ಕೆಜಿಎಫ್ 2 ಎದುರು ಸಿನಿಮಾ ಬಿಡುಗಡೆ ಮಾಡಿ ಸೋತ ವಿಜಯ್ ತಂಡ ಕೆಜಿಎಫ್ 2 ವೀಕ್ಷಣೆ ಮಾಡಿ ಹೇಳಿದ್ದೇನು ಗೊತ್ತೇ? ವಿವಾದ ಸೃಷ್ಟಿ ಮಾಡಿದ ಮಾತುಗಳೇನು ಗೊತ್ತೇ?
ನಮ್ಮ ಕನ್ನಡದ ಕೆಜಿಎಫ್2 ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಚಾರ ನಮಗೆಲ್ಲ ಗೊತ್ತೇ ಇದೆ. ಕೆಜಿಎಫ್2 ಬಿಡುಗಡೆಯಾಗಿ 25 ದಿನ ಕಳೆದಿದೆ, ಆದರೆ ಸಿನಿಮಾ ಮೇಲಿನ ಕ್ರೇಜ್ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಈಗಲೂ ಕೆಜಿಎಫ್2 ಸಿನಿಮಾ ವೀಕೆಂಡ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಕೆಜಿಎಫ್2 ಸಿನಿಮಾ ಆರ್.ಆರ್.ಆರ್ ಕಲೆಕ್ಷನ್ ಸಹ ಬೀಟ್ ಮಾಡಿ ಮುಂದಕ್ಕೆ ಸಾಗುತ್ತಿದೆ. ನಾವೆಲ್ಲರೂ ನೋಡಿದ್ದ ಹಾಗೆ, ಕೆಜಿಎಫ್2 ಸಿನಿಮಾಗೆ ಕಾಂಪಿಟೇಶನ್ ಆಗಿ ತಮಿಳಿನ ಸ್ಟಾರ್ ನಟ ವಿಜಯ್ ಅವರ ಬೀಸ್ಟ್ ಸಿನಿಮಾ ಬಿಡುಗಡೆ ಆಗಿತ್ತು, ಬೀಸ್ಟ್ ಸಿನಿಮಾ ಸೋತಿದ್ದು ಸಹ ನಾವೆಲ್ಲರೂ ನೋಡಿದ್ದೇವೆ.
ಇದೀಗ ನಟ ವಿಜಯ್ ಅವರ ತಂದೆ ಕೆಜಿಎಫ್2 ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ. “ಸಿನಿಮಾದಲ್ಲಿ ಕೆಲವು ಲೋಪದೋಷಗಳಿವೆ..ಆದರೆ ಸ್ಕ್ರೀನ್ ಪ್ಲೇ ಚೆನ್ನಾಗಿರುವ ಕಾರಣ, ಸಿನಿಪ್ರಿಯರು ಲೋಪದೋಷಗಳನ್ನು ಪಕ್ಕಕ್ಕಿಟ್ಟು ಸಿನಿಮಾವನ್ನು ಗೆಲ್ಲಿಸಿದ್ದಾರೆ..” ಎಂದು ನಟ ವಿಜಯ್ ಅವರ ತಂದೆ, ನಿರ್ದೇಶಕ ಚಂದ್ರಶೇಖರ್ ಹೇಳಿದ್ದಾರೆ. ಈ ವಿಚಾರವನ್ನು ಸಿನಿಮಾ ಅನಾಲಿಸ್ಟ್ ಆಗಿರುವ ರಮೇಶ್ ಬಾಲಾ ಅವರು ಟ್ವೀಟ್ ಮೂಲಕ ತಿಳಿಸಿದ್ದು, ನಟ ವಿಜಯ್ ಅವರ ತಂದೆಯ ಪ್ರತಿಕ್ರಿಯೆ ತಿಳಿದು, ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿ, ವಿಜಯ್ ಅವರ ತಂದೆಗೆ ಸರಿಯಾದ ಉತ್ತರ ನೀಡಿದ್ದಾರೆ, ಸಿನಿಪ್ರಿಯರು..
“ಮೊದಲು ತಮ್ಮ ಮಗನ ಸಿನಿಮಾದಲ್ಲಿರುವ ಲೋಪದೋಷಗಳನ್ನು ನೋಡಿಕೊಳ್ಳಲಿ, ನಂತರ ಬೇರೆ ಸಿನಿಮಾಗಳ ಬಗ್ಗೆ ಮಾತನಾಡಲಿ..” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು, “ಏನೇ ಆದರೂ.. ಹಿಟ್ ಅಂದ್ರೆ ಹಿಟ್, ಫ್ಲಾಪ್ ಅಂದ್ರೆ ಫ್ಲಾಪ್..” ಎಂದು ಹೇಳಿದ್ದಾರೆ. ಇನ್ನೊಬ್ಬರು, “ಕೆಜಿಎಫ್2 ಸಿನಿಮಾದಲ್ಲಿ ಯಾವುದೇ ಲೋಪದೋಷ ಇಲ್ಲ. ಪ್ರಶಾಂತ್ ನೀಲ್ ಎಲ್ಲದಕ್ಕೂ ತಾರ್ಕಿಕ ಉತ್ತರ ನೀಡಿದ್ದಾರೆ..” ಎಂದು ಟ್ವೀಟ್. ನಟ ವಿಜಯ್ ಅವರ ಬೀಸ್ಟ್ ಸಿನಿಮಾ ಫ್ಲಾಪ್ ಆದಾಗಲು ಸಹ ಅವರ ತಂದೆ ಚಂದ್ರಶೇಖರ್, ನಿರ್ದೇಶಕ ನೆಲ್ಸನ್ ದಿಲೀಪ್ ಅವರದ್ದೇ ತಪ್ಪು ಎಂದಿದ್ದರು. ವಿಜಯ್ ನಟನೆ ಚೆನ್ನಾಗಿದೆ, ಸಿನಿಮಾ ಕಥೆ ಮತ್ತು ಸ್ಕ್ರೀನ್ ಪ್ಲೇ ಚೆನ್ನಾಗಿಲ್ಲ ಎಂದಿದ್ದರು. ಇದೀಗ ಬೀಸ್ಟ್ ಸಿನಿಮಾ ಸೋತ ಬಳಿಕ, ಕೆಜಿಎಫ್2 ಸಿನಿಮಾ ಬಗ್ಗೆ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.
Comments are closed.