ತೆಲುಗಿನ ಟಾಪ್ ನಟರಲ್ಲಿ ಒಬ್ಬರಾಗಿರುವ ಮಹೇಶ್ ಬಾಬು ರವರು ಒಂದು ಸಿನೆಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??
ತೆಲುಗು ಚಿತ್ರರಂಗದಲ್ಲಿ ಟಾಲಿವುಡ್ ಪ್ರಿನ್ಸ್ ಎಂದೇ ಖ್ಯಾತಿಯಾಗಿರುವವರು ನಟ ಮಹೇಶ್ ಬಾಬು. ಇವರ ವಯಸ್ಸು 50 ರಷ್ಟು ಸಮೀಪಿಸುತ್ತಿದ್ದರು ಈಗಲೂ ಬಹಳ ಹ್ಯಾಂಡ್ಸಮ್ ಆಗು ಕಾಣುವ ಮಹೇಶ್ ಬಾಬು ಅವರಿಗೆ ದೇಶಾದ್ಯಂತ ದೊಡ್ಡ ಫ್ಯಾನ್ ಬೇಸ್ ಇದೆ. ಮಹೇಶ್ ಬಾಬು ಅವರ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ, ಅವರ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಲು ಕಾಯುತ್ತಿರುತ್ತಾರೆ. ಇಂದು ಮಹೇಶ್ ಬಾಬು ಅವರು ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಸರ್ಕಾರು ವಾರಿ ಪಾಟ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾ ಬಿಡುಗಡೆ ನಡುವೆ ಇದೀಗ ಮಹೇಶ್ ಬಾಬು ಅವರು ಒಂದು ಸಿನಿಮಾಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು ಕೋಟಿ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ.
ಮಹೇಶ್ ಬಾಬು ಅವರು ಮೊದಲಿನಿಂದಲೂ ತಾವು ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳ ವಿಚಾರದಲ್ಲಿ ಬಹಳ ಸೆಲೆಕ್ಟಿವ್, ದೊಡ್ಡ ಪ್ರೊಡಕ್ಷನ್ ಹೌಸ್ ನ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಹಾಗೆಯೇ ತಮ್ಮ ಪಾತ್ರದ ಆಯ್ಕೆಯ ವಿಚಾರದಲ್ಲಿ ಬಹಳ ಚೂಸಿ ಆಗಿದ್ದಾರೆ. ಇದೀಗ 2 ರಿಂದ 3 ವರ್ಷಗಳ ನಂತರ ಮಹೇಶ್ ಬಾಬು ಅವರು ನಟಿಸಿರುವ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾ ನೋಡಲು ಟಾಲಿವುಡ್ ಪ್ರಿನ್ಸ್ ಅಭಿಮಾನಿಗಳು ಕಾತುರರಾಗಿದ್ದಾರೆ. ಇದೀಗ ಮಹೇಶ್ ಬಾಬು ಅವರು ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವ ವಿಚಾರ ಈಗ ಸುದ್ದಿಯಾಗುತ್ತಿದೆ.
ಸಿನಿಮಾ ವಿಶ್ಲೇಷಕರಾಗಿರುವ ರಮೇಶ್ ಬಾಲಾ ಅವರು ಮಹೇಶ್ ಬಾಬು ಅವರ ಸಂಭಾವನೆ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದು, ನಟ ಮಹೇಶ್ ಬಾಬು ಅವರು ಒಂದು ಸಿನಿಮಾಗೆ 35 ರಿಂದ 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಸಂಭಾವನೆ ಸಿನಿಮಾ ಇಂದ ಸಿನಿಮಾಗೆ ಬದಲಾಗಬಹುದು, ಹೆಚ್ಚು ಕಮ್ಮಿ ಆಗಬಹುದು. ಒಟ್ಟಿನಲ್ಲಿ ಮಹೇಶ್ ಬಾಬು ಅವರ ಸಂಭಾವನೆ ಮಿನಿಮನ್ 35 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಸರ್ಕಾರು ವಾರಿ ಪಾಟ ಸಿನಿಮಾ ಬಿಡುಗಡೆ ಬಳಿಕ ಮಹೇಶ್ ಬಾಬು ಅವರು ತ್ರಿವಿಕ್ರಂ ಶ್ರೀನಿವಾಸ್ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸಲಿದ್ದು, ಅದಾದ ಬಳಿಕ 2023ರಲ್ಲಿ ರಾಜಮೌಳಿ ಅವರ ನಿರ್ದೇಶನದಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ.
Comments are closed.