ತೆಲುಗಿನಲ್ಲಿ ಮಿಂಚುತ್ತಿದ್ದ ಕನ್ನಡತಿ ಕೃತಿ ಶೆಟ್ಟಿ ರವರಿಗೆ ಶಾಕ್ ಮೇಲೆ ಶಾಕ್, ಸ್ಟಾರ್ ನಟರು ಕೃತಿ ಬೇಡ ಎನ್ನುತ್ತಿರುವುದು ಯಾಕೆ ಗೊತ್ತೇ??
ಮೂಲತಃ ಕರ್ನಾಟಕದವರಾದ ಕೃತಿ ಶೆಟ್ಟಿ ಅವರು ಇಂದು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ ಎನ್ನಿಸಿಕೊಂಡಿದ್ದಾರೆ. ಈ ಹಿಂದೆ ತಮಿಳು ಸಿನಿಮಾಗಳಲ್ಲಿ ನಟಿಸಿದ್ದ ಕೃತಿ ಶೆಟ್ಟಿ ಅವರು, ತೆಲುಗು ಚಿತ್ರರಂಗಕ್ಕೆ ಉಪ್ಪೇನ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಉಪ್ಪೇನ ಸಿನಿಮಾ ಸೂಪರ್ ಹಿಟ್ ಎನ್ನಿಸಿಕೊಂಡ ನಂತರ ಕೃತಿ ಶೆಟ್ಟಿ ಅವರು ಹಿಂದಿರುಗಿ ನೋಡಿದ್ದೇ ಇಲ್ಲ, ಟಾಲಿವುಡ್ ನಲ್ಲಿ ಇವರಿಗೆ ಸಾಲು ಸಾಲು ಸಿನಿಮಾ ಆಫರ್ ಗಳು ಬರಲು ಶುರುವಾದವು. ಪ್ರಸ್ತುತ ಕೃತಿ ಶೆಟ್ಟಿ ಕೈಯಲ್ಲಿ ಬರೋಬ್ಬರಿ 8 ಸಿನಿಮಾಗಳಿವೆ ಎನ್ನಲಾಗುತ್ತಿದೆ. ಆದರೆ ಕೃತಿ ಅವರಿಗೆ ತೆಲುಗಿನ ಸ್ಟಾರ್ ನಟರ ಜೊತೆ ಅಭಿನಯಿಸಬೇಕು ಎನ್ನುವ ಹಂಬಲ.
ಹಾಗಾಗಿ ಅವರು ತಮ್ಮ ಮ್ಯಾನೇಜರ್ ಬಳಿ, ಸ್ಟಾರ್ ನಟರ ಸಿನಿಮಾಗಳನ್ನು ಹಿಡಿಯಲು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಕೃತಿ ಶೆಟ್ಟಿ ಅವರ ಮ್ಯಾನೇಜರ್, ಸ್ಟಾರ್ ನಿರ್ದೇಶಕ ಮತ್ತು ನಟರನ್ನು ಭೇಟಿ ಮಾಡಿದ್ದು, ಏನು ಪ್ರಯೋಜನವಾಗಿಲ್ಲ. ತೆಲುಗಿನ ಸ್ಟಾರ್ ನಟರಾದ ಮಹೇಶ್ ಬಾಬು, ಜ್ಯೂನಿಯರ್ ಎನ್.ಟಿ.ಆರ್, ರಾಮ್ ಚರಣ್ ಇವರೆಲ್ಲರೂ ಕೃತಿ ಶೆಟ್ಟಿ ಅವರನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣಗಳು ಸಹ ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ, ಸ್ಟಾರ್ ನಟರ ಸಿನಿಮಾ ಸಿಗಬೇಕು ಅಂದ್ರೆ ಕಾಜಲ್ ಅಗರ್ವಾಲ್ ಅವರ ಹಾಗೆ ಬೋಲ್ಡ್ ಮತ್ತು ಗ್ಲಾಮರಸ್ ಆಗಿರಬೇಕು, ಅಥವಾ ಕೀರ್ತಿ ಸುರೇಶ್ ಅವರ ಹಾಗೆ ಅದ್ಭುತವಾದ ಅಭಿನೇತ್ರಿ ಆಗಿರಬೇಕು. ಇಲ್ಲವೇ ಸಮಂತಾ ಅವರ ಹಾಗೆ ಎರಡರ ಮಿಶ್ರಣ ಆಗಿರಬೇಕು. ಕೃತಿ ಶೆಟ್ಟಿ ಅವರಲ್ಲಿ ಆ ಎರಡು ಅಂಶಗಳು ಹೊರಬರಬೇಕಿದೆ.
ಹಾಗಾಗಿ ಸ್ಟಾರ್ ನಟರು ಅವರನ್ನು ತಿರಸ್ಕಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ಬಗ್ಗೆ ಕೃತಿ ಶೆಟ್ಟಿ ಅವರಿಗೂ ಬೇಸರ ಆಗಿದೆ ಎನ್ನಲಾಗುತ್ತಿದೆ. ಉಪ್ಪೇನ ಮತ್ತು ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ, ಕಾಣಿಸಿಕೊಂಡಿದ್ದರು ಕೃತಿ. ನಂತರ ಬಂಗಾರರಾಜು ಸಿನಿಮಾದಲ್ಲಿ ಸಹ ಇವರ ಪಾತ್ರ ಜನರಿಗೆ ಇಷ್ಟವಾಗಿತ್ತು, ಕೃತಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ವಾರಿಯರ್, ಮಾರ್ಚಲ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಕೃತಿ ನಟಿಸುತ್ತಿದ್ದಾರೆ. ಆಫರ್ ಗಳೇನೋ ಹೆಚ್ಚಾಗಿಯೇ ಇದ್ದು. ಸ್ಟಾರ್ ನಟರ ಸಿನಿಮಾ ಸಿಗುತ್ತಿಲ್ಲ ಎನ್ನುವ ಬೇಸರ ಈ ನಟಿಗಿದೆ. ಈ ಹಿಂದೆ ಕೃತಿ ಶೆಟ್ಟಿ ಅವರು ಬಾಲಯ್ಯ ಅವರ ಸಿನಿಮಾ ರಿಜೆಕ್ಟ್ ಮಾಡಿ ಸುದ್ದಿಯಾಗಿದ್ದರು, ಬಳಿಕ ತಮ್ಮ ಬಗ್ಗೆ ಹರಡಿದ್ದ ಗಾಸಿಪ್ ಇಂದ ಬೇಸರವಾಗಿ, ಜನರ ಬಳಿ ನನ್ನ ಬಗ್ಗೆ ಹಾಗೆಲ್ಲ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಇದೀಗ ಕೃತಿ ಶೆಟ್ಟಿ ಬಗ್ಗೆ ಮತ್ತೊಂದು ಗಾಸಿಪ್ ಸುದ್ದಿ ಮಾಡುತ್ತಿದೆ.
Comments are closed.