Neer Dose Karnataka
Take a fresh look at your lifestyle.

ಕನ್ಯಾಕುಮಾರಿ ಹಾಗೂ ಗೀತಾ ಧಾರವಾಹಿ ಅಭಿಮಾನಿಗಳು ಫುಲ್ ಕುಶ್, ಎರಡು ಧಾರಾವಾಹಿಯ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್. ಏನು ಗೊತ್ತೇ?

13

ಕಿರುತೆರೆ ವೀಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡುವುದು ಧಾರಾವಾಹಿಗಳು. ಹೊಸ ಕಥೆ, ಜೋತ್ಸ ಧಾರಾವಾಹಿಗಳು ಆಗಾಗ ವೀಕ್ಷಕರನ್ನು ರಂಜಿಸುತ್ತಲೇ ಇರುತ್ತದೆ. ಅದರಲ್ಲೂ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿನಿಗಳು ವೀಕ್ಷಕರಿಗೆ ಸೂಪರ್ ಮನೋರಂಜನೆ ನೀಡುತ್ತದೆ. ಇದೀಗ ಕಲರ್ಸ್ ಕನ್ನಡ ವಾಹಿನಿಯ ಎರಡು ಧಾರಾವಾಹಿಗಳ ಕಡೆಯಿಂದ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಅವು ಕನ್ಯಾಕುಮಾರಿ ಮತ್ತು ಗೀತಾ ಧಾರಾವಾಹಿಗಳು. ಧಾರಾವಾಹಿ ತಂಡದಿಂದ ಸಿಕ್ಕಿರುವ ಗುಡ್ ನ್ಯೂಸ್ ಏನು ಗೊತ್ತಾ? ತಿಳಿಸುತ್ತೇವೆ ನೋಡಿ..

ಧಾರಾವಾಹಿಗಳು ಎಂದಮೇಲೆ, ವೀಕ್ಷಕರಿಗೆ ಇಷ್ಟವಾಗುತ್ತಾ, 500 ಸಂಚಿಕೆ, ಸಾವಿರ ಸಂಚಿಕೆಗಳನ್ನು ಪೂರೈಸುವುದು ಇದ್ದೆ ಇರುತ್ತದೆ. ಇದೀಗ ಕಲರ್ಸ್ ಕನ್ನಡ ವಾಹಿನಿಯ ಫೇಮಸ್ ಧಾರಾವಾಹಿ ಗೀತಾ 600 ಸಂಚಿಕೆಗಳನ್ನು ಪೂರೈಸಿದೆ. ಹಾಗೂ ಮತ್ತೊಂದು ಧಾರಾವಾಹಿ ಕನ್ಯಾಕುಮಾರಿ ಧಾರಾವಾಹಿ 200 ಸಂಚಿಕೆಗಳನ್ನು ಪೂರೈಸಿದೆ. ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತೋಷದ್ ಸುದ್ದಿ ಆಗಿದೆ. ಗೀತಾ ಧಾರಾವಾಹಿಯನ್ನು ವೀಕ್ಷಕರು ತಪ್ಪದೇ ನೋಡುತ್ತಿದ್ದಾರೆ. ಒಬ್ಬ ಹುಡುಗಿ ಸ್ವಾತಂತ್ರ್ಯವಾಗಿ ಯಾರ ಸಹಾಯವು ಇಲ್ಲದೆ ಹೇಗೆ ಬದುಕಬೇಕು, ಅದೇ ರೀತಿ ಬದುಕುವಾಗ, ಏನಾದರೂ ಅಡೆ ತಡೆ ಬಂದರೆ ಅದನ್ನು ಎದುರಿಸುವುದು ಹೇಗೆ ಎನ್ನುವುದನ್ನು ಗೀತಾ ಧಾರಾವಾಹಿಯಲ್ಲಿ ಉತ್ತಮವಾಗಿ ತೋರಿಸಲಾಗಿದೆ. ಈ ಧಾರಾವಾಹಿ ಈಗ 600 ಸಂಚಿಕೆ ಪೂರೈಸಿರುವ ಸಂಭ್ರಮದಲ್ಲಿದೆ.

ಇನ್ನು ಕನ್ಯಾಕುಮಾರಿ ಧಾರಾವಾಹಿಯ ಕಥೆ ವಿಭಿನ್ನವಾಗಿದೆ. ದೈವಭಕ್ತಿಯ ಜೊತೆಗೆ, ಮಾಟಮಂತ್ರವನ್ನು ಒಳಗೊಂಡಿರುವಂಥಾ ಕಥೆಯಾಗಿದೆ. ಈ ಧಾರಾವಾಹಿಯನ್ನು ಸಹ ಕಿರುತೆರೆ ವೀಕ್ಷಕರು ತಪ್ಪಿಸದೇ ನೋಡುತ್ತಿದ್ದಾರೆ. ಚರಣ್ ಕನ್ನಿಕಾ ಕಥೆಯ ಜೊತೆಗೆ ಆಸಕ್ತಿಕರ ವಿಚಾರಗಳು ಕನ್ಯಾಕುಮಾರಿ ಧಾರಾವಾಹಿ ಮೇಲೆ ಆಸಕ್ತಿ ಬೆಳೆಯುವ ಹಾಗೆ ಮಾಡಿದೆ.. ಈ ಎರಡು ಧಾರಾವಾಹಿಗಳಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಕನ್ಯಾಕುಮಾರಿ ಧಾರಾವಾಹಿ ಈಗ 200 ಸಂಚಿಕೆ ಪೂರೈಸಿರುವ ಸಂಭ್ರಮದಲ್ಲಿದೆ. ಈ ಮೂಲಕ ವೀಕ್ಷಕರಿಗೆ ಬಿಗ್ ಸರ್ಪ್ರೈಸ್ ನೀಡಿದೆ ಈ ಎರಡು ತಂಡಗಳು. ಈ ಸಂತೋಷದಲ್ಲಿ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಧಾರಾವಾಹಿ ತಂಡಕ್ಕೆ ವಿಶ್ ಮಾಡುತ್ತಲಿದ್ದಾರೆ.

Leave A Reply

Your email address will not be published.