ಮುಗ್ಧ ಮನಸ್ಸಿನ ಪಾರು ಧಾರಾವಾಹಿ ನಟಿ ಮೋಕ್ಷಿತ ಪೈ ಅವರ ನಿಜವಾದ ವಯಸ್ಸೆಷ್ಟು? ಒಂದು ಎಪಿಸೋಡ್ ಗೆ ಅವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಕನ್ನಡ ಕಿರುತೆರೆ ವಾಹಿನಿಯಲ್ಲಿ ಹೊಸ ಧಾರಾವಾಹಿಗಳು ಆರಂಭವಾಗುವ ಮೂಲಕ ಹೊಸ ಕಲಾವಿದರು, ಹೊಸ ಪ್ರತಿಭೆಗಳು ನಮ್ಮ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಜೀಕನ್ನಡ ವಾಹಿನಿಯಲ್ಲಿ ಆರಂಭವಾಗಿರುವ ಪ್ರಮುಖವಾದ ಧಾರಾವಾಹಿಗಳಲ್ಲಿ ಒಂದು ಪಾರು. ಈ ಧಾರಾವಾಹಿ ಈಗ ಜನರು ಪ್ರತಿದಿನ ಮಿಸ್ ಮಾಡದೆ ನೋಡುವ ಧಾರಾವಾಹಿಗಳಲ್ಲಿ ಒಂದು. ಪಾರು ಧಾರಾವಾಹಿಯ ಅಖಿಲಾಂಡೇಶ್ವರಿ, ಹಾಗೂ ಮುಗ್ಧ ಹಳ್ಳಿ ಹುಡುಗಿ ಪಾರ್ವತಿಯ ಪಾತ್ರವನ್ನು ಜನರು ತುಂಬಾ ಇಷ್ಟಪಟ್ಟಿದ್ದಾರೆ. ಪಾರು ಧಾರಾವಾಹಿ ಖ್ಯಾತಿಯ ನಟಿಯ ನಿಜವಾದ ವಯಸ್ಸೆಷ್ಟು? ಅವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ತಿಳಿಸುತ್ತೇವೆ ನೋಡಿ..
ಪಾರು ಧಾರಾವಾಹಿಯಲ್ಲಿ ಮುಗ್ಧ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿರುವ ಮುದ್ದು ಮುಖದ ನಾಯಕಿಯ ಹೆಸರು ಮೋಕ್ಷಿತ ಪೈ, ಇವರು ಮೂಲತಃ ಮಂಗಳೂರಿನ ಪ್ರತಿಭೆ. ಹುಟ್ಟಿ ಬೆಳೆದದ್ದು ಅಲ್ಲಿಯೇ, ನಂತರ ಬೆಂಗಳೂರಿಗೆ ಬಂದರು. ಪಾರ್ವತಿ ಪಾತ್ರದ ಹಾಗೆ ಮೋಕ್ಷತ ಸಹ ಬಹಳ ಸರಳ ಹಾಗೂ ಮುಗ್ಧ ಮನಸ್ಸಿನ ಹುಡುಗಿಯಂತೆ. ನಿಜ ಜೀವನದಲ್ಲಿ ತನ್ನ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ ಮೋಕ್ಷಿತ. ಮೋಕ್ಷಿತ ಅವರಿಗೆ ತಾಯಿ ಮತ್ತು ಒಬ್ಬ ತಮ್ಮ ಇದ್ದಾರೆ, ಇವರ ತಮ್ಮ ವಿಕಲಚೇತನ ಮಗು, ಹಾಗಾಗಿ ಮೋಕ್ಷಿತ ಅವರಿಗೆ ತಮ್ಮನನ್ನು ಕಂಡರೆ ತುಂಬಾ ಪ್ರೀತಿ. ತಮ್ಮನನ್ನು ಒಂದು ಪುಟ್ಟ ಮಗುವಿನ ಹಾಗೆ ನೋಡಿಕೊಳ್ಳುತ್ತಾರೆ ಮೋಕ್ಷಿತ. ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮನ ಜೊತೆಗಿನ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ..
ಮೋಕ್ಷಿತ ಅವರು ಪಾರು ಧಾರಾವಾಹಿಗೆ ಆಯ್ಕೆಯಾಗಿದ್ದು ಸೋಷಿಯಲ್ ಮೀಡಿಯಾ ಮೂಲಕ, ಸೋಷಿಯಲ್ ಮೀಡಿಯಾದಲ್ಲಿ ಮಾಡರ್ನ್ ಲುಕ್ ಮತ್ತು ಸಾಂಪ್ರದಾಯಿಕ ಲುಕ್ ಎರಡರಲ್ಲೂ ಸುಂದರವಾಗಿ ಕಾಣುತ್ತಿದ್ದ ಮೋಕ್ಷಿತ ಅವರು ಪಾರು ಧಾರಾವಾಹಿಗೆ ಆಯ್ಕೆಯಾದರು. ಪಾರು ಧಾರಾವಾಹಿ ಜನಪ್ರಿಯತೆಯಿಂದ ಮೋಕ್ಷಿತ ಅವರಿಗೆ ಈಗ ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಟಿಸುವ ಅವಕಾಶ ಸಹ ಜೋರಾಗಿಯೇ ಸಿಗುತ್ತಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ತೆಲುಗು ಅವತರಣಿಕೆಯಲ್ಲಿ ಅಭಿನಯಿಸಲಿದ್ದಾರೆ ಮೋಕ್ಷಿತ. ವೀಕ್ಷಕರ ಫೇವರೆಟ್ ಆಗಿರುವ ಮೋಕ್ಷಿತ, ಅವರು ಹುಟ್ಟಿದ್ದು ಅಕ್ಟೋಬರ್ 3, 1993 ರಂದು, ಈಗ ಮೋಕ್ಷಿತ ಅವರಿಗೆ 29 ವರ್ಷ ವಯಸ್ಸು. ಹಾಗೂ ಪಾರು ಧಾರಾವಾಹಿಯಲ್ಲಿ ಒಂದು ದಿನಕ್ಕೆ 10 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಮೋಕ್ಷಿತ. ಮೋಕ್ಷಿತ ಅವರು ನಿಮಗೆ ಇಷ್ಟವಾಗಿದ್ದರೆ, ಅವರ ಬಗ್ಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.
Comments are closed.