Neer Dose Karnataka
Take a fresh look at your lifestyle.

2007 ರ ವಿಶ್ವಕಪ್ ಗೆ ನಾಯಕ ನಾನು ಆಗಬೇಕಾಗಿತ್ತು ಎಂದ ಯುವಿ, ಆದರೆ ಯುವಿ ಕೈತಪ್ಪಲು ಕಾರಣವಾದವರು ಯಾರು ಗೊತ್ತೇ?

ಯುವರಾಜ್ ಸಿಂಗ್ ನಮ್ಮ ಭಾರತ ಕ್ರಿಕೆಟ್ ತಂಡ ಕಂಡ ಅದ್ಭುತವಾದ ಆಟಗಾರರಲ್ಲಿ ಒಬ್ಬರು. ಅನೇಕ ಪಂದ್ಯಗಳಲ್ಲಿ ಭಾರತ ತಂಡ ಗೆಲ್ಲಲು ಇವರ ಪಾತ್ರ ಮಹತ್ವವಾದದ್ದು, ಯುವರಾಜ್ ಸಿಂಗ್ ಅವರು 2019ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಗಳಿಂದ ರೇತೈರ್ಮೆಂಟ್ ಪಡೆದುಕೊಂಡರು. ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ಯುವರಾಜ್ ಸಿಂಗ್ ಅವರು ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ತಿಳಿಸಿದ್ದಾರೆ. 2007ರ ವಿಶ್ವಕಪ್ ಗೆ ನಾನು ನಾಯಕನಾಗುತ್ತೇನೆ ಎಂದುಕೊಂಡಿದ್ದೇ, ಆದರೆ ನಡೆದಿದ್ದೇ ಬೇರೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಯುವಿ ಅವರು ಈ ರೀತಿ ಹೇಳಿದ್ದೇಕೆ? ತಿಳಿಸುತ್ತೇವೆ ನೋಡಿ..

“2007 ರಲ್ಲಿ ನಡೆದ 20-20 ವಿಶ್ವಕಪ್ ಪಂದ್ಯಗಳಿಗೆ ಕ್ಯಾಪ್ಟನ್ ಆಗಬೇಕಿದ್ದದ್ದು ನಾನು. ಆದರೆ ಆ ಸಮಯದಲ್ಲಿ ಗ್ರೆಗ್ ಚಾಪೆಲ್ ವಿವಾದ ನಡೆದಿತ್ತು. ಆಗ ನಾನು ಸಚಿನ್ ತೆಂಡುಲ್ಕರ್ ಅವರಿಗೆ ಬೆಂಬಲ ನೀಡಿದ್ದೆ. ಬಿಸಿಸಿಐ ನಲ್ಲಿದ್ದ ಕೆಲವು ಅಧಿಕಾರಿಗಳಿಗೆ ನನ್ನ ನಿಲುವು ಇಷ್ಟವಾಗಲಿಲ್ಲ. ‘ನನ್ನನ್ನು ಹೊರತುಪಡಿಸಿ ಬೇರೆ ಯಾರನ್ನಾದರೂ ಕ್ಯಾಪ್ಟನ್ ಮಾಡಬಹುದು’ ಎಂದು ಚರ್ಚೆ ನಡೆದಿತ್ತು ಎನ್ನುವ ವಿಚಾರ ನನಗೆ ನಂತರದ ಸಮಯದಲ್ಲಿ ಗೊತ್ತಾಯಿತು. ಇದು ನಿಜವೋ ಸುಳ್ಳೋ ಎನ್ನುವುದು ನನಗೆ ಗೊತ್ತಿಲ್ಲ. ನಾನೇ ಕ್ಯಾಪ್ಟನ್ ಆಗುತ್ತೇನೆ ಎಂದು ಅಂದುಕೊಂಡಿದ್ದೆ, ಆದರೆ ಆ ಟೂರ್ನಿಯ ಉಪನಾಯಕನ ಸ್ಥಾನದಿಂದ ನನ್ನನ್ನು ತೆಗೆದುಹಾಕಲಾಗಿತ್ತು. ಸೆಹ್ವಾಗ್ ಅವರು ತಂಡದಲ್ಲಿ ಇರಲಿಲ್ಲ..

ಹಾಗಾಗಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಅನಿರೀಕ್ಷಿತವಾಗಿ ತಂಡದ ಕ್ಯಾಪ್ಟನ್ ಆಗಿ ಮಾಡಲಾಗಿತ್ತು. ವೀರೇಂದ್ರ ಸೆಹ್ವಾಗ್ ಅವರು ಹಿರಿಯ ಆಟಗಾರರಾಗಿದ್ದರೂ ಸಹ ಅವರು ಯುರೋಪ್ ಪ್ರವಾಸದಲ್ಲಿ ಇರಲಿಲ್ಲ. ರಾಹುಲ್ ದ್ರಾವಿಡ್ ಅವರು ಕ್ಯಾಪ್ಟನ್ ಆಗಿದ್ದಾಗ, ನಾನು ವೈಸ್ ಕ್ಯಾಪ್ಟನ್ ಆಗಿದ್ದೆ. ಹಾಗಾಗಿ ನಾನೇ ಆ ಸಮಯದಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಬೇಕಿತ್ತು. ಯಾವುದೇ ಸಂಶಯ ಇಲ್ಲದೆ, ಅದು ನನ್ನ ವಿರುದ್ಧದ ನಡೆದ ನಿರ್ಧಾರವಾಗಿತ್ತು. ಅದರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಆ ರೀತಿಯ ಘಟನೆ ಈಗಲು ನಡೆದರೆ, ನಾನು ನನ್ನ ಸಹ ಆಟಗಾರರನ್ನೇ ಬೆಂಬಲಿಸುತ್ತೇನೆ..” ಎಂದು ಹೇಳಿಕೆ ನೀಡಿದ್ದಾರೆ ಯುವರಾಜ್ ಸಿಂಗ್. 2007ರಲ್ಲಿ 20-20 ವಿಶ್ವಕಪ್ ಹಾಗೂ 2011ರಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಧೋನಿ ಅವರ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡ ಗೆದ್ದಿತ್ತು. ಆ ಪಂದ್ಯಗಳನ್ನು ಗೆಲ್ಲಲು ಯುವರಾಜ್ ಸಿಂಗ್ ಅವರು ಸಹ ಮಹತ್ವದ ಪಾತ್ರ ವಹಿಸಿದ್ದರು.

Comments are closed.