ಬಾಸ್ ಆಫ್ ಕ್ರಿಕೆಟ್ ಕ್ರಿಸ್ ಗೇಲ್ ಅವರು ಐಪಿಎಲ್ ಇಂದ ಹಿಂದೆ ಸರಿಸಿದ್ದೇಕೆ?? ಅಸಲಿ ಸತ್ಯ ಏನು ಗೊತ್ತೇ??
ಕ್ರಿಸ್ ಗೇಲ್, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅದ್ಭುತವಾದ ಬ್ಯಾಟ್ಸ್ಮನ್ ಇವರು. ಕ್ರಿಕೆಟ್ ಲೋಕದಲ್ಲಿ ಟಿ20.ಪಂದ್ಯಗಳ ಬಾಸ್ ಎಂದೇ ಇವರನ್ನು ಕರೆಯುತ್ತಾರೆ. ಕ್ರಿಸ್ ಗೇಲ್ ಅವರು ನಮ್ಮ ಐಪಿಎಲ್ ಪಂದ್ಯಗಳಲ್ಲಿ ಸಹ ತೊಡಗಿಕೊಂಡಿದ್ದರು. ಐಪಿಎಲ್ ಜೊತೆಯಲ್ಲಿ ಇವರ ಜರ್ನಿ ಬಹಳ ದೊಡ್ಡದು.ಆದರೆ ಈಗ ಕ್ರಿಸ್ ಗೇಲ್ ಅವರು ಐಪಿಎಲ್ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ, ಈ ಬಾರಿ ಹರಾಜಿನಲ್ಲಿ ಸಹ ಕ್ರಿಸ್ ಗೇಲ್ ಅವರು ಕಾಣಿಸಿಕೊಳ್ಳಲಿಲ್ಲ. ಇದೀಗ ಐಪಿಎಲ್ ಇಂದ ಹಿಂದೆ ಸರಿಯಲು ಕಾರಣವೇನು ಎನ್ನುವುದನ್ನು ತಿಳಿಸಿದ್ದಾರೆ. ಆ ಕಾರಣ ತಿಳಿದು ಅಭಿಮಾನಿಗಳು ನಿಜಕ್ಕೂ ಶಾಕ್ ಗೆ ಒಳಗಾಗಿದ್ದಾರೆ…
ಕ್ರಿಸ್ ಗೇಲ್ ಅವರು ಟಿ20 ಫಾರ್ಮೇಟ್ ಕ್ರಿಕೆಟ್ ನಲ್ಲಿ ಪ್ರವೀಣರು, ರನ್ ಗಳ ಮಳೆಯನ್ನೇ ಹರಿಸುವ ಸಾಮರ್ಥ್ಯ ಇರುವವರು ಕ್ರಿಸ್ ಗೇಲ್. ಐಪಿಎಲ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳನ್ನು ಗಳಿಸಿರುವ ಬ್ಯಾಟ್ಸ್ಮನ್ ಗಳಲ್ಲಿ ಇವರು ಒಬ್ಬರು. ಟಿ20 ಪಂದ್ಯಗಳಲ್ಲಿ ಇವರ ಸಾಧನೆ ಹೇಗಿದೆ ಅಂದ್ರೆ, ಕ್ರಿಸ್ ಗೇಲ್ ಅವರು ಹುಟ್ಟಿರುವುದೇ ಕ್ರಿಕೆಟ್ ಗಾಗಿ ಎಂದು ಹೇಳುವಷ್ಟರ ಮಟ್ಟಿಗೆ ಇತ್ತು ಇವರ ಪರ್ಫಾರ್ಮೆನ್ಸ್, ಐಪಿಎಲ್ ಆರಂಭದಲ್ಲಿ ಕ್ರಿಸ್ ಗೇಲ್ ಅವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡುತ್ತಿದ್ದರು, ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಂದ್ ಕ್ರಿಸ್ ಗೇಲ್ ಅವರು ಹಲವು ವರ್ಷಗಳ ಕಾಲ ಆರ್.ಸಿ.ಬಿ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದರು, ಆರ್.ಸಿ.ಬಿ ತಂಡದಲ್ಲಿದ್ದಾಗ ಸಾಕಷ್ಟು ರೆಕಾರ್ಡ್ ಗಳನ್ನು ಸೃಷ್ಟಿಸಿದ್ದಾರೆ ಕ್ರಿಸ್ ಗೇಲ್. ಇದಾದ ಬಳಿಕ ಪಂಜಾಬ್ ಸೂಪರ್ ಕಿಂಗ್ಸ್ ತಂಡದ ಪರವಾಗಿ ಸಹ ಕೆಲ ಸಮಯ ಆಡಿದ್ದಾರೆ.
ಆದರೆ ಈ ವರ್ಷ ಐಪಿಎಲ್ ಹರಾಜಿನಿಂದಲೇ ದೂರ ಉಳಿದರು ಕ್ರಿಸ್ ಗೇಲ್. ಇದರ ಬಗ್ಗೆ ಅನೇಕರಿಗೆ ಅನುಮಾನ ಇತ್ತು, ಪ್ರಶ್ನೆ ಸಹ ಮೂಡಿತ್ತು. ಇದಕ್ಕೀಗ ಸ್ವತಃ ಕ್ರಿಸ್ ಗೇಲ್ ಅವರೇ ಉತ್ತರ ಕೊಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡಿದ ಕ್ರಿಸ್ ಗೇಲ್ ಅವರು ಐಪಿಎಲ್ ಪಂದ್ಯಗಳಿಂದ ಹಿಂದೆ ಸರಿದಿರುವ ಬಗ್ಗೆ ಮಾತನಾಡಿದ್ದು, “ಐಪಿಎಲ್ ನಲ್ಲಿ ನನಗೆ ಸಿಗಬೇಕಾದಂತಹ ಗೌರವಗಳು ಸಿಗಲಿಲ್ಲ. ಹಾಗಾಗಿ ನಾನು ಐಪಿಎಲ್ ಇಂದ ದೂರ ಸರಿದಿದ್ದೇನೆ. ಐಪಿಎಲ್ ಗಾಗಿ ನಾನು ಎಷ್ಟೇ ಶ್ರಮ ಹಾಕಿದರು ಸಹ, ನನ್ನನ್ನು ನಡೆಸಿಕೊಳ್ಳಬೇಕಾದ ರೀತಿಯಲ್ಲಿ ಅವರು ನಡೆಸಿಕೊಳ್ಳಲಿಲ್ಲ, ಹಾಗಾಗಿ ಹಿಂದಕ್ಕೆ ಸರಿದಿದ್ದೇನೆ..”ಎಂದು ಹೇಳಿದ್ದಾರೆ ಕ್ರಿಸ್ ಗೇಲ್. ಕ್ರಿಸ್ ಗೇಲ್ ಅವರ ಈ ಮಾತುಗಳನ್ನು ಕೇಳಿ, ಅಭಿಮಾನಿಗಳು ನಿಜಕ್ಕೂ ಶಾಕ್ ಆಗಿದ್ದಾರೆ.
Comments are closed.