ಬಹಳ ಕ್ಲೋಸ್ ಫ್ರೆಂಡ್ ಎಂದಿದ್ದ ವಿಜಯ್ ರವರಿಂದ ದೂರವಾದರೆ ರಶ್ಮಿಕಾ? ರಶ್ಮಿಕಾ ಮಾಡಿದ್ದನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದು ಯಾಕೆ ಗೊತ್ತೇ?
ಕಾಲಿವುಡ್ ಅಂಗಳದಲ್ಲಿ ಆಗಾಗ ಸುದ್ದಿಯಾಗುತ್ತಿದ್ದ ಜೋಡಿ ಕನ್ನಡದ ಕುವರಿ ರಶ್ಮಿಕಾ ಮಂದಣ್ಣ ಮತ್ತು ರೌಡಿ ಬಾಯ್ ವಿಜಯ್ ದೇವರಕೊಂಡ. ಇವರಿಬ್ಬರ ನಡುವೆ ಸ್ನೇಹಕ್ಕು ಮೀರಿದ ಬಾಂಧವ್ಯ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದ್ದ ವಿಚಾರ. ಸಾಕಷ್ಟು ವೇದಿಕೆಗಳಲ್ಲಿ, ಹೊರ ಪ್ರಪಂಚದಲ್ಲಿ, ವೇದಿಕೆಗಳಲ್ಲಿ ಜೊತೆಯಾಗಿ ಈ ಜೋಡಿ ಕಾಣಿಸಿಕೊಂಡಿದ್ದಾರೆ. ಹಲವು ಕಡೆ ಕೈ ಕೈ ಹಿಡಿದು ಓಡಾಡಿದ್ದಾರೆ. ವಿಜಯ್ ರಶ್ಮಿಕಾ ಪ್ರೀತಿಸುತ್ತಿದ್ದಾರೆ, ಇವರಿಬ್ಬರು ಕಪಲ್ಸ್ ಎಂದು ಎಲ್ಲರೂ ಅಂದುಕೊಂಡಿದ್ದರು. ಇದೀಗ ಆ ಗಾಸಿಪ್ ಬೇರೆ ರೂಪ ಪಡೆದುಕೊಂಡಿದ್ದು, ಇವರಿಬ್ಬರ ನಡುವೆ ಎಲ್ಲರೂ ಸರಿಯಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ರಶ್ಮಿಕಾ ಮಾಡಿರುವ ಒಂದು ಕೆಲಸ..
ನಿನ್ನೆ ಮೇ9 ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬ. ಈ ದಿನದಂದು ಎಲ್ಲಾ ಅಭಿಮಾನಿಗಳು ವಿಜಯ್ ಅವರಿಗೆ ವಿಶ್ ಮಾಡಿದ್ದಾರೆ. ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಸಹ ವಿಜಯ್ ದೇವರಕೊಂಡ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಬರ್ತ್ ಡೇ ವಿಶ್ ಮಾಡಿದ್ದಾರೆ. ಸಧ್ಯಕ್ಕೆ ವಿಜಯ್ ದೇವರಕೊಂಡ ಮತ್ತು ಸಮಂತಾ ಜೊತೆಯಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ. ಅಲ್ಲಿಯೇ ಚಿತ್ರತಂಡದ ಜೊತೆ, ವಿಜಯ್ ಬರ್ತ್ ಡೇ ಸೆಲೆಬ್ರೇಷನ್ ನಡೆದಿದೆ. ಸಮಂತಾ ಅವರು ವಿಜಯ್ ದೇವರಕೊಂಡ ಜೊತೆಗಿನ ಫೋಟೋಸ್ ಶೇರ್ ಮಾಡಿ, ಸುಂದರವಾದ ಸಾಲುಗಳನ್ನು ಬರೆದು ಬರ್ತ್ ಡೇ ವಿಶ್ ಮಾಡಿದ್ದಾರೆ. ಇಡೀ ಚಿತ್ರತಂಡ ಸೇರಿ ವಿಜಯ್ ದೇವರಕೊಂಡ ಅವರಿಗೆ ಸರ್ಪ್ರೈಸ್ ಸಹ ನೀಡಿದೆ.
ಮತ್ತೊಂದು ಕಡೆ, ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಒಂದು ವಿಶ್ ಸಹ ಮಾಡಿಲ್ಲ. ಕಳೆದ ಒಂದೆರಡು ವರ್ಷಗಳಿಂದ ವಿಜಯ್ ಹುಟ್ಟುಹಬ್ಬಕ್ಕೆ, ಟ್ವೀಟ್ ಮೂಲಕ ಫೋಟೋ ಶೇರ್ ಮಾಡಿ ವಿಶ್ ಮಾಡುತ್ತಿದ್ದ ರಶ್ಮಿಕಾ ಈಗ ಸೈಲೆಂಟ್ ಆಗಿದ್ದಾರೆ. ವಿಜಯ್ ಹುಟ್ಟುಹಬ್ಬಕ್ಕೆ ಒಂದು ಸ್ಟೇಟಸ್ ಕೂಡ ಹಾಕಿಲ್ಲವಲ್ಲ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ಜೋಡಿ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿಲ್ಲ, ಹಾಗಾಗಿ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ತಿಳಿಯದೆ ಅಭಿಮಾನಿಗಳಿಗೆ ಕಳವಳ ಉಂಟಾಗಿದ್ದು, ವಿಜಯ್ ಅಥವಾ ರಶ್ಮಿಕಾ ಕಡೆಯಿಂದ ಉತ್ತರಕ್ಕಾಗಿ ಕಾಯುತ್ತಿದ್ದಾರೆ.
Comments are closed.