ನೋಡಲು ಸೂಪರ್ ಲುಕ್, ಕ್ಲಾಸ್ ಜೊತೆ ಫುಲ್ ಹೈ ಟೆಕ್. ಹೇಗಿದೆ ಗಾಟಾ ಹೊಸ ಸ್ಕೂಪಿ ಸ್ಕೂಟರ್. ವಿಶೇಷತೆ ಹಾಗೂ ಬೆಲೆ ಎಷ್ಟು ಗೊತ್ತೇ?
ಪ್ರತಿದಿನ ಹೊಸ ವಾಹನಗಳು ,ಹೊಸ ಮಾಡಲ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಲೇ ಇರುತ್ತವೆ. ಒಂದಕ್ಕಿಂತ ಒಂದು ಭಿನ್ನವಾಗಿ ಮತ್ತು ವಿಶಿಷ್ಟವಾಗಿರುತ್ತವೆ. ಇದೀಗ ಹೋಂಡಾ ಸಂಸ್ಥೆಯು ಹೊಸದಾದ ಆಧುನಿಕ ಹೋಂಡಾ ಸ್ಕೂಪಿ ಸ್ಕೂಟರ್ ಬಿಡುಗಡೆ ಮಾಡಿದೆ. ರೆಟ್ರೋ ಸ್ಟೈಲ್ ನಲ್ಲಿರುವ ಈ ಸ್ಕೂಟರ್, ಗ್ರಾಹಕರಿಗೆ ಬಹಳ ಇಷ್ಟ ಆಗುವುದು ಖಂಡಿತ. ಹೀರೋ ಪ್ಲೆಶರ್ ಪ್ಲಸ್, ಟಿವಿಎಸ್ ಜ್ಯುಪಿಟರ್, ಮತ್ತು ಮೆಸ್ಟ್ರೋ ಎಡ್ಜ್ ವಾಹನಗಳಿಗೆ ಪೈಪೋಟಿ ಕೊಡಲು ಬಂದಿದೆ ಈ ಹೊಸ ಸ್ಕೂಪಿ ಸ್ಕೂಟರ್.
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಸಂಸ್ಥೆಯು ಗ್ರಾಹಕರಿಗೆ ಸರಿಹೋಗುವ ಬೆಲೆಯಲ್ಲಿ ಹೊಸದಾದ ಆಧುನಿಕ ವಾಹನಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತದೆ. ಇದೀಗ ಹೋಂಡಾ ದ್ವಿಚಿಕ್ರ ವಾಹನ ಸಂಸ್ಥೆ ಹೊಸದಾದ ವಾಹನ ಒಂದರ ಪೇಟೆಂಟ್ ಗಾಗಿ ಭಾರತದಲ್ಲಿ ಅಪ್ಲೈ ಮಾಡಿದ್ದು, ಮುಂದೆ ಭಾರತಕ್ಕೆ ಎಂಟ್ರಿ ಕೊಡಲಿರುವ ಹೊಸ ವಾಹನಗಳು, ಮತ್ತು ಹೆಸರಿನ ಲಿಸ್ಟ್ ತುಂಬಾ ದೊಡ್ಡದಾಗಿದೆ ಎಂದು ಮಾಹಿತಿ ಸಿಕ್ಕಿದೆ. ಹೋಂಡಾ ಸಂಸ್ಥೆಯು ಇಂಡಿಯಾದಲ್ಲಿ ಸ್ಕೂಪಿ ಹೆಸರಿನ ಹೊಸ ದ್ವಿಚಕ್ರವಾಹನವನ್ನು ಪರಿಚಯಿಸಲಿದೆ, ಇದಕ್ಕೆ ಪೇಟೆಂಟ್ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಸಿಕ್ಕಿದ್ದು, ವಾಹನದ ಉತ್ಪನ್ನ ಶುರು ಮಾಡುವ ಬಗ್ಗೆ ಪೇಟೆಂಟ್ ನಲ್ಲಿ ಖಚಿತ ಮಾಹಿತಿ ಇರಲಿಲ್ಲ. ಅದರೆಕ್ಗ ಭಾರತದಲ್ಲಿ ಈ ದ್ವಿಚಕ್ರ ಬರುತ್ತದೆ ಎಂದು ಹೇಳಲಾಗುತ್ತಿದೆ.
ಈ ಹೋಂಡಾ ಸ್ಕೂಪಿಯಲ್ಲಿ, 15.4 ಲೀಟರ್ ಅಂಡರ್ ಸೀಟ್ ಸ್ಟೋರೇಜ್, ಯು.ಎಸ್.ಬಿ ಚಾರ್ಜಿಂಗ್ ಪೋರ್ಟ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕೀಲೆಸ್ ಇಗ್ನಿಶನ್, ಪ್ರೊಜೆಕ್ಟರ್ ಎಲ್.ಇ.ಡಿ ಹೆಡ್ ಲೈಟ್, ಮಲ್ಟಿ ಫಂಕ್ಷನಲ್ ಹುಕ್, ಹಾಗೂ ಸೈಡ್ ಸ್ಟ್ಯಾಂಡ್, ಇಂಡಿಕೇಟರ್ ಹಾಗೂ ಇನ್ನಿತರ ವೈಶಿಷ್ಟ್ಯಗಳಿವೆ. ಈ ಸ್ಕೂಪಿಯಲ್ಲಿ ಸ್ಮಾರ್ಟ್ ಕೀ ಇದೆ, ಹಾಗಾಗಿ ಇದರಲ್ಲಿ ಆನ್ಸರ್ ಬ್ಯಾಕ್ ಸ್ಪೆಷಾಲಿಟಿ, ಹಾಗೂ ಆಂಟಿ ಥೆಫ್ಟ್ ಅಲಾರಂ ಸಹ ಇದೆ. ಜೊತೆಗೆ ESAF ಫ್ರೇಮ್ ಜೊತೆಯಲ್ಲಿ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ, ಟೆಲಿಸ್ಲೋಪಿಕ್ ಮತ್ತು ಮೊನೊಶಾಕ್ ಅಮಾನತು ಸಹ ಇದೆ. ಚಕ್ರಗಳು 12 ಇಂಚ್ ಇದ್ದು, ಮಿಶ್ರಲೋಹಗಳಿಂದ ಮಾಡಲ್ಪಟ್ಟಿದೆ, ಸ್ಕೂಟರ್ ಮುಂದೆ ಡಿಸ್ಕ್ ಬ್ರೇಕ್ ಮತ್ತು ಹಿಂದೆ ಡ್ರಮ್ ಬ್ರೇಕ್ ಬರುತ್ತದೆ. ಈಗಾಗಲೇ ಇರುವ ಆಕ್ಟಿವಾ ಮತ್ತು ಡಿಯೋ ಬೈಕ್ ಗಳಲ್ಲಿ ಇರುವ, 109.51cc ಸಿಂಗಲ್ ಸಿಲಿಂಡರ್, ಏರ್ ಕೋಲ್ಡ್ SOHC ಇಂಜಿನ್ ಸ್ಕೂಪಿಯಲ್ಲಿರುತ್ತದೆ. ಇದರಲ್ಲಿ 7.76 ಪವರ್, ಹಾಗೂ 9nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಭಾರತದಲ್ಲಿ ಅತ್ಯುತ್ತಮವಾದ ಮೈಲೇಜ್ ನೀಡುವ ಸ್ಕೂಟರ್ ಇದಾಗಿರಬಹುದು ಎನ್ನಲಾಗುತ್ತಿದೆ.
Comments are closed.