Neer Dose Karnataka
Take a fresh look at your lifestyle.

ಪ್ರಪಂಚದ ಅತಿ ದುಬಾರಿ ಕಲ್ಲಂಗಡಿ ಹಣ್ಣು ಎಷ್ಟು ಲಕ್ಷ ಗೊತ್ತೇ?? ಯಾಕೆ ಇದಕ್ಕೆ ಇಷ್ಟು ಬೆಲೆ ಗೊತ್ತೇ?

ನಮ್ಮ ದೇಶದಲ್ಲಿ ವಾಸ ಮಾಡುವ ಎಲ್ಲರಿಗು ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣಿನ ಬೆಲೆ ಎಷ್ಟು ಎಂದು ಗೊತ್ತಿರುತ್ತದೆ. ಅಬ್ಬಬ್ಬಾ ಅಂದ್ರೆ ಒಂದು ಕಲ್ಲಂಗಡಿ ಹಣ್ಣಿನ ಬೆಲೆ 20 ರಿಂದ 50 ರೂಪಾಯಿ ಇರುತ್ತದೆ. ಒಂದು ವೇಳೆ ಹಣ್ಣಿನ ಗಾತ್ರ ದೊಡ್ಡದಾಗಿದ್ದರೆ, 100 ರೂಪಾಯಿ ವರೆಗೂ ದಾಟಬಹುದು. ಕಲ್ಲಂಗಡಿ ಹಣ್ಣು ಬೇಸಿಗೆ ಕಾಲದ ಸ್ಪೆಷಲ್ ಹಣ್ಣು, ಬೇಸಿಗೆಯ ಬಿಸಿಲಿನ ಬೇಗೆ ಇಂದ ಮುಕ್ತಿ ಪಡೆಯಲು ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡುತ್ತೇವೆ. ಈಗ ನಾವು ಹೇಳಲು ಹೊರಟಿರುವುದು ಸಾಮಾನ್ಯವಾದ ಕಲ್ಲಂಗಡಿ ಹಣ್ಣಿನ ಬಗ್ಗೆ ಅಲ್ಲ, ಇದೊಂದು ಸ್ಪೆಷಲ್ ಆದ ಕಲ್ಲಂಗಡಿ ಹಣ್ಣು, ಈ ಹಣ್ಣಿನ ಬೆಲೆ ಕೇಳಿದರೆ ನಿಮಗೆ ತಲೆ ತಿರುಗುವುದು ಗ್ಯಾರಂಟಿ..

ಈ ಕಲ್ಲಂಗಡಿ ಹಣ್ಣಿನ ಬೆಲೆ ಎಷ್ಟು ದುಬಾರಿ ಯಾಕಿದೆ ಎನ್ನುವುದಕ್ಕೆ ಕಾರಣ ಈ ಹಣ್ಣು ಬೆಳೆದಿರುವ ಪರಿಸರ. ಸಾಮಾನ್ಯವಾದ ಪರಿಸರಕ್ಕಿಂತ ವಿಶೇಷವಾದ ಪರಿಸರದಲ್ಲಿ ಈ ಕಲ್ಲಂಗಡಿ ಹಣ್ಣು ಬೆಳೆದಿದೆ. ಈ ವಿಶೇಷವಾದ ಕಲ್ಲಂಗಡಿ ಹಣ್ಣಿನ ಬೆಲೆ ಬರೋಬ್ಬರಿ 4 ಲಕ್ಷದ 46 ಸಾವಿರ ರೂಪಾಯಿಗಳು. ಇಷ್ಟು ದುಬಾರಿ ಇರುವ ಹಣ್ಣನ್ನು ಕೂಡ ಕೆಲವು ಜನರು ಖರೀದಿ ಮಾಡುತ್ತಾರೆ. ಈ ಹಣ್ಣಿನ ಬೆಲೆ ಅತ್ಯಂತ ದುಬಾರಿ. ಈ ಹಣ್ಣಿನ ವಿಶೇಷತೆ ಏನೆಂದರೆ, ಇದು ಒಂದು ವರ್ಷಕ್ಕೆ 100 ಕಾಯಿಗಳನ್ನು ಮಾತ್ರ ಇಳುವರಿಯಾಗಿ ನೀಡುತ್ತದೆ. ಈ ಹಣ್ಣು ನೋಡಲು ಸಾಮಾನ್ಯ ಹಣ್ಣಿನಂತೆ ಕಂಡರೂ ಸಹ, ಇದರ ಬೆಲೆ ಲಕ್ಷ ರೂಪಾಯಿ.

ಈ ವಿಶೇಷವಾದ ಕಲ್ಲಂಗಡಿ ಹಣ್ಣನ್ನು ಜಪಾನಿನಲ್ಲಿ ಬೆಳೆಯುತ್ತಾರೆ. ಜಪಾನಿನ ಜನರು ಸಾಮಾನ್ಯಕ್ಕಿಂತ ವಿಶೇಷವಾದ ಹವಾಮಾನದಲ್ಲಿ ಈ ಕಲ್ಲಂಗಡಿ ಹಣ್ಣನ್ನು ಬೆಳೆಯುತ್ತಾರೆ. ಈ ದುಬಾರಿ ಹಣ್ಣಿನ ಹೆಸರು ಡೆನ್ಸಿಟಿ ಕಲ್ಲಂಗಡಿ. ವರ್ಷಕ್ಕೆ ಕೇವಲ 100 ಕಾಯಿಗಳನ್ನು ನೀಡುವ ಈ ಕಲ್ಲಂಗಡಿ ಹಣ್ಣನ್ನು ಕೆಲವರು ಪ್ರೆಸ್ಟಿಜ್ ಗಾಗಿ ಖರೀದಿ ಮಾಡುತ್ತಾರೆ. ಇನ್ನು ಕೆಲವರು ಒಂದು ಸಾರಿ ಈ ಹಣ್ಣನ್ನು ತಿನ್ನಬೇಕು ಎಂದು ಬಯಸಿ ಖರೀದಿ ಮಾಡುತ್ತಾರೆ. ಇನ್ನು ಕೆಲವು ಜನರು ಈ ದುಬಾರಿ ಹಣ್ಣನ್ನು ಉಡುಗೊರೆಯಾಗಿ ನೀಡುತ್ತಾರೆ. ಇದರ ಬೆಲೆಯನ್ನು ಹೇಳುವ ಹಾಗಿಲ್ಲ, ಆದರೆ ಈ ವರ್ಷ ಈ ವಿಶೇಷವಾದ ಕಲ್ಲಂಗಡಿ ಹಣ್ಣಿನ ಬೆಲೆ 4.46 ಲಕ್ಷ ರೂಪಾಯಿ ಆಗಿದೆ.

Comments are closed.