ಯುವನಟಿಯ ಪ್ರೀತಿಯಲ್ಲಿ ಬಿದ್ದ ಕೆಕೆಆರ್ ತಂಡದ ಬ್ಯಾಟ್ಸ್ಮನ್ ವೆಂಕಟೇಶ್ ಐಯ್ಯರ್.. ಆ ನಟಿ ಯಾರು ಗೊತ್ತೇ??
ಸೆಲೆಬ್ರಿಟಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನೇಕ ವಿಚಾರಗಳು ಸುದ್ದಿಯಾಗುತ್ತವೆ. ಸೆಲೆಬ್ರಿಟಿಗಳ ಲವ್, ಗಾಸಿಪ್, ಮದುವೆ, ಬ್ರೇಕಪ್ ಇದೆಲ್ಲಾ ವಿಚಾರಗಳು ಹರಡುವುದು ಸುದ್ದಿಯಾಗುವುದು ಸೋಷಿಯಲ್ ಮೀಡಿಯಾ ಮೂಲಕವೇ. ಇದೀಗ ಮತ್ತೊಂದು ಸೆಲೆಬ್ರಿಟಿ ಜೋಡಿಯ ಬಗ್ಗೆ ಸುದ್ದಿಗಳು ಹರಿಹಾಡುತ್ತಿವೆ. ಇವರು ಮತ್ಯಾರು ಅಲ್ಲಾಜ್ ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಶೈನ್ ಆಗುತ್ತಿರುವ ಬ್ಯಾಟ್ಸ್ಮನ್ ವೆಂಕಟೇಶ್ ಐಯ್ಯರ್. ಇದೀಗ ವೆಂಕಟೇಶ್ ಐಯ್ಯರ್ ಅವರು ತೆಲುಗು ಚಿತ್ರರಂಗದ ಖ್ಯಾತ ನಟಿಯ ಜೊತೆ ಪ್ರೇರಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಆ ನಟಿ ಯಾರು? ಈ ಸುದ್ದಿ ನಿಜವೇ? ತಿಳಿಸುತ್ತೇವೆ ನೋಡಿ..
ವೆಂಕಟೇಶ್ ಐಯ್ಯರ್ ಅವರು ಐಪಿಎಲ್ ನ ಭರವಸೆಯ ಆಟಗಾರ ಎನ್ನಿಸಿಕೊಂಡಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರನಾಗಿ, ರನ್ ಗಳ ಮಳೆ ಹರಿಸುತ್ತಾ, ಫೇಮಸ್ ಆಗಿದ್ದಾರೆ ವೆಂಕಟೇಶ್ ಐಯ್ಯರ್. ಇವರ ಬ್ಯಾಟಿಂಗ್ ವೈಖರಿ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಕೊಲ್ಕತ್ತಾ ತಂಡದ ಪ್ರಮುಖ ಆಟಗಾರ ಆಗಿರುವ ವೆಂಕಟೇಶ್ ಐಯ್ಯರ್ ಅವರನ್ನು 6.5ಕೋಟ್ ಹಣ ಕ್ನೀಡಿ ಫ್ರಾಂಚೈಸಿ ಉಳಿಸಿಕೊಂಡಿದೆ. ಪ್ರಸ್ತುತ ತಂಡದ ಗೆಲುವಿನಲ್ಲಿ ಇವರ ಕೊಡುಗೆ ಸಹ ಸಾಕಷ್ಟಿದೆ. ವೆಂಕಟೇಶ್ ಐಯ್ಯರ್ ಅವರು ಅವರು ಇದೀಗ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಯುವ ಟಾಲಿವುಡ್ ನಟಿಯೊಬ್ಬರನ್ನು ವೆಂಕಟೇಶ್ ಐಯ್ಯರ್ ಇಷ್ಟಪಡುತ್ತಿದ್ದಾರೆ ಎನ್ನಲಾಗಿದೆ.
ಆ ನಟಿ ಮತ್ಯಾರು ಅಲ್ಲ, ಟಾಲಿವುಡ್ ನ ಖ್ಯಾತ ನಟ ವಿಜಯ್ ದೇವರಕೊಂಡ ಅಭಿನಯದ, ಟ್ಯಾಕ್ಸಿವಾಲಾ ಸಿನಿಮಾ ನಾಯಕಿ ಪ್ರಿಯಾಂಕ ಜವಾಲ್ಕರ್ ಅವರ ಜೊತೆ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬರುತ್ತಿದೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರಿಯಾಂಕ ಅವರ ಫೋಟೋ ಒಂದಕ್ಕೆ ವೆಂಕಟೇಶ್ ಐಯ್ಯರ್ ಕಮೆಂಟ್ ಮಾಡಿದ್ದರು. ನೀವು ತುಂಬಾ ಕ್ಯೂಟ್ ಆಗಿ ಕಾಣುತ್ತಿದ್ದೀರಾ ಎಂದು ವೆಂಕಟೇಶ್ ಐಯ್ಯರ್ ಕಮೆಂಟ್ ನಲ್ಲಿ ಬರೆದಿದ್ದರು. ಅದಕ್ಕೆ ರಿಪ್ಲೈ ಮಾಡಿದ್ದ ಪ್ರಿಯಾಂಕ, “ನೀವಾ ಕ್ಯೂಟಾ..” ಎಂದು ತಮಾಷೆಯಾಗಿ ರಿಪ್ಲೈ ಮಾಡಿದ್ದಾರೆ. ಈ ಕಮೆಂಟ್ಸ್ ಗಳನ್ನು ಓದಿದವರು ಇವರಿಬ್ಬರು ಪ್ರೀತಿಸುತ್ತಿರಬಹುದು ಎಂದು ಊಹೆ ಮಾಡಿದ್ದಾರೆ. ಈಗಾಗಲೇ ಇವರಿಬ್ಬರ ಪ್ರೀತಿಯ ವಿಚಾರದ ಬಗ್ಗೆ ಗುಸು ಗುಸು ಹರಡಿತ್ತು. ಇದೀಗ ಇದು ನಿಜವೇ ಏನೋ ಎನ್ನಲಾಗುತ್ತಿದೆ.
Comments are closed.