರೆ.
Comments are closed.