ಕೊಹ್ಲಿ ವಿಚಾರವಾಗಿ ಬಿಸಿಸಿಐ ಗೆ ಬಹುದೊಡ್ಡ ಸಲಹೆ ನೀಡಿದ ಸುನಿಲ್ ಗವಾಸ್ಕರ್. ಲೆಜೆಂಡ್ ಮಾತಿಗೆ ಕ್ಯಾರೇ ಎನ್ನದೆ ಬಿಸಿಸಿಐ ಕೊಹ್ಲಿ ನೀಡುತ್ತಾ ಶಾಕ್??
ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೋಹ್ಲಿ ಅವರು ದಶಕಗಳಿಂದ ಅದ್ಭುತವಾಗಿ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿ, ಬ್ಯಾಟ್ಸ್ಮನ್ ಆಗಿ, ನಮ್ಮ ಭಾರತ ತಂಡದ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕೆಲವೇ ಕೆಲವು ತಿಂಗಳ ಹಿಂದೆ ಕೋಹ್ಲಿ ಅವರನ್ನು ಕಂಡರೆ ಕ್ರಿಕೆಟ್ ಲೋಕದ ಬೌಲರ್ ಗಳು ಹೆದರುತ್ತಿದ್ದರು. ಕೋಹ್ಲಿ ಅವರಿಗೆ ಹೇಗೆ ಬೌಲ್ ಮಾಡಿದರು ರನ್ ಗಳ ಮಳೆ ಹರಿಯುತ್ತಿತ್ತು. ಅಂತಹ ವಿರಾಟ್ ಕೋಹ್ಲಿ ಅವರು ಇಂದು ಐಪಿಎಲ್ ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ.
ಈ ವರ್ಷ ಕೋಹ್ಲಿ ಅವರ ಪಾಲಿಗೆ ಹಿಂದಿನ ಲಕ್ ನೀಡುತ್ತಿಲ್ಲ. ಈ ವರ್ಷ ಐಪಿಎಲ್ ನಲ್ಲಿ ಆರ್.ಸಿ.ಬಿ ತಂಡ ಆಡಿರುವ 12 ಪಂದ್ಯಗಳಲ್ಲಿ ಕೋಹ್ಲಿ ಅವರು ಒಂದೇ ಒಂದು ಅರ್ಧ ಶತಕ ಭಾರಿಸಿದ್ದಾರೆ. ಮೂರು ಬಾರಿ ಡಕೌಟ್ ಆಗಿದ್ದಾರೆ. ಕಿಂಗ್ ಕೋಹ್ಲಿ ಅವರಿಗೆ ಯಾವಾಗಲೂ ಈ ರೀತಿ ಆಗಿರಲಿಲ್ಲ. ಅದರಲ್ಲೂ ಮೊನ್ನೆ ಎಸ್.ಆರ್.ಹೆಚ್ ತಂಡದ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಗೌಟ್ ಆದಾಗ, ಬಹಳ ನೋವಿನಲ್ಲಿ ತಲೆತಗ್ಗಿಸಿ ಮೈದಾನದಿಂದ ಹೊರಗೆ ನಡೆದ ವಿರಾಟ್, ಕುಳಿತಿದ್ದಾಗಲು ತಲೆತಗ್ಗಿಸಿಯೇ ಕುಳಿತಿದ್ದರು. ಆರ್.ಸಿ.ಬಿ ಕೋಚ್ ಅವರನ್ನು ಸಮಾಧಾನ ಮಾಡಬೇಕಿತ್ತು. ಐಪಿಎಲ್ ನಲ್ಲಿ ಕೋಹ್ಲಿ ಅವರು ಯಾವುದೇ ಫಾರ್ಮ್ ನಲ್ಲಿದ್ದರೂ ಸಹ ಆರ್.ಸಿ.ಬಿ ತಂಡ ಅವರನ್ನು ಬಿಟ್ಟುಕೊಡುವುದಿಲ್ಲ. ಪ್ಲೇಯಿಂಗ್ 11 ನಲ್ಲಿ ಕೋಹ್ಲಿ ಅವರನ್ನು ಉಳಿಸಿಕೊಳ್ಳುತ್ತದೆ ಆರ್.ಸಿ.ಬಿ ಮ್ಯಾನೇಜ್ಮೆಂಟ್. ಆರ್.ಸಿ.ಬಿ ಗೆ ಕೋಹ್ಲಿ ಅವರೇ ಬ್ರ್ಯಾನ್ಡ್.
ಇನ್ನೇನು ಕೆಲವು ತಿಂಗಳುಗಳಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಕಳಪೆ ಫಾರ್ಮ್ ನಲ್ಲಿರುವ ಆಟಗಾರರನ್ನು ಪ್ಲೇಯಿಂಗ್ 11ಗೆ ಆರಿಸಿಕೊಳ್ಳುವುದಿಲ್ಲ.
ಕೋಹ್ಲಿ ಅವರನ್ನು ತಂಡಕ್ಕೆ ಆರಿಸಿಕೊಳ್ಳುವುದು ಡೌಟ್ ಎಂದು ಬಿಸಿಸಿಐ ಮೂಲಕ ಮಾಹಿತಿ ತಿಳಿದುಬಂದಿತ್ತು. ಆದರೆ ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅವರು, “ಕೋಹ್ಲಿ ಅವರು ಯಾವುದೇ ಕಾರಣಕ್ಕೂ ಅಂತಾರಾಷ್ಟ್ರೀಯ ಕ್ರಿಕೆಟ್ ಇಂದ ಬ್ರೇಕ್ ತೆಗೆದುಕೊಳ್ಳಬಾರದು. ಫಾರ್ಮ್ ಇಲ್ಲ ಎಂದು ಡ್ರೆಸ್ಸಿಂಗ್ ರೂಮ್ ನಲ್ಲಿ ಕುಳಿತುಕೊಂಡರೆ, ಫಾರ್ಮ್ ಬರುವುದಿಲ್ಲ, ಅದಕ್ಕಾಗಿ ಹೆಚ್ಚು ಕ್ರಿಕೆಟ್ ಅಭ್ಯಾಸ ಮಾಡಬೇಕು. ” ಎಂದು ಹೇಳುವ ಮೂಲಕ ವಿರಾಟ್ ಅವರನ್ನು ಸೆಲೆಕ್ಟ್ ಮಾಡಬಾರದು ಎಂದುಕೊಂಡವರಿಗೆ ಗರಂ ಆಗಿ ಸಲಹೆ ನೀಡಿದ್ದಾರೆ ಸುನೀಲ್ ಗವಾಸ್ಕರ್. ಇತ್ತ ಕಡೆ ಕೋಹ್ಲಿ ಅವರನ್ನು ಸೆಲೆಕ್ಟ್ ಮಾಡದೆ ಇದ್ದರೆ ಬಿಸಿಸಿಐಗೆ ಸ್ಟಾರ್ ಪ್ಲೇಯರ್ ಅನ್ನು ಸೆಲೆಕ್ಟ್ ಮಾಡಲಿಲ್ಲ ಎನ್ನುವ ಮಾತು ಕೇಳಿಬರುತ್ತದೆ ,ಹಾಗೂ ವಿರಾಟ್ ಕೋಹ್ಲಿ ಅವರಿಲ್ಲದೆ, ವಿಶ್ವಕಪ್ ಪಂದ್ಯಗಳನ್ನು ನೋಡುವವರ ಬಸಂಖ್ಯೆ ಕಡಿಮೆ ಆಗುತ್ತದೆ. ಹಾಗಾಗಿ ವಿರಾಟ್ ಅವರನ್ನು ಸೆಲೆಕ್ಟ್ ಮಾಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಬಿಸಿಸಿಐ ಇದೆ. ಇನ್ನೊಂದು ಕಡೆ ವಿರಾಟ್ ಕೋಹ್ಲಿ ಅವರು ಇದರ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
Comments are closed.