ಯಾರಿಗೂ ಗುರುತು ಸಿಗದಂತೆ ಮಾಸ್ಕ್ ಧರಿಸಿ, ಸೆಕ್ಯುರಿಟಿ ಇಲ್ಲದೇ ಬೆಂಗಳೂರಿನ ಬೇಕರಿಗೆ ಹೋಗಿದ್ದ ವಿರಾಟ್, ಆಮೇಲೆ ನಡೆದದ್ದು ಏನು ಗೊತ್ತೇ??
ನಮ್ಮ ಆರ್.ಸಿ.ಬಿ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಲೆಜೆಂಡರಿ ಬ್ಯಾಟ್ಸ್ಮನ್ ಎನ್ನುವುದು ನಮಗೆಲ್ಲ ಗೊತ್ತಿರುವ ವಿಚಾರ. ಭಾರತ ತಂಡದ ಕ್ಯಾಪ್ಟನ್ ಆಗಿ ವಿರಾಟ್ ಕೋಹ್ಲಿ ಅವರು ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇನ್ನು ಆರ್.ಸಿ.ಬಿ ತಂಡದ ಪರವಾಗಿ ಅದ್ಭುತವಾದ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ ವಿರಾಟ್ ಕೋಹ್ಲಿ ಅವರು. ಕಳೆದ 14 ಆವೃತ್ತಿಗಳಲ್ಲಿ ಆರ್.ಸಿ.ಬಿ ತಂಡ ಕಪ್ ಗೆಲ್ಲದೆ ಇದ್ದರೂ ಸಹ, ಜನರಿಗೆ ಆರ್.ಸಿ.ಬಿ ತಂಡದ ಮೇಲಿರುವ ಪ್ರೀತಿ ಕಡಿಮೆಯಾಗಿಲ್ಲ. ಈ ವರ್ಷ ಆರ್.ಸಿ.ಬಿ ತಂಡ ಫೈನಲ್ಸ್ ತಲುಪುವ ಸಂತೋಷದಲ್ಲಿದೆ. ಇದೇ ಖುಷಿಯಲ್ಲಿರುವ ವಿರಾಟ್ ಕೋಹ್ಲಿ ಅವರು ಮಿ.ನ್ಯಾಗ್ಸ್ ಶೋನಲ್ಲಿ ಪಾಲ್ಗೊಂಡು, ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ವಿರಾಟ್ ಕೋಹ್ಲಿ ಅವರಿಗೆ ಆರ್.ಸಿ.ಬಿ ತಂಡದ ಪರವಾಗಿ ಆಡುತ್ತಿದ್ದಾರೆ, ಹಾಗೂ ಅನುಷ್ಕಾ ಶರ್ಮಾ ಅವರು ಓದಿದ್ದು ಬೆಂಗಳೂರಿನಲ್ಲಿ ಹಾಗಾಗಿ ವಿರಾಟ್ ಕೋಹ್ಲಿ ಅವರಿಗೆ ಬೆಂಗಳೂರಿನ ಮೇಲೆ ವಿಶೇಷವಾದ ಪ್ರೀತಿ ಇದೆ. ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ವಿರಾಟ್ ಕೋಹ್ಲಿ ಅವರು ಬೇಕಾರಿಯೊಂದಕ್ಕೆ ಕೇಕ್ ಖರೀದಿಸಲು ಹೋದಾಗ ನಡೆದ ಘಟನೆಯ ಬಗ್ಗೆ ವಿರಾಟ್ ಕೋಹ್ಲಿ ಅವರು ಶೋನಲ್ಲಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮೂರು ದಿನಕ್ಕೆ ಶ್ರೀಲಂಕಾ ತಂಡದ ವಿರುದ್ಧದ ಪಂದ್ಯಗಳು ಮುಗಿದು ಹೋಗಿದ್ದವು. ಆಗ ಹೆಚ್ಚಿನ ಸಮಯವಿದ್ದಾಗ, ವಿರಾಟ್ ಕೋಹ್ಲಿ ಅವರು ಫ್ರೇಜರ್ ಟೌನ್ ನಲ್ಲಿರುವ ಥಾಮ್ಸ್ ಬೇಕರಿಗೆ ಹೋಗಿ ಪಫ್ಸ್ ಕೊಂಡುಕೊಳ್ಳುವ ಪ್ಲಾನ್ ಮಾಡಿದರಂತೆ. ಆ ಬೇಕರಿ ಬಗ್ಗೆ ಅನುಷ್ಕಾ ಅವರು ಬಹಳಷ್ಟು ಸಾರಿ ಹೇಳಿದ್ದ ಕಾರಣ, ಅಲ್ಲಿಗೆ ಹೋದರಂತೆ ವಿರಾಟ್.
ಅಂದು ವಿರಾಟ್ ಕ್ಯಾಪ್ ಧರಿಸಿ, ತಮ್ಮ ಮುಖ ಕಾಣಿಸದ ಹಾಗೆ, ಯಾರು ಗುರುತು ಹಿಡಿಯದ ಹಾಗೆ ಮಾಸ್ಕ್ ಧರಿಸಿ ಬೇಕರಿಗೆ ಹೋದರಂತೆ. ಥಾಮ್ಸ್ ಬೇಕರಿಯಲ್ಲಿ ಯಾರು ತಮ್ಮನ್ನು ಗುರುತು ಹಿಡಿಯಲು ಸಾಧ್ಯವಾಗಷ್ಟು ಜನರು ಅಲ್ಲಿ ತುಂಬಿದ್ದರಂತೆ. ಬೇಕಾರಿಯೊಳಗೆ ಹೋಗಿ, ಪಫ್ಸ್ ಖರೀದಿಸಿದ ವಿರಾಟ್ ಅವರು, ಹಣ ತೆಗೆದುಕೊಂಡು ಹೋಗುವುದನ್ನು ಮರೆತಿದ್ದರಂತೆ, ಕಾರ್ಡ್ ಬಳಸಿದರೆ, ಬೇಕರಿಯವರಿಗೆ ತಮ್ಮ ಹೆಸರು ಗೊತ್ತಾಗುತ್ತದೆ, ಎಲ್ಲರಿಗೂ ವಿರಾಟ್ ಬಂದಿದ್ದಾರೆ ಎಂದು ಗೊತ್ತಾಗಿಬಿಡುತ್ತದೆ ಎಂದು ಭಯಗೊಂಡಿದ್ದರಂತೆ ಕೋಹ್ಲಿ. ಕಾರ್ಡ್ ಕೊಡದೆ, ತನ್ನ ಡ್ರೈವರ್ ಅವರನ್ನು ಹಣ ತರಲು ಹೇಳೋಣ ಎಂದು ಕೂಡ ಯೋಚನೆ ಮಾಡಿದ್ದರಂತೆ. ಆದರೂ ಹೇಗೋ ಧೈರ್ಯ ಮಾಡಿ, ಕಾರ್ಡ್ ನೀಡಿ ಹಣ ಪಾವತಿಸುವಾಗ, ಬಹಳ ರಷ್ ಇದ್ದ ಕಾರಣ ಅದು ವಿರಾಟ್ ಕೋಹ್ಲಿ ಅವರು ಎಂದು ಕ್ಯಾಶಿಯರ್ ಗೆ ಗೊತ್ತಾಗಲಿಲ್ಲ, ಆತ ಬಿಲ್ ಪಾವತಿ ಮಾಡಿಸಿಕೊಂಡ ನಂತರ ಸಹಿ ಮಾಡಿಸಿಕೊಂಡರು ಸಹ ಬಂದಿದ್ದು ವಿರಾಟ್ ಎಂದು ಅವರಿಗೆ ಗೊತ್ತಾಗಿರಲಿಲ್ಲ, ಎಂದು ಅಂದಿನ ಸ್ವಾರಸ್ಯಕರ ಘಟನೆ ಬಗ್ಗೆ ವಿವರಿಸಿದ್ದಾರೆ ವಿರಾಟ್.
Comments are closed.