ಜನರ ಹಾದಿ ತಪ್ಪಿಸಿ ಹಣಗಳಿಸುತ್ತಿದ್ದಾರಾ ಬಾಲಿವುಡ್ ಬೆಡಗಿ ಆಲಿಯಾ ಭಟ್, ಸಾಕ್ಷಿ ಸಮೇತ ವಿವರಣೆ ನೀಡಿದ ನೆಟ್ಟಿಗರು ಹೇಳಿದ್ದೇನು ಗೊತ್ತೇ?
ಬಾಲಿವುಡ್ ನ ಕ್ಯೂಟ್ ಬೆಡಗಿ ಆಲಿಯಾ ಭಟ್ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆಲಿಯಾ ಭಟ್ ಅವರು ಬಾಲಿವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟು 10 ವರ್ಷ ಕಳೆಯುತ್ತಿದೆ. ಇಷ್ಟು ವರ್ಷಗಳಲ್ಲಿ ಈ ನಟಿ ಸಾಕಷ್ಟು ಬಾರಿ ಟ್ರೋಲ್ ಗೆ ಒಳಗಾಗಿದ್ದಾರೆ. ಅನೇಕ ವಿಚಾರಗಳಿಂದ, ಅವರು ನೀಡುವ ಹೇಳಿಕೆಗಳಿಂದ ಟ್ರೋಲ್ ಗೆ ಒಳಗಾಗಿದ್ದಾರೆ ನಟಿ ಆಲಿಯಾ ಭಟ್. ಇದೀಗ ಜಾಹೀರಾತಿನ ವಿಚಾರದಿಂದ ಟ್ರೋಲ್ ಆಗುತ್ತಿದ್ದಾರೆ. ಜನರ ಹಾದಿಯನ್ನು ತಪ್ಪಿಸುತ್ತಿದ್ದಾರೆ ಆಲಿಯಾ ಭಟ್ ಎಂದು ಆಕ್ರೋಶಗೊಂಡಿದ್ದಾರೆ ನೆಟ್ಟಿಗರು, ಏನಿದು ಸುದ್ದಿ ? ತಿಳಿಸುತ್ತೇವೆ ನೋಡಿ..
ಸಿನಿಮಾ ಕಲಾವಿದರು ಅನೇಕ ಜಾಹೀರಾತುಗಳಲ್ಲಿ ಕಾಣಿಸುಕೊಳ್ಳುವುದು ಕಾಮನ್, ಸಿನಿಮಾ ಕಲಾವಿದರು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ, ತಮ್ಮ ಬ್ರ್ಯಾಂಡ್ ಇಂಪ್ರೂವ್ ಆಗುತ್ತದೆ, ಜನರು ಆ ಪ್ರಾಡಕ್ಟ್ ಗಳನ್ನು ಬಳಸುತ್ತಾರೆ ಎನ್ನುವುದು ದೊಡ್ಡ ದೊಡ್ಡ ಕಂಪನಿಗಳ ಟ್ಯಾಕ್ಟಿಕ್ಸ್. ಇದೀಗ ಆಲಿಯಾ ಭಟ್ ನಟಿಸಿರುವ ಕೆಲವು ಜಾಹೀರಾತುಗಳ ವಿಚಾರದಿಂದ ನೆಟ್ಟಿಗರು ಆಕ್ರೋಶಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಆಲಿಯಾ ಭಟ್ ಅವರು ಆರೋಗ್ಯದ ದೃಷ್ಟಿಯಿಂದ ಬಳಸುವುದಿಲ್ಲ ಎಂದು ಹೇಳಿದ್ದ ಪ್ರಾಡಕ್ಟ್ ಗಳ ಜಾಹೀರಾತಿನಲ್ಲೇ ಈಗ ಕಾಣಿಸಿಕೊಂಡಿದ್ದಾರೆ. ಆಲಿಯಾ ಭಟ್ ಅವರು ಈ ಹಿಂದೆ ಕಪಿಲ್ ಶರ್ಮ ಶೋ ನಲ್ಲಿ ಕಾಣಿಸಿಕೊಂಡಿದ್ದಾಗ, ಚಹಾ ಕುಡಿಯಲಿಲ್ಲ. ಒಂದು ಸಿಪ್ ಚಹಾ ಕುಡಿದು, ಇದಕ್ಕೆ ಸಕ್ಕರೆ ಹಾಕಿದೆಯೇ ಎಂದು ಕೇಳಿದ್ದರು, ನಂತರ ಚಹಾ ವಾಪಸ್ ಕೊಟ್ಟುಕಳಿಸಿದ್ದರು. ಇಷ್ಟು ಹಣ ಸಂಪಾದನೆ ಮಾಡುತ್ತೀರಾ, ಶುಗರ್ ತಿನ್ನಲು ಸಾಧ್ಯವಿಲ್ಲವೇ ಎಂದು ಕಾರ್ಯಕ್ರಮದಲ್ಲಿ ಕೇಳಲಾಗಿತ್ತು, ಅದಕ್ಕೆ ಉತ್ತರವನ್ನು ಸಹ ಕೊಟ್ಟಿದ್ದರು ಆಲಿಯಾ ಭಟ್.
ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಹಾಗಾಗಿ ನಾನು ಸೇವಿಸುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಶುಗರ್ ಬಳಸಿ ತಯಾರಾಗುವ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಿಂದಾಗಿ ಟ್ರೋಲ್ ಆಗುತ್ತಿದ್ದಾರೆ ಆಲಿಯಾ ಭಟ್. ಈ ಮೊದಲು ಶುಗರ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದ ಆಲಿಯಾ ಭಟ್, ಈಗ ಫ್ರೂಟಿ ಮತ್ತು ಇನ್ನಿತರ ಡ್ರಿಂಕ್ ಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಎಷ್ಟು ಸರಿ? ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಶುಗರ್ ತಿನ್ನದೇ ಇರುವ ಆಲಿಯಾ ಭಟ್ ಅವರು, ಅದನ್ನೇ ತಿನ್ನಿ ಎಂದು ಹೇಳುತ್ತಿದ್ದಾರೆ. ಹಣಕ್ಕಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ , ಆಲಿಯಾ ಭಟ್ ಮಾಡುತ್ತಿರುವುದು ಡಬಲ್ ಸ್ಟ್ಯಾಂಡರ್ಡ್ ಕೆಲಸ ಎನ್ನುತ್ತಿದ್ದಾರೆ ನೆಟ್ಟಿಗರು. ಇದರಿಂದಾಗಿ ಆಲಿಯಾ ಮೊದಲು ಹೇಳಿದ್ದ ವಿಡಿಯೋ, ಈಗ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಎರಡನ್ನು ಶೇರ್ ಮಾಡಿ, ಟ್ರೋಲ್ ಮಾಡುತ್ತಿದ್ದಾರೆ. ಎಂದಿನಂತೆ ಆಲಿಯಾ ಭಟ್ ಅವರು ಈ ಟ್ರೋಲ್ ಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Comments are closed.