ಐಪಿಎಲ್ ಟೂರ್ನಿಯ ನಡುವೆಯೇ ಸಿಹಿ ಸುದ್ದಿ ಹಂಚಿಕೊಂಡ ರಾಬಿನ್ ಉತ್ತಪ್ಪ, ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದು ಯಾಕೆ ಗೊತ್ತೇ?
ರಾಬಿನ್ ಉತ್ತಪ್ಪ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಐಪಿಎಲ್ ನಲ್ಲಿ ಸಹ ಇವರಿಗೆ ಭಾರಿ ಬೇಡಿಕೆ ಇದೆ, ಪ್ರಸ್ತುತ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದಾರೆ ಉತ್ತಪ್ಪ. ಇವರು ಮೂಲತಃ ಕರ್ನಾಟಕದವರು ಎನ್ನುವುದು ನಮಗೆ ಹೆಮ್ಮೆ. ರಾಬಿನ್ ಉತ್ತಪ್ಪ, ಮೂಲತಃ ಕೂರ್ಗ್ ನವರು, ಪ್ರಸ್ತುತ ಇವರಿಗೆ 34 ವರ್ಷ ವಯಸ್ಸು. ರಾಬಿನ್ ಅವರು ಇದೀಗ ಐಪಿಎಲ್ ಪಂದ್ಯಗಳಲ್ಲಿ ಬ್ಯುಸಿ ಇರುವಾಗಲೇ, ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಉತ್ತಪ್ಪ ಅವರು ನೀಡಿರುವ ಗುಡ್ ನ್ಯೂಸ್ ಕೇಳಿ, ಅಭಿಮಾನಿಗಳು ಬಹಳ ಸಂತೋಷ ಪಟ್ಟಿದ್ದಾರೆ.
ನಮಗೆಲ್ಲ ಗೊತ್ತಿರುವ ಹಾಗೆ, ಕರ್ನಾಟಕದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಅಡಿದವರಲ್ಲಿ ರಾಬಿನ್ ಉತ್ತಪ್ಪ ಸಹ ಒಬ್ಬರು. ಇವರು ನಮ್ಮ ಕರ್ನಾಟಕಕ್ಕೆ ಹೆಮ್ಮೆ ತಂದುಕೊಡುವ ಕೆಲಸ ಸಹ ಮಾಡಿದ್ದಾರೆ. ರಾಬಿನ್ ಉತ್ತಪ್ಪ ಅವರ ತಂದೆ ಹಾಕಿ ಅಂಪೈರ್ ಆಗಿದ್ದರು. ರಾಬಿನ್ ಉತ್ತಪ್ಪ ಅವರು 2016ರಲ್ಲಿ ಶೀತಲ್ ಗೌತಮ್ ಅವರೊಡನೆ ಮದುವೆಯಾದರು. ಶೀತಲ್ ಅವರು ಸಹ ಕ್ರೀಡೆಯಲ್ಲಿ ಸಕ್ರಿಯರಾಗಿರುವವರು, ಟೆನ್ನಿಸ್ ಪಟು ಆಗಿದ್ದವರು ಶೀತಲ್. ಶೀತಲ್ ಸಹ ಕರ್ನಾಟಕದ ಬೆಂಗಳೂರಿನವರು. ಅನೇಕ ಟೆನ್ನಿಸ್ ಪಂದ್ಯಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ ಶೀತಲ್. ರಾಬಿನ್ ಮತ್ತು ಶೀತಲ್ ಇಬ್ಬರು ಸಹ, ಬಹಳ ವರ್ಷಗಳ ಕಾಲ ಪ್ರೀತಿಸಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ದಂಪತಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ರಾಬಿನ್ ಉತ್ತಪ್ಪ ಶೀತಲ್ ಗೌತಮ್ ದಂಪತಿಗೆ ಈಗಾಗಲೇ ನೀಲ್ ಹೆಸರಿನ 4 ವರ್ಷದ ಮುದ್ದಾದ ಮಗನಿದ್ದಾನೆ, ಇದೀಗ ಈ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ರಾಬಿನ್ ಉತ್ತಪ್ಪ ಅವರು ಈ ಸಂತೋಷದ ವಿಚಾರವನ್ನು ಶೇರ್ ಮಾಡಿಮೊಂದಿದ್ದಾರೆ. ನಮ್ಮ ಜೀವನಕ್ಕೆ ಮತ್ತೊಬ್ಬ ಸೂಪರ್ ಹೀರೋ ಅಗಮನವಾಗಲಿದೆ, ನಾವು ಮೂವರಿಂದ ನಾಲ್ವರಾಗಲಿದ್ದೇವೆ ಎಂದು ಬರೆಯುವ ಮೂಲಕ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ ರಾಬಿನ್ ಉತ್ತಪ್ಪ. ಈ ದಂಪತಿಗೆ ಶುಭ ಕೋರುತ್ತಿದ್ದಾರೆ ಅಭಿಮಾನಿಗಳು.
Comments are closed.