ಎಲ್ಲಾ ಗಾಸಿಪ್ ಗಳಿಗೂ ತೆರೆ ಎಳೆದು ತಕ್ಕ ಉತ್ತರ ಕೊಟ್ಟ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ.. ಏನಿದು ಸುದ್ದಿ ಗೊತ್ತೇ?
ಸಾಯಿ ಪಲ್ಲವಿ, ದಕ್ಷಿಣ ಭಾರ್ತಾ ಚಿತ್ರರಂಗದ ಪ್ರತಿಭಾನ್ವಿತ ನಟಿ. ಇವರು ಗ್ಲಾಮರ್ ಗೆ ಪ್ರಾಮುಖ್ಯತೆ ಕೊಡದೆ, ಉತ್ತಮ ಕಥಾಪಾತ್ರವನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಸಿನಿಪ್ರಿಯರ ಮನಸ್ಸಿನಲ್ಲಿರುವವರು ನಟಿ ಸಾಯಿಪಲ್ಲವಿ. ತೆಲುಗು, ತಮಿಳು ಮತ್ತು ಮಲಯಾಳಂ ಮೂರು ಭಾಷೆಯ ಚಿತ್ರರಂಗದಲ್ಲಿ ಇವರಿಗೆ ಭಾರಿ ಬೇಡಿಕೆ ಇದೆ. ಈ ಮೂರು ಚಿತ್ರರಂಗದ ಸ್ಟಾರ್ ನಟರು ಸಹ ಸಾಯಿಪಲ್ಲವಿ ಅವರೊಡನೆ ಕೆಲಸ ಮಾಡಲು ಇಷ್ಟಪಡುತ್ತಾರೆ. ಆದರೆ ಇತ್ತೀಚೆಗೆ ನಟಿ ಸಾಯಿಪಲ್ಲವಿ ಅವರ ಬಗ್ಗೆ ಗಾಸಿಪ್ ಒಂದು ಕೇಳಿ ಬಂದಿತ್ತು, ಇದೀಗ ಆ ಗಾಸಿಪ್ ಗೆ ತಕ್ಕ ಉತ್ತರ ಕೊಟ್ಟಿದ್ದಾರೆ ಪಲ್ಲವಿ.
ಸಾಯಿಪಲ್ಲವಿ ಅವರು ಕೊನೆಯದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದು, ಕಳೆದ ವರ್ಷಾಂತ್ಯದಲ್ಲಿ ತೆರೆಕಂಡ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ, ಈ ಸಿನಿಮಾದ ದೇವದಾಸಿ ಪಾತ್ರಕ್ಕೆ ಸಾಯಿಪಲ್ಲವಿ ಎಲ್ಲರ ಮೆಚ್ಚುಗೆ ಪಡೆದುಕೊಂಡರು. ಇನ್ನು ಸಾಯಿಪಲ್ಲವಿ ಮತ್ತು ರಾಣಾ ದಗ್ಗುಬಾಟಿ ಅಭಿನಯದ ವಿರಾಟ ಪರ್ವಂ ಸಿನಿಮಾ ಜುಲೈ 1ರಂದು ತೆರೆಕಾಣಲಿದೆ. ಇದನ್ನು ಹೊರತುಪಡಿಸಿ ಸಾಯಿಪಲ್ಲವಿ ಅಭಿನಯದ ಮತ್ಯಾವ ಹೊಸ ಸಿನಿಮಾ ಸಹ ಅನೌನ್ಸ್ ಆಗಿಲ್ಲ. ಹಾಗಾಗಿ ಸಾಯಿಪಲ್ಲವಿ ಅವರಿಗೆ ಬಹುಶಃ ಮದುವೆ ಫಿಕ್ಸ್ ಆಗಿರಬಹುದು ಹಾಗಾಗಿ ಅವರು ಚಿತ್ರರಂಗದಿಂದ ದೂರ ಸರಿಯಲಿದ್ದಾರೆ, ಅದರಿಂದಲೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಎಂದು ಗಾಸಿಪ್ ಹಬ್ಬಿತ್ತು. ಅದೆಲ್ಲದಕ್ಕೂ ಈಗ ಸಾಯಿಪಲ್ಲವಿ ಅವರು ಉತ್ತರ ನೀಡಿದ್ದಾರೆ.
ಒಬ್ಬ ಮಹಿಳೆ, ಓಡುತ್ತಿರುವ, ಅಂದ್ರೆ ರಸ್ತೆಯಲ್ಲಿ ಹಾರುತ್ತಿರುವ ಫೋಟೋ ಒಂದನ್ನು ಸಾಯಿಪಲ್ಲವಿ ಅವರು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಕಾಲು ಮಾತ್ರ ಕಾಣಿಸುತ್ತಿದ್ದು, ಮಹಿಳೆಯ ಮುಖ ಕಾಣಿಸುತ್ತಿಲ್ಲ, ಆ ಫೋಟೋ ಶೇರ್ ಮಾಡಿ, “ಅವಳು ಒಂದು ಸರ್ಪ್ರೈಸ್.. ಇದೇ ಸೋಮವಾರ ನಿಮ್ಮೆಲ್ಲರನ್ನು ನೋಡಲು ಆಕೆ ಬರುತ್ತಾಳೆ ಅನ್ನಿಸುತ್ತದೆ..” ಎಂದು ಬರೆದು ಫೋಟೋ ಪೋಸ್ಟ್ ಮಾಡಿದ್ದು, ಸಾಯಿಪಲ್ಲವಿ ಅಭಿನಯಿಸುತ್ತಿರುವ ಹೊಸ ಸಿನಿಮಾ ಬಗೆಗಿನ ಅಪ್ಡೇಟ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದಾರೆ. ನಾಳೆ ಸಾಯಿಪಲ್ಲವಿ ಅವರ ಹುಟ್ಟುಹಬ್ಬ, ಹಾಗಾಗಿ ನಾಳೆ ಈ ವಿಚಾರಕ್ಕೆ ತೆರೆಬೀಳಲಿದ್ದು, ಇವರ ಅಭಿಮಾನಿಗಳು ಈ ವಿಚಾರ ತಿಳಿದು ಬಹಳ ಸಂತೋಷಪಟ್ಟಿದ್ದಾರೆ. ಈ ಮೂಲಕ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ ನಟಿ ಸಾಯಿಪಲ್ಲವಿ.
Comments are closed.