ಕೊನೆಗೂ ಫಿಕ್ಸ್ ಆಯ್ತಾ ನಯನತಾರ ಮದುವೆ ದಿನಾಂಕ. ತಮಿಳುನಾಡು ಚಿತ್ರರಂಗದಲ್ಲಿ ಹೊಸ ಸುದ್ದಿ, ಯಾವಾಗ ಮತ್ತು ಎಲ್ಲಿ ಅಂತೇ ಗೊತ್ತೇ?
ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆ ಹೊಂದಿರುವ ನಟಿ ನಯನತಾರ. ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿ ಸಹ ಇವರೇ. ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರು ಸಹ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರ ಮದುವೆ ಸುದ್ದಿ ಆಗಾಗ ಕಾಲಿವುಡ್ ನಲ್ಲಿ ಸದ್ದು ಮಾಡುತ್ತದೆ, ಇತ್ತೀಚೆಗೆ ಸಹ ಇವರಿಬ್ಬರು ಮದುವೆ ಆಗಿಯೇ ಬಿಟ್ಟಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು, ಆದರೆ ಈಗ ಅದೆಲ್ಲ ಸುದ್ದಿಗಳಿಗೂ ಕ್ಲಾರಿಟಿ ಸಿಕ್ಕಿದ್ದು, ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರು ಸಹ ಯಾವಾಗ ಮದುವೆ ಆಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಜೂನ್ 9ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ತಮ್ಮಿಬ್ಬರಿಗೂ ಬಹಳ ಇಷ್ಟವಾದ ತಿರುಪತಿಯಲ್ಲಿ ಮದುವೆ ಆಗಲಿದ್ದಾರೆ ಎಂದು ಸುದ್ದಿ ತಿಳಿದುಬಂದಿದೆ. ಕೋ ಆಕ್ಟರ್ಸ್ ಗಳು ಹಾಗೂ ಫ್ರೆಂಡ್ಸ್ ಗಳಿಗಾಗಿ ಮಾಲ್ಡಿವ್ಸ್ ನಲ್ಲಿ ಸ್ಪೆಷಲ್ ಪಾರ್ಟಿ ಸಹ ಅರೇಂಜ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಹೀಗೊಂದು ಸುದ್ದಿ ಟಾಲಿವುಡ್ ನಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದು, ಇದು ನಿಜವೋ ಸುಳ್ಳೋ ಎನ್ನುವುದಕ್ಕೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರು ಸಹ ಹೆಚ್ಚಾಗಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಸಹ ಇವರಿಬ್ಬರು ತಿರುಪತಿಗೆ ಭೇಟಿ ನೀಡಿ ದರ್ಶನ ಪಡೆದಿದ್ದರು. ಆ ಫೋಟೋಸ್ ಗಳನ್ನು ವಿಘ್ನೇಶ್ ಶಿವನ್ ಶೇರ್ ಮಾಡಿಕೊಂಡಿದ್ದರು.
2011ರಲ್ಲಿ ತೆರೆಕಂಡ ಸೀತಾರಾಮ ರಾಜ್ಯಮ್ ಸಿನಿಮಾ ನಂತರ ನಟಿ ನಯನತಾರ ಚಿತ್ರರಂಗದಿಂದ ಒಂದು ಬ್ರೇಕ್ ಪಡೆದುಕೊಂಡಿದ್ದರು. ಅದಾದ ಬಳಿಕ ಅವರು ನಟಿಸಿದ್ದು, ನಾನುಂ ರೌಡಿ ಥಾನ್ ಸಿನಿಮಾದಲ್ಲಿ, ಆ ಸಿನಿಮಾವನ್ನು ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದರು, ಆ ಸಿನಿಮಾ ಮೂಲಕವೇ ಇವರಿಬ್ಬರ ನಡುವೆ ಪರಿಚಯವಾಗಿ, ಇಬ್ಬರು ಸಹ ಪ್ರೀತಿಸಲು ಶುರುಮಾಡಿದರು ಎನ್ನಲಾಗಿದೆ. ಇತ್ತೀಚೆಗೆ ಸಹ, ನಯನತಾರ ಮತ್ತು ಸಮಂತಾ ಹಾಗೂ ವಿಜಯ್ ಸೇತುಪತಿ ಅಭಿನಯದ ಕಾತುವಾಕುಲ ರೆಂಡು ಕಾದಲ್ ಸಿನಿಮಾವನ್ನು ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸಹ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು.
Comments are closed.