ಬಿಗ್ ನ್ಯೂಸ್: ಮಹೇಶ್ ಬಾಬು ರವರಿಗೆ ಕಪಾಳಮೋಕ್ಷ ಮಾಡಿದ್ದ ಕೀರ್ತಿ ಸುರೇಶ್, ಕ್ಷಮೆ ಕೇಳಿದಾದ ಮಹೇಶ್ ಏನು ಪ್ರತಿಕ್ರಿಯೆ ನೀಡಿದ್ದರು ಗೊತ್ತೇ??
ಸೌತ್ ಚಿತ್ರರಂಗದ ಬ್ಯೂಟಿ ಕೀರ್ತಿ ಸುರೇಶ್ ಅವರಿಗೆ ಭಾರಿ ಬೇಡಿಕೆ ಇದೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಕೀರ್ತಿ. ಇತ್ತೀಚೆಗೆ ಕೀರ್ತಿ ಸುರೇಶ್ ಅಭಿನಯದ ಸಾನಿ ಕಾಯಿಧಮ್ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಆಗಿದ್ದು, ಕೀರ್ತಿ ಸುರೇಶ್ ಅಭಿನಯಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೀರ್ತಿ ಸುರೇಶ್ ಅವರು ಇದೀಗ ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅವರ ಜೊತೆ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಮೇ 12ರಂದು ಬಿಡುಗಡೆ ಆಗಲಿದೆ.
ಈ ಸಿನಿಮಾ ಮೇಲೆ ಜನರಿಗೆ ಭಾರಿ ನಿರೀಕ್ಷೆ ಇದೆ. ಸಿನಿಮಾದ ಪ್ರೊಮೋಷನ್ ಭರ್ಜರಿಯಾಗಿ ನಡೆಯುತ್ತಿದೆ. ಸಿನಿಮಾ ಪ್ರೊಮೋಷನ್ ಸಮಯದ ಸಂದರ್ಶನ ಒಂದರಲ್ಲಿ ಕೀರ್ತಿ ಸುರೇಶ್ ಅವರು ಕಂಡು ಆಸಕ್ತಿದಾಯಕ ವಿಚಾರ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದೇನೆಂದರೆ, ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಡೆದ ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅದೇನೆಂದರೆ ಚಿತ್ರೀಕರಣ ಸಮಯದಲ್ಲಿ ಗೊತ್ತಾಗದೆ, ಮಹೇಶ್ ಬಾಬು ಅವರ ಕೆನ್ನೆಗೆ ಹೊಡೆದಿದ್ದರಂತೆ ಕೀರ್ತಿ. “ಹಾಡಿನ ಚಿತ್ರೀಕರಣ ಮಾಡುವಾಗ, ನನ್ನ ಕಡೆಯಿಂದ ಒಂದು ಸಮನ್ವಯ ದೋಷ ಇತ್ತು. ಹಾಡಿನ ಚಿತ್ರೀಕರಣ ನಡೆಯುವಾಗ ನಾನು ಆಕಸ್ಮಿಕವಾಗಿ ಮಹೇಶ್ ಸರ್ ಅವರ ಮುಖಕ್ಕೆ ಹೊಡೆದಿದ್ದೆ..
ತಕ್ಷಣವೇ ಅವರ ಬಳಿ ಕ್ಷಮೆ ಕೇಳಿದೆ. ಪರ್ವಾಗಿಲ್ಲ, ಚಿಂತೆ ಮಾಡಬೇಡಿ ಎಂದು ಶಾಂತವಾಗಿಯೇ ಪ್ರತಿಕ್ರಿಯೆ ನೀಡಿದ್ದರು..” ಎಂದು ಹೇಳಿದ್ದಾರೆ ನಟಿ ಕೀರ್ತಿ ಸುರೇಶ್. ಸರ್ಕಾರು ವಾರಿ ಪಾಟ ಸಿನಿಮಾವನ್ನು ಪರಶುರಾಮ್ ಅವರು ನಿರ್ದೇಶನ ಮಾಡಿದ್ದಾರೆ. ಮೇ 12ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಕಾಣುತ್ತಿದೆ. ಕೋವಿಡ್ ಸಮಯದ ನಂತರ ಅಂದರೆ ಎರಡು ವರ್ಷಗಳ ನಂತರ ನಟ ಮಹೇಶ್ ಬಾಬು ಅವರು ಅಭಿನಯಿಸಿರುವ ಸಿನಿಮಾ, ಸರ್ಕಾರು ವಾರಿ ಪಾಟ ಬಿಡುಗಡೆ ಆಗುತ್ತಿದೆ. ಈಗಾಗಲೇ ಟೀಸರ್ ಮತ್ತು ಹಾಡುಗಳಿಂದ ಸಿನಿಮಾ ಮೇಲೆ ನಿರೀಕ್ಷೆ ಇದ್ದು, ಮುಂದಿನ ವಾರದ ವರೆಗೂ ಕಾದು ನೋಡಬೇಕಿದೆ.
Comments are closed.