ತನ್ನ ಮಗಳನ್ನು ಮುಗಿಸಿದ್ದಾನೆ ಎಂದು ದೂರು ನೀಡಿ ಅಳಿಯನನ್ನು ಜೈಲಿಗೆ ಕಳುಹಿಸಿದ ಮಾವ. ಆದರೆ ಮಗಳು ಎಲ್ಲಿ ಸಿಕ್ಕಿಬಿದ್ದಿದ್ದಾಳೆ ಗೊತ್ತೇ?
ಪ್ರಪಂಚದಲ್ಲಿ ಸಾಕಷ್ಟು ವಿಚಿತ್ರವಾದ ಘಟನೆಗಳು ನಡೆಯುತ್ತದೆ. ಮದುವೆ ನಂತರ ಕೂಡ ಹೆಣ್ಣು ಮತ್ತೊಬ್ಬನನ್ನು ಇಷ್ಟಪಟ್ಟು, ಆತನ ಜೊತೆ ಹೋಗಿ, ಗಂಡ ಮತ್ತು ಕುಟುಂಬಕ್ಕೆ ತೊಂದರೆ ತಂದಿರುವ ಸಾಕಷ್ಟು ಘಟನೆಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಬಿಹಾರದಲ್ಲಿ ಇಂಥಹ ಘಟನೆಯೊಂದು ನಡೆದಿದ್ದು, ಪತ್ನಿ ಸತ್ತು ಹೋಗಿದ್ದಾಳೆ ಎಂದು ಆಕೆಯ ಗಂಡನನ್ನು ಅರೆಸ್ಟ್ ಮಾಡಲಾಗಿತ್ತು. ಹುಡುಗಿಯ ತಂದೆಯೇ ಪೊಲೀಸರಲ್ಲಿ ದೂರು ಕೊಟ್ಟು ಅಳಿಯನನ್ನು ಅರೆಸ್ಟ್ ಮಾಡಿಸಿದ್ದರು. ಆದರೆ ಕೆಲ ದಿನಗಳ ನಂತರ ಪ್ರತ್ಯಕ್ಷವಾದಳು ಕ್ ಹುಡುಗಿ, ನಂತರ ನಡೆದಿದ್ದೆ ಬೇರೆ.. ನಿಜಕ್ಕೂ ಆಗಿದ್ದೇನು ಗೊತ್ತಾ?
ಬಿಹಾರ ಜಿಲ್ಲೆಯ ಮೋತಿಹಾರಿ ಎನ್ನುವ ಜಾಗದಲ್ಲಿ ಇಂತಹ ಘಟನೆಯೊಂದು ನಡೆದಿದೆ. ಕೇಸರಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಲಕ್ಷ್ಮೀಪುರ ಎಂಬಲ್ಲಿ ಈ ಘಟನೆ ನಡೆದಿದೆ. ದಿನೇಶ್ ಎನ್ನುವ ವ್ಯಕ್ತಿ 2014ರಲ್ಲಿ ಶಾಂತಿ ದೇವಿ ಎನ್ನುವ ಹುಡುಗಿಯ ಜೊತೆ ಮದುವೆಗಾಗಿದ್ದನು, ಅಷ್ಟು ವರ್ಷಗಳಿಂದ ಚೆನ್ನಾಗಿದ್ದರು ಈ ದಂಪತಿ. ಇದೀಗ ಕೆಲವು ತಿಂಗಳುಗಳ ಹಿಂದೆ, ಶಾಂತಿ ದೇವಿ ಇದ್ದಕ್ಕಿದ್ದ ಹಾಗೆ ನಾಪತ್ತೆಯಾದಳು. ಎಷ್ಟೇ ಹುಡುಕಿದರೂ ಆಕೆ ಸಿಗಲಿಲ್ಲ. ಶಾಂತಿ ದೇವಿಯ ತಂದೆ ಯೋಗೇಂದ್ರ ಅವರು ಅಳಿಯನ ಮೇಲೆ ಅನುಮಾನ ಪಟ್ಟು, ಅಳಿಯನೇ ಮಗಳಿಗೆ ಕಿರುಕುಳ ಕೊಟ್ಟಿದ್ದಾನೆ, ಕಿರುಕುಳ ಕೊಟ್ಟು ಸಾಯಿಸಿದ್ದಾನೆ, ಅದರಿಂದಲೇ ಆಕೆ ನಾಪತ್ತೆಯಾಗಿದ್ದಾಳೆ ಎಂದು ಅಳಿಯನ ಮೇಲೆ ದೂರು ನೀಡಿದ್ದನು.
ಪೊಲೀಸರು ಸಹ ದಿನೇಶನನ್ನು ಅರೆಸ್ಟ್ ಮಾಡಿದರು. ನಾನು ಏನು ಮಾಡಿಲ್ಲ, ಆಕೆಗೇನು ತೊಂದರೆ ಕೊಟ್ಟಿಲ್ಲ, ಯಾವ ತಪ್ಪನ್ನೂ ಮಾಡಿಲ್ಲ ಎಂದು ದಿನೇಶ ಎಷ್ಟೇ ಬೇಡಿಕೊಂಡರು ಪೊಲೀಸರು ಬಿಡಲಿಲ್ಲ. ಕೊನೆಗೆ ಆತ, ದೇವರೇ ನಾನು ಯಾವ ತಪ್ಪನ್ನೂ ಮಾಡದೆ ಇದ್ದರೂ ನನಗ್ಯಾಕೆ ಇಂತಹ ಶಿಕ್ಷೆ ಎಂದು ಕಣ್ಣೀರು ಹಾಕಿದ್ದನು. ಆತನ ಕೂಗು ಆ ದೇವರಿಗೆ. ಕೇಳಿಸಿತೋ ಏನೋ, ಶಾಂತಿ ದೇವಿಯನ್ನು ಪೊಲೀಸರು ಹುಡುಕಿದರು, ಪಂಜಾಬ್ ನ ಜಲಂಧರ್ ನಲ್ಲಿ ಆಕೆ ತನ್ನ ಲವ್ವರ್ ಜೊತೆಯಲ್ಲಿದ್ದಳು, ಇನ್ಸ್ಪೆಕ್ಟರ್ ಶೈಲೇಂದ್ರ ಅವರು ಎಲ್ಲರೂ ಆಕೆ ಸತ್ತಿದ್ದಾಳೆ ಎಂದುಕೊಂಡಿದ್ದರು ಸಹ, ಆಕೆಯನ್ನು ಹುಡುಕಿ ಕರೆತಂದಿದ್ದು, ಕುಟುಂಬದವರೆಲ್ಲರು ಶಾಕ್ ಆಗಿದ್ದು, ದಿನೇಶ್ ಗೆ ಕೊನೆಗೂ ಆರೋಪದಿಂದ ಮತ್ತು ಜೈಲುವಾಸದಿಂದ ಮುಕ್ತಿ ಸಿಕ್ಕಿತು.
Comments are closed.