ಕೇವಲ ತಿಂಗಳಿಗೆ ಒಂದು ಸಾವಿರ ರೂಪಾಯಿ ಉಳಿಸುವ ಮೂಲಕ ಕೋಟಿಗಳಿಸುವುದು ಹೇಗೆ ಗೊತ್ತೇ??
ಹಣ ಉಳಿಸಬೇಕು, ಹೆಚ್ಚಿನ ಹಣ ಗಳಿಸಬೇಕು, ಲಕ್ಷಾಧಿಪತಿ, ಕೋಟ್ಯಾಧಿಪತಿ ಆಗಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುವುದು ಸಹಜ. ನೀವು ಮಿಲಿಯನೇರ್ ಆಗಲು ಪ್ರತಿ ತಿಂಗಳು ಸಾವಿರ ಸಾವಿರಗಟ್ಟಲೆ ಹಣ ಉಳಿಸಬೇಕು ಎನ್ನುವ ಹಾಗಿಲ್ಲ. ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಉಳಿಸಿದರೆ ಸಾಕು ನೀವು ಮಿಲಿಯನೇರ್ ಆಗಬಹುದು. ಹಣ ಉಳಿಸುವ ಆಸೆ ಇದ್ದರು, ಅದಕ್ಕಾಗಿ ಬಿಟ್ಟುಕೊಡುವ ಹಣಕ್ಕೆ, ಪ್ರತಿಯಾಗಿ ಏನನ್ನಾದರೂ ನಿರೀಕ್ಷೆ ಮಾಡುತ್ತಾರೆ. ಪ್ರತಿ ತಿಂಗಳಿಗೆ ನೀವು ₹1,000 ರೂಪಾಯಿ ಉಳಿಸಿ, ಕೋಟ್ಯಾಧಿಪತಿ ಆಗಬಹುದು.
ನೀವು ಗಳಿಸುವ ಹಣದ ಮೊತ್ತ ಹೆಚ್ಚಾಗುವ ಹಾಗೆ, ನೀವು ಉಳಿತಾಯ ಮಾಡುವ ಹಣದ ಮೊತ್ತ ಸಹ ಹೆಚ್ಚಾಗಬೇಕು. ನೀವು ಹೆಚ್ಚು ಹಣ ಉಳಿಸಿದಷ್ಟು, ಬೇಗ ಮಿಲಿಯನೇರ್ ಆಗಲು ಸುಲಭವಾಗುತ್ತದೆ. ನೀವು ಕೋಟಿಗಟ್ಟಲೆ ಹಣ ಮಾಡಲು ಸಹಾಯ ಮಾಡುವುದು ಮ್ಯೂಚುವಲ್ ಫಂಡ್ ಗಳು. ಹಲವಾರು ರೀತಿಯ ಮ್ಯೂಚುವಲ್ ಫಂಡ್ ಗಳಿವೆ. ಅವುಗಳ ಮೂಲಕ ಉಳಿತಾಯ ಮಾಡುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ ನೋಡಿ..
ಮ್ಯೂಚುವಲ್ ಫಂಡ್ಸ್ ನಲ್ಲಿರುವ ಎಸ್.ಐ.ಪಿ ಯೋಜನೆ (ವ್ಯವಸ್ಥಿತ ಹೂಡಿಕೆ ಯೋಜನೆ) ಮೂಲಕ ಪ್ರತಿ ತಿಂಗಳು ನೀವು ಇಂತಿಷ್ಟು ಮೊತ್ತವನ್ನು ಸೇವ್ ಮಾಡಬಹುದು. ಈ ಯೋಜನೆಗಳಲ್ಲಿ ತಿಂಗಳಿಗೆ ಒಂದು ಸಾವಿರ ರೂಪಾಯಿಯನ್ನು ದೀರ್ಘಾವಧಿಯವರೆಗೆ ಉಳಿಸುವುದರಿಂದ ಹೆಚ್ಚಿನ ಲಾಭ ಗಳಿಸುತ್ತೀರಿ. ಮ್ಯೂಚುವಲ್ ಫಂಡ್ ಗಳಲ್ಲಿ ಶೇ.15 ರಷ್ಟು ಲಾಭ ಪಡೆಯಬಹುದು ಎಂದು ತಜ್ಞರು ಅಭಿಪ್ರಾಯ ಹೇಳುತ್ತಾರೆ.
ಇದರ ಪ್ರಕಾರ, ಒಂದು ತಿಂಗಳಿಗೆ 1000 ಎಂಬಂತೆ, 30 ವರ್ಷಗಳ ಕಾಲ ಹಣ ಕಟ್ಟಿದರೆ, ಮುಗಿಯುವ ಸಮಯಕ್ಕೆ 70 ಲಕ್ಷಕ್ಕಿಂತ ಅಧಿಕ ಹಣ ಪಡೆಯುತ್ತೀರಿ. ಮ್ಯೂಚುವಲ್ ಫಂಡ್ ಕಂಪನಿಗಳು ಸ್ಟೆಪ್ ಅಪ್ ಸಿಪ್ ಎನ್ನುವ ಒಂದು ಯೋಜನೆಯನ್ನು ನೀಡುತ್ತದೆ. ಇದರ ಪ್ರಕಾರ ನೀವು ಪ್ರತಿವರ್ಷ ನಿರ್ದಿಷ್ಟವಾಗಿ ಇಂತಿಷ್ಟು ಉಳಿತಾಯವನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಹೆಚ್ಚಿನ ಹಣ ಪಡೆಯಬಹುದು.
ಉದಾಹರಣಗೆ, ಸ್ಟೆಪ್ ಯೋಜನೆಯಲ್ಲಿ ಒಂದು ವರ್ಷ 1000 ಕಟ್ಟಿದ ನಂತರ ಮುಂದಿನ ವರ್ಷಕ್ಕೆ, ಶೇ.5 ರಷ್ಟು ಹೆಚ್ಚಿಸಿಕೊಂಡರೆ, ಎರಡನೇ ವರ್ಷದಿಂದ ₹1,050 ರೂಪಾಯಿ ಕಟ್ಟಬೇಕು, ಶೇ.10 ರಷ್ಟು ಹೆಚ್ಚಿಸಿಕೊಂಡರೆ ₹1,100 ಕಟ್ಟಬೇಕು. ಹೀಗೆ ಪ್ರತಿ ವರ್ಷ, ಶೇ.10 ರಷ್ಟು ಹಣವನ್ನು ಹೆಚ್ಚಿಸುತ್ತಾ ಬಂದರೆ, ನಿಮ್ಮ ಫಂಡ್ ರಿಟರ್ನ್ಸ್ ಶೇ.15ರಷ್ಟು ಗಳಿಸುತ್ತದೆ ಎಂದು ಅಂದುಕೊಂಡರೆ, 28 ವರ್ಷ ಕಳೆಯುವಷ್ಟರಲ್ಲಿ 1 ಕೋಟಿಗಿಂತ ಹೆಚ್ಚಿನ ಹಣ ಪಡೆಯುತ್ತೀರಿ. ಹೀಗೆ 30 ವರ್ಷಗಳು ಮುಗಿಯುವ ಸಮಯಕ್ಕೆ, 1,30,00,00, ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ಹಣ ನಿಮ್ಮ ಕೈಸೇರುತ್ತದೆ.
ಹಲವಾರು ಜನರು ಮ್ಯೂಚುವಲ್ ಫಂಡ್ ಗಳ ಮೂಲಕ ಹಣ ಉಳಿಸಿ, ಹೆಚ್ಚಿನ ರಿಟರ್ನ್ಸ್ ಪಡೆಯಲು ಇಷ್ಟಪಡುತ್ತಾರೆ. ಹೇಗೂ ನಿಮ್ಮ ಆದಾಯ ಪ್ರತಿ ತಿಂಗಳಿಗೆ ಶೇ.15ರಷ್ಟು ಹೆಚ್ಚಾಗುವ ಕಾರಣ, ಸ್ಟೆಪ್ ಅಪ್ ಜಿಪ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯು ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ತಂದು ಕೊಡುತ್ತದೆ.
Comments are closed.