ಟೆಸ್ಲಾ ಕಾರು ಭಾರತಕ್ಕೆ ಲಗ್ಗೆ ಇಡುವ ಮುನ್ನವೇ ಹೊಸ ಟಾಟಾ ಕಾರು ಅನಾವರಣ, ಇದರ ವಿಶೇಷತೆ ನೋಡಿದರೇ, ವಿದೇಶಿ ಕಾರ್ ಕಂಪನಿಗಳು ಕೂಡ ಶಾಕ್. ಹೇಗಿದೆ ಗೊತ್ತೇ?
ಟಾಟಾ ಸಂಸ್ಥೆಯು ಇತ್ತೀಚೆಗಷ್ಟೇ ಹೊಸ ಕಾರ್ ಲಾಂಚ್ ಮಾಡುವ ಬಗ್ಗೆ ಮಾಹಿತಿ ನೀಡಿತ್ತು. ಅದರ ಬೆನ್ನಲೇ ಈಗ ಮತ್ತೊಂದು ಹೊಸ ಕಾನ್ಸೆಪ್ಟ್ ಕಾರ್ ಲಾಂಚ್ ಮಾಡಲಿದೆ. ಮಾರುಕಟ್ಟೆಯಲ್ಲಿ ಹೊಸದಾಗಿ ಬರುವ ಸ್ಮಾರ್ಟ್ ಫೋನ್ ಮಾಡೆಲ್ ಗಳ ಹಾಗೆ ಟಾಟಾ ಸಂಸ್ಥೆ ಹೊಸ ಕಾನ್ಸೆಪ್ಟ್ ಕಾರ್ ಗಳನ್ನು ಲಾಂಚ್ ಮಾಡುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ಹೊಸ ಕಾರ್ ಲಾಂಚ್ ಮಾಡಿಕೊಟ್ಟಿದೆ ಟಾಟಾ ಸಂಸ್ಥೆ. ಈ ಹೊಸ ಕಾನ್ಸೆಪ್ಟ್ ಕಾರ್ ನ ಹೆಸರು ಟಾಟಾ ಅವಿನ್ಯಾ, ನಲ್ಲಿರುವ ವಿಶೇಷತೆ ಏನು? ಇದರಲ್ಲಿ ಏನೆಲ್ಲಾ ಫೀಚರ್ಸ್ ಇದೆ? ಸಂಪೂರ್ಣವಾಗಿ ತಿಳಿಸುತ್ತೇವೆ..
ಅವಿನ್ಯಾ ಎಂದರೆ ಸಂಸ್ಕೃತದಲ್ಲಿ ಇನೋವೇಶನ್ ಎಂದು ಅರ್ಥ. ಹೆಸರಿಗೆ ತಕ್ಕ ಹಾಗೆ, ಈ ಕಾರ್ ಇನೋವೇಟಿವ್ ಆಗಿದೆ. ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರ್ ಗಳಲ್ಲಿ ಇರುವ ಎಸೆನ್ಸ್, ಮಲ್ಟಿ ಪರ್ಪಸ್ ಕಾರ್ ನಲ್ಲಿರಿವ functionality, SUV ಕಾರ್ ಗಳಲ್ಲಿರುವ ಕ್ರಾಸ್ ಓವರ್ ಹೀಗೆ ಎಲ್ಲಾ ಸ್ಪೆಷಾಲಿಟಿಗಳನ್ನು ಒಳಗೊಂಡಿದೆ, ಟಾಟಾ ಅವಿನ್ಯಾ. ಇದರ ವಿಶೇಷತೆಗಳನ್ನು ನೋಡುವುದಾದರೆ, ಹಿಂದೆ ಮತ್ತು ಮುಂದೆ ಇರುವ ಡಿ.ಆರ್.ಎಲ್ ಲೈಟ್ ಗಳು ಟಾಟಾ ಲೋಗೋ ಶೇಪ್ ನಲ್ಲಿದೆ. ಇನ್ನು ಫ್ರೆಮ್ ಲೆಸ್ ಬಟರ್ ಫ್ಲೈ ಡೋರ್, ರೊಟೆಟಿಂಗ್ ಡ್ರೈವರ್ ಸೀಟ್, ಈ ಕಾರ್ ನಲ್ಲಿ ಡಿಸ್ಪ್ಲೇ ಅನ್ನು ಸ್ಟೀರಿಂಗ್ ನಲ್ಲೆ ಇಂಟಿಗ್ರೇಟ್ ಮಾಡಲಾಗಿದೆ. ಡ್ರೈವರ್ ಮಾತ್ರವಲ್ಲದೆ, ಪ್ಯಾಸೆಂಜರ್ ಕೂಡ ವಾಯ್ಸ್ ಅಸಿಸ್ಟಂಟ್ ಮೂಲಕ ಮ್ಯೂಸಿಕ್ ಗೆ ಕಮಾಂಡ್ ಕೊಡುವ ರೀತಿಯ ಹೊಸ ಫೀಚರ್ ಗಳನ್ನು ಅವಿನ್ಯಾ ಗೆ ನೀಡಲಾಗಿದೆ.
ಇದರಲ್ಲಿರುವ ಹೊಸ ಫೀಚರ್ ಏನಂದ್ರೆ, ಹ್ಯಾಂಡ್ ರೆಸ್ಟ್ ಹತ್ತಿರ, ಫ್ರೆಗರೆನ್ಸ್ ರಿಲೀಸ್ ಮಾಡಲು ಹೊಸ ಡಿವೈಸ್ ಒಂದನ್ನು ಇಟ್ಟಿದ್ದಾರೆ. ಅನಿವಲ್ ಮಾಡಿರುವುದರಲ್ಲಿ ಈ ಹೊಸ ಕಾರ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ. ಯಾಕಂದ್ರೆ ಇದು ಕಾನ್ಸೆಪ್ಟ್ ಕಾರ್ ಮಾತ್ರ ಆಗಿದ್ದು, ಇದು ಪ್ರೊಡಕ್ಷನ್ ಆಗಿ ಬರಲು ಇನ್ನು ಎರಡರಿಂದ ಮೂರು ವರ್ಷಗಳಾದರೂ ಬೇಕಾಗುತ್ತದೆ. ಈ ಕಾರ್ ಮಾರುಕಟ್ಟೆಗೆ ಯಾವಾಗ ಬರುತ್ತದೆ ಎನ್ನುವ ಬಗ್ಗೆ ಟಾಟಾ ಸಂಸ್ಥೆ ಮಾಹಿತಿ ಬಿಟ್ಟುಕೊಟ್ಟಿಲ್ಲ, ಇಲ್ಲಿಯವರೆಗೂ ಟಾಟಾ ಸಂಸ್ಥೆಯಿಂದ ಮಾರುಕಟ್ಟೆಗೆ ಬಂದಿರುವ ಟಾಟಾ ನೆಕ್ಸಾನ್, ಮತ್ತು ಟಾಟಾ ಟಿಗೋರಿವಿ ಫಸ್ಟ್ ಜೆನೆರೇಶ ಆರ್ಕಿಟೆಕ್ಚರ್ ಮೇಲೆ ಹಾಗೂ ಟಾಟಾ ಆಲ್ಟ್ರೋ ಕಾರ್ ಅನ್ನು ಸೆಕೆಂಡ್ ಜೆನೆರೇಷನ್ ಮೇಲೆ ಡಿಸೈನ್ ಮಾಡಲಾಗಿದೆ. ಈ ಎರಡು ಕಾರ್ ಗಳು ಸಹ ಐಸಿಇ ಇಂಜಿನ್ ಇಂದ ಸ್ಫೂರ್ತಿ ಪಡೆದು ಎಲೆಕ್ಟ್ರಿಕ್ ಕಾರ್ ಗಳಾಗಿ ಬದಲಾಗಿದೆ.
ಇನ್ನುಮುಂದೆ ಬರಲಿರುವ 3rd ಜೆನೆರೇಷನ್ ಕಾರ್ ಗಳು, ಪೂರ್ತಿಯಾಗಿ ಎಲೆಕ್ಟ್ರಿಕ್ ಕಾರ್ ಗಳ ಡಿಸೈನ್ ಆರ್ಕಿಟೆಕ್ಚರ್ ಇಂದ ಮಾಡಲ್ಪಟ್ಟಿರುತ್ತದೆ ಎಂದು ಟಾಟಾ ಸಂಸ್ಥೆ ತಿಳಿಸಿದೆ. ಟಾಟಾ ಸಂಸ್ಥೆಯು ಈಗಾಗಲೇ 20 ಸಾವಿರ ಎಲೆಕ್ಟ್ರಿಕ್ ಕಾರ್ ಗಳನ್ನು ಮಾರಾಟ ಮಾಡಿದ್ದು, ಡಿಮ್ಯಾಂಡ್ ಇರುವ ಕಾರ್ ಅನ್ನು, ವರ್ಷಕ್ಕೆ 80 ಸಾವಿರ ಕಾರ್ ಗಳ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ 5 ವರ್ಷಗಳಲ್ಲಿ 10 ಹೊಸ ಎಲೆಕ್ಟ್ರಿಕ್ ಕಾರ್ ಗಳನ್ನು ಪರಿಚಯ ಮಾಡುವ ಪ್ಲಾನ್ ನಲ್ಲಿದೆ ಟಾಟಾ ಸಂಸ್ಥೆ. ಇತ್ತೀಚೆಗೆ ಬಿಡುಗಡೆ ಆಗಿರುವ ಟಾಟಾ ಕರ್ವ್ ಮತ್ತು ಟಾಟಾ ಅವಿನ್ಯಾ ಕಾರ್ ಗಳು, ಟೆಸ್ಲಾ ಕಾರ್ ಭಾರತಕ್ಕೆ ಯವಾಗ ಬರುತ್ತದೆ ಎಂದು ಎದುರು ನೋಡುತ್ತಿರುವವರಿಗೆ ಸಂತೋಷ ತರುತ್ತಾ ಎಂದು ಕಾಡುನೋಡಬೇಕಿದೆ.
Comments are closed.