ಬಿಡುಗಡೆಯಾದ ವಾರದ ಟಿಆರ್ಪಿ ಲಿಸ್ಟ್, ಈ ವಾರ ಜನರ ಮನಗೆದ್ದ ಧಾರಾವಾಹಿಗಳು ಯಾವ್ಯಾವು ಗೊತ್ತೇ??
ಪ್ರತಿ ವಾರ ಧಾರಾವಾಹಿಗಳ ಜನಪ್ರಿಯತೆ ಬಗ್ಗೆ ತಿಳಿಸುವುದು ಟಿ.ಅದ್.ಪಿ ರೇಟಿಂಗ್ ಗಳು. ಪ್ರತಿವಾರ ಈ ರೇಟಿಂಗ್ ಬಡಲಾಗುತ್ತದೆ, ಧಾರಾವಾಹಿಯ ಕಥೆ ಸಾಗಿ ಜನರಿಗೆ ಇಷ್ಟ ಆಗುವ ರೀತಿಯಲ್ಲಿ ಟಿ.ಆರ್.ಪಿ ರೇಟಿಂಗ್ ಬದಲಾಗುತ್ತದೆ. ಈ ವಾರ ಟಿ.ಆರ್.ಪಿ ರೇಟಿಂಗ್ ತಲೆಕೆಳಗಾಗಿದ್ದು, ಭಾರಿ ಬದಲಾವಣೆ ಕಂಡುಬಂದಿದೆ. ಈ ವಾರ ಟಿ.ಆರ್.ಪಿ ರೇಟಿಂಗ್ ನಲ್ಲಿ ಆಗಿರುವ ಬದಲಾವಣೆ ನೋಡಿದರೆ ನಿಮಗೂ ಶಾಕ್ ಆಗುವುದು ಗ್ಯಾರಂಟಿ..
ಈ ವಾರ ಜೀಕನ್ನಡ ವಾಹಿನಿಯ ಗಟ್ಟಿಮೇಳ ಧಾರಾವಾಹಿ 10 ಟಿವಿಆರ್ ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿದೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಸಧ್ಯಕ್ಕೆ ಅಮ್ಮ ಮಕ್ಕಳ ಸೆಂಟಿಮೆಂಟ್ ದೃಶ್ಯಗಳು ಪ್ರಸಾರವಾಗುತ್ತಿದ್ದು ಜನರಿಗೆ ತುಂಬಾ ಇಷ್ಟವಾಗಿದೆ. ಇತ್ತೀಚಿನ ಕೋರ್ಟ್ ಡ್ರಾಮಾ ಸಂಚಿಕೆಗಳು ಸಹ ಜನರಿಗೆ ತುಂಬಾ ಇಷ್ಟವಾಗಿತ್ತು. ಧ್ರುವ ಮತ್ತೆ ಮರಳಿ ಬಂದಿರುವುದು ವಸಿಷ್ಠ ಕುಟುಂಬಕ್ಕೆ ಬಹಳ ಸಂತೋಷ ತಂದಿದೆ. ಇನ್ನು ಎರಡನೇ ಸ್ಥಾನಕ್ಕೆ ಇಳಿದಿದೆ, ಪುಟ್ಟಕ್ಕನ ಮಕ್ಕಳು ಧಾರಾವಾಹಿ, 9.00 ಟಿವಿಆರ್ ರೇಟಿಂಗ್ ಪಡೆದಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದಿರುವುದು ನಿಜಕ್ಕೂ ಶಾಕ್ ತಂದಿದೆ. ಮೂರನೇ ಸ್ಥಾನದಲ್ಲಿ 7.1 ಟಿವಿಆರ್ ರೇಟಿಂಗ್ ಪಡೆದು ನಿಂತಿದೆ ಹಿಟ್ಲರ್ ಕಲ್ಯಾಣ ಧಾರಾವಾಹಿ, ಹಿಟ್ಲರ್ ಕಲ್ಯಾಣ ಧಾರಾವಾಹಿ ಕಥೆ ಒಳ್ಳೆಯ ಹಂತದಲ್ಲಿ ಸಾಗುತ್ತಿದೆ, ಜನರಿಗೆ ಕುತೂಹಲ ಹೆಚ್ಚಿಸಿದೆ.
10ನೇ ಸ್ಥಾನದಲ್ಲಿ ಬರೋಬ್ಬರಿ 4 ಧಾರಾವಾಹಿಗಳಿವೆ, 3.8ಟಿವಿಆರ್ ರೇಟಿಂಗ್ ಪಡೆದು, ಕನ್ನಡತಿ, ಪಾರು, ಲಕ್ಷಣ ಮತ್ತು ಗಿಣಿರಾಮ ಧಾರಾವಾಹಿ 10ನೇ ಸ್ಥಾನದಲ್ಲಿವೆ. ಟಾಪ್ ನಲ್ಲಿರುತ್ತಿದ್ದ ಧಾರಾವಾಹಿಗಳು, ಕೆಳಕ್ಕೆ ಇಳಿದಿವೆ. ಇನ್ನು ರಿಯಾಲಿಟಿ ಶೋಗಳ ವಿಚಾರಕ್ಕೆ ಬರುವುದಾದರೆ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಮೊದಲ ಸ್ಥಾನದಲ್ಲಿದ್ದು, 9.0 ರೇಟಿಂಗ್ ಪಡೆದಿದೆ. ಎರಡನೇ ಸ್ಥಾನದಲ್ಲಿ 7.8 ರೇಟಿಂಗ್ ಪಡೆದು ನಿಂತಿದೆ ಡ್ರಾಮಾ ಜ್ಯೂನಿಯರ್ಸ್ ಶೋ, 3.9 ರೇಟಿಂಗ್ ಪಡೆದು, ಮೂರನೇ ಸ್ಥಾನದಲ್ಲಿದೆ ಗಿಚ್ಚಿ ಗಿಲಿ ಗಿಲಿ ಶೋ. ಹಾಗೂ ಕನ್ನಡದಲ್ಲಿ ಡಬ್ಬಿಂಗ್ ಧಾರಾವಾಹಿಗಳ ಹವಾ ಹೆಚ್ಚಾಗಿದ್ದು, ಅವುಗಳನ್ನು ಜನರು ಇಷ್ಟಪಟ್ಟು ನೋಡಲು ಶುರು ಮಾಡಿದ್ದಾರೆ. ಇದೀಗ ನಮ್ಮ ಕನ್ನಡ ಧಾರಾವಾಹಿಗಳು ವೀಕ್ಷಕರನ್ನು ಸೆಳೆಯಲು ಏನು ಮಾಡಲಿದೆ ಎಂದು ಕಾದು ನೋಡಬೇಕಿದೆ.
Comments are closed.