ಸಾಮಾಜಿಕ ಜಾಲತಾಣಗಲ್ಲಿ ನೋಡಿ, ಪ್ರೀತಿ ಮಾಡಿ ಮದುವೆಯಾಗಿರುವ ಚಾಹಲ್ ಹಾಗೂ ಪತ್ನಿ ಧನುಶ್ರೀ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ??
ಐಪಿಎಲ್ ಪಂದ್ಯಗಳಲ್ಲಿ ಮಿಂಚುವ ಅದ್ಭುತವಾದ ಬೌಲರ್ ಗಳಲ್ಲಿ ಒಬ್ಬರು ಯುಜ್ವೇಂದ್ರ ಚಾಹಲ್ ಅವರು. ಇಷ್ಟು ವರ್ಷಗಳ ಕಾಲ ನಮ್ಮ ಆರ್.ಸಿ.ಬಿ ತಂಡದ ಪರವಾಗಿ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದ ಚಾಹಲ್ ಅವರನ್ನು ಈ ವರ್ಷ ರಾಜಸ್ತಾನ್ ರಾಯಲ್ಸ್ ತಂಡ ಖರೀದಿಸಿದೆ. ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಪಡೆದಿರುವ ಯುಜ್ವೇಂದ್ರ ಚಾಹಲ್ ಅವರು ಇತ್ತೀಚೆಗೆ ಧನುಶ್ರೀ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಚಾಹಲ್ ಮತ್ತು ಧನುಶ್ರೀ ಇಬ್ಬರು ಸಹ ಇಂದು ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ಕ್ಯೂಟ್ ಜೋಡಿಯ ನಡುವೆ ಇರುವ ವಯಸ್ಸಿನ ವ್ಯತ್ಯಾಸ ಎಷ್ಟು ಗೊತ್ತಾ?
ಚಾಹಲ್ ಮತ್ತು ಧನುಶ್ರೀ ಇಬ್ಬರು ಸಹ ಭೇಟಿಯಾಗಿದ್ದು ಆನ್ ಲೈನ್ ನಲ್ಲಿ. ಧನುಶ್ರೀ ವೈದ್ಯಕೀಯ ಶಾಸ್ತ್ರ ಓದಿದ್ದಾರೆ. ಆದರೆ ಇವರು ಕೋರಿಯೋಗ್ರಾಫರ್ ಆಗಿ ಸಹ ಕೆಲಸ ಮಾಡುತ್ತಿದ್ದಾರೆ. ಟಿಕ್ ಟಾಕ್ ವಿಡಿಯೋಗಳ ಮೂಲಕ ಬಹಳ ಫೇಮಸ್ ಆಗಿದ್ದವರು ಧನುಶ್ರೀ. ಟಿಕ್ ಟಾಕ್ ವಿಡಿಯೋಗಳನ್ನು ನೋಡುಬ ಮೂಲಕವೇ ಇವರಿಬ್ಬರ ಪರಿಚಯವಾಯಿತು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಪ್ರೀತಿಯಾಗಿ, ಇವರಿಬ್ಬರು ಇಂದು ಬಹಳ ಸಂತೋಷವಾಗಿದ್ದಾರೆ. ಟಿಕ್ ಟಾಕ್ ನಲ್ಲಿ ನನಗೆ ಡ್ಯಾನ್ಸ್ ಹೇಳಿಕೊಡಿ ಎಂದು ಹೇಳುವ ಮೂಲಕ ಧನುಶ್ರೀ ಅವರ ಜೊತೆ ಮಾತು ಆರಂಭಿಸಿದ್ದಾರೆ ಚಾಹಲ್. ಆ ಮಾತಿನಿಂದ ಶುರುವಾದ ಪರಿಚಯ, ಪ್ರೀತಿಗೆ ತಿರುಗಿತು.
ಚಾಹಲ್ ಅವರು ತಮ್ಮ ಸರಳತೆ, ಒಳ್ಳೆಯ ಮಾತುಗಳಿಂದ ಧನುಶ್ರೀ ಅವರನ್ನು ಪ್ರೀತಿಯಲ್ಲಿ ಬೀಳಿಸಿಕೊಂಡರು. ಬಳಿಕ ಚಾಹಲ್ ಅವರು ಧನುಶ್ರೀ ಅವರನ್ನು ನೇರವಾಗಿ ಭೇಟಿ ಮಾಡಿ, ಇಬ್ಬರ ನಡುವೆ ಪ್ರೀತಿ ಬೆಳೆಯಿತು. ಇಬ್ಬರು ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಇವರಿಬ್ಬರ ವಯಸ್ಸಿನ ವ್ಯತ್ಯಾಸದ ಬಗ್ಗೆ ಹೇಳುವುದಾದರೆ, ಚಾಹಲ್ ಅವರಿಗೆ 30 ವರ್ಷ ಹಾಗೂ ಧನುಶ್ರೀ ಅವರಿಗೆ 24 ವರ್ಷ, ಹಾಗಾಗಿ ಇವರಿಬ್ಬರ ನಡುವೆ 6 ವರ್ಷಗಳ ವಯಸ್ಸಿನ ವ್ಯತ್ಯಾಸ ಇದೆ. ವಯಸ್ಸಿನ ಅಂತರ ಇವರ ಮದುವೆಗೆ ಅಡ್ಡಿಯಾಗಲಿಲ್ಲ. ಪ್ರಸ್ತುತ ಇವರು ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಗಳನ್ನು ಮಾಡುತ್ತಾ ಸಂತೋಷವಾಗಿದ್ದಾರೆ.
Comments are closed.