ಬರೋಬ್ಬರಿ 36 ವರ್ಷದ ದಿನೇಶ್ ರವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಬೇಕೆ?? ಸುನಿಲ್ ಗವಾಸ್ಕರ್ ಹೇಳಿದ್ದೇನು ಗೊತ್ತೇ??
ಈ ವರ್ಷದ ಐಪಿಎಲ್ ನಲ್ಲಿ ದಿನೇಶ್ ಕಾರ್ತಿಕ್ ಅವರು ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ. ಆರ್.ಸಿ.ಬಿ ತಂಡದ ಪರವಾಗಿ ದಿನೇಶ್ ಕಾರ್ತಿಕ್ ಅವರು ಬ್ಯಾಟ್ ಬೀಸುತ್ತಿರುವುದನ್ನು ನೋಡಿದರೆ, ಆರ್.ಸಿ.ಬಿ ತಂಡಕ್ಕೆ ಸಿಕ್ಕಿರುವ ವರ ಇವರು ಎಂದು ಅನ್ನಿಸುವುದು ಖಂಡಿತ. ನಮಗೆಲ್ಲ ಗೊತ್ತಿರುವ ಹಾಗೆ ಇನ್ನೇನು ಕೆಲವು ದಿನಗಳಲ್ಲಿ ಟಿ20 ಶುರುವಾಗಲಿದ್ದು, ಆಸ್ಟ್ರೇಲಿಯಾದಲ್ಲಿ ಪಂದ್ಯಗಳು ನಡೆಯಲಿದೆ. ಪ್ಲೇಯಿಂಗ್ 11 ಆಯ್ಕೆಗೆ, ಐಪಿಎಲ್ ನಲ್ಲಿ ಅಗ್ರಸ್ಥಾನದಲ್ಲಿ ಅಧ್ಭುತವಾದ ಪರ್ಫಾರ್ಮೆನ್ಸ್ ನೀಡುತ್ತಿರುವ ಆಟಗಾರರನ್ನು ಸೆಲೆಕ್ಟ್ ಮಾಡಿಕೊಳ್ಳುವ ಹಂತದಲ್ಲಿದೆ ಬಿಸಿಸಿಐ. ನಮ್ಮ ದಿನೇಶ್ ಕಾರ್ತಿಕ್ ಅವರು ಈ ಬಾರಿ ಟಿ20 ವಿಶ್ವಕಪ್ ನ ಪ್ಲೇಯಿಂಗ್ 11 ಟೀಮ್ ಗೆ ಆಯ್ಕೆಯಾಗುತ್ತಾರೆ ಎನ್ನಲಾಗುತ್ತಿದೆ.
2019ರ ಬಳಿಕ ದಿನೇಶ್ ಕಾರ್ತಿಕ್ ಅವರು ಟೀಮ್ ಇಂಡಿಯಾ ಪರವಾಗಿ ಆಡಿಲ್ಲ, ಅದಲ್ಲದೆ ಈ ವರ್ಷ ಅದ್ಭುತವಾದ ಫಾರ್ಮ್ ನಲ್ಲಿರುವ ಅವರನ್ನು ಟೀಮ್ ಇಂಡಿಯಾ ಆಯ್ಕೆ ಮಾಡಿಕೊಳ್ಳುವುದು ಪಕ್ಕಾ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ಭಾರತದ ಕ್ರಿಕೆಟ್ ಲೆಜೆಂಡ್ ಸುನೀಲ್ ಗವಾಸ್ಕರ್ ಅವರು ಡಿಕೆ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಮಾತನಾಡಿದ್ದಾರೆ. “ಕಳೆದ ಸಾಲಿನ ಐಸಿಸಿ ಟಿ20 ವಿಶ್ವಕಪ್ ಫೈನಲ್ ನಲ್ಲಿ ನಾನು ಮತ್ತು ದಿನೇಶ್ ಕಾರ್ತಿಕ್ ಜೊತೆಯಾಗಿ ಕಾಮೆಂಟರಿ ಮಾಡಿದ್ದೆವು. 2021ರ ನಂತರ ದಿನೇಶ್ ಅವರು ವಿಶ್ವಕಪ್ ಪಂದ್ಯಗಳನ್ನು ಆಡಲು ಎಷ್ಟು ಉತ್ಸುಕರಾಗಿದ್ದಾರೆ ಎನ್ನುವುದು ನನಗೆ ಗೊತ್ತಿದೆ. 2022ರಲ್ಲಿ ಅವರು ಅದ್ಭುತವಾದ ಫಾರ್ಮ್ ನಲ್ಲಿರುವುದನ್ನು ನೋಡಿದರೆ, ಅವರನ್ನು ಟೀಮ್ ಇಂಡಿಯಾಗೆ ಪರಿಗಣಿಸಬೇಕು. ನಾನು ಆಯ್ಕೆಗಾರನಾಗಿದ್ದರೆ ಖಂಡಿತವಾಗಿ ದಿನೇಶ್ ಕಾರ್ತಿಕ್ ಅವರನ್ನು ಟೀಮ್ ಗೆ ಆಯ್ಕೆ ಮಾಡಿಕೊಳ್ಳುತ್ತಿದ್ದೆ.
ಆಟಗಾರರು ಫಾರ್ಮ್ ನಲ್ಲಿರುವುದು ಮುಖ್ಯ. ಈಗ ಡಿಕೆ ಅವರ ಆಟದ ವೈಖರಿ ಗಮನಿಸಿ ಅವರನ್ನು ತಂಡಕ್ಕೆ ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಬೇಕು. ವಿಕೆಟ್ ಕೀಪಿಂಗ್ ಎರಡನೇ ಆಯ್ಕೆಯಾಗಿರಲಿ. ಅದ್ಭುತವಾದ ಬ್ಯಾಟ್ಸ್ಮನ್ ಆಗಿರುವ ದಿನೇಶ್ ಕಾರ್ತಿಕ್ ಅವರು ತಂಡದ ಬ್ಯಾಟ್ಸ್ಮನ್ ಆಗಿರಲು ಅರ್ಹರು. ವಯಸ್ಸಿನ ಬಗ್ಗೆ ಇಲ್ಲಿ ಯೋಚಿಸಬಾರದು, 20 ಓವರ್ ಗಳು ಕೀಪಿಂಗ್ ಮಾಡಿದ ನಂತರ ಅವರು ಬ್ಯಾಟಿಂಗ್ ಸಹ ಮಾಡುತ್ತಾರೆ. ಅವರ ಸಾಮರ್ಥ್ಯ ನೋಡಿ ಅವಕಾಶ ನೀಡಬೇಕು. ಟೀಮ್ ಇಂಡಿಯಾಗೆ ಮತ್ತೊಂದು ಪ್ರಮುಖ ಆಯ್ಕೆ ಕೆ.ಎಲ್.ರಾಹುಲ್, ಅವರ ಫಾರ್ಮ್ ಸಹ ಅದ್ಭುತವಾಗಿದೆ ಮತ್ತೊಂದು ಆಯ್ಕೆ ರಿಷಬ್ ಪಂತ್, ಅವರ ಫಾರ್ಮ್ ನಲ್ಲಿ ಏರಿಳಿತ ಇದ್ದರೂ ಸಹ ಅವರು ತಂಡಕ್ಕೆ ಆಯ್ಕೆಯಾಗುವುದು ಪಕ್ಕಾ. ದಿನೇಶ್ ಕಾರ್ತಿಕ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡದೆ ಇದ್ದರೂ ಸಹ, ಬ್ಯಾಟ್ಸ್ಮನ್ ಆಗಿ ಆಯ್ಕೆ ಮಾಡಬೇಕು..” ಎಂದು ಹೇಳಿದ್ದಾರೆ ಸುನೀಲ್ ಗವಾಸ್ಕರ್ ಅವರು.
Comments are closed.