ಅಪಘಾತವಾಗಿ ಆಸ್ಪತ್ರೆ ಸೇರಿಕೊಂಡಾಗ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದ ರವರು ಕರೆ ಮಡಿದ ಆ ಟಾಪ್ ನಟ ಹೇಳಿದ್ದೇನು ಗೊತ್ತೇ?? ಯಾರು ಗೊತ್ತೇ??
ಜೀಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋ ಬಹಳಷ್ಟು ಪ್ರತಿಭೆಗಳಿಗೆ ಅವಕಾಶ ಕೊಟ್ಟಿದೆ. ಕರ್ನಾಟಕದ ಮೂಲೆ ಮೂಲೆಗಳಿಂದ ಪ್ರತಿಭೆ ಇರುವವರು ಈ ಶೋಗೆ ಬಂದು ಗುರುತಿಸಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ಇಂದ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗೆ ಕಾಮಿಡಿ ಕಿಲಾಡಿಗಳು ಶೋ ಇಂದ ಗುರುತಿಸಿಕೊಂಡು ಈಗ ಸಿನಿಮಾರಂಗದಲ್ಲಿ ಹಾಸ್ಯನಟನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡವರು ಗೋವಿಂದೇಗೌಡ. ಇವರನ್ನು ಎಲ್ಲರೂ ಜಿಜಿ ಎಂದು ಕರೆಯುತ್ತಾರೆ. ಕೆಲ ತಿಂಗಳುಗಳ ಹಿಂದೆ ಜಿಜಿ ಅವರಿಗೆ ಅಪಘಾತವಾಗಿ ಆಸ್ಪತ್ರೆಯಲ್ಲಿದ್ದಾಗ ಕರೆಮಾಡಿ ಧೈರ್ಯ ತುಂಬಿದ ಕನ್ನಡದ ಆ ಸ್ಟಾರ್ ನಟ ಯಾರು ಗೊತ್ತಾ?
ಜಿಜಿ ಅವರು ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ಪಡೆದ ಅಕ್ಷಿ ಎನ್ನುವ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ ಜಿಜಿ. ಇವರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲೇ ಸ್ಪರ್ಧಿಯಾಗಿದ್ದ ದಿವ್ಯಶ್ರೀ ಅವರನ್ನು ಪ್ರೀತಿಸಿ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪ್ರಸ್ತುತ ಜಿಜಿ ಮತ್ತು ದಿವ್ಯಶ್ರೀ ಜೀವನಕ್ಕೆ ಮುದ್ದು ಮಗಳ ಆಗಮನವಾಗಿದೆ. ಮಗಳ ಜೊತೆಯಲ್ಲೆ ಯುಗಾದಿ ಹಬ್ಬ ಆಚರಿಸಿದ್ದ ಜಿಜಿ, ಇತ್ತೀಚೆಗೆ ತಮ್ಮ ಮಗಳ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಕೆಲವು ತಿಂಗಳುಗಳ ಹಿಂದೆ ಜಿಜಿ ಅವರಿಗೆ ಚಿತ್ರೀಕರಣ ಸಮಯದಲ್ಲಿ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಜಿಜಿ.
ಆ ಸಮಯದಲ್ಲಿ ನಟ ಜಗ್ಗೇಶ್ ಸೇರಿದಂತೆ ಹಲವರು, ಆಸ್ಪತ್ರೆಗೆ ಬಂದು ಜಿಜಿ ಅವರನ್ನು ನೋಡಿಕೊಂಡು ಹೋಗಿದ್ದರು, ಅದೇ ಸಮಯದಲ್ಲಿ ರಾಕಿ ಭಾಯ್ ಯಶ್ ಅವರು ಸಹ ಜಿಜಿ ಅವರಿಗೆ ಕರೆಮಾಡಿ, ‘ ಭಯ ಪಡಬೇಡ, ನಿನ್ನೊಂದಿಗೆ ನಾವೆಲ್ಲರೂ ಇದ್ದೀವಿ.. ಏನೇ ಸಹಾಯ ಬೇಕಿದ್ರು ನನಗೆ ಹೇಳು..” ಎಂದು ಧೈರ್ಯ ನೀಡಿದ್ದರಂತೆ ನಟ ಯಶ್. ಈ ವಿಚಾರವನ್ನು ಜಿಜಿ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಯಶ್ ಅವರ ಒಳ್ಳೆಯ ಗುಣ ಎಂಥದ್ದು ಎನ್ನುವುದು ಈ ಘಟನೆಯಿಂದ ಗೊತ್ತಾಗುತ್ತದೆ. ಕೆಜಿಎಫ್ ಚಾಪ್ಟರ್1 ಮತ್ತು ಕೆಜಿಎಫ್ ಚಾಪ್ಟರ್2 ಸಿನಿಮಾದಲ್ಲಿ ಜಿಜಿ ಅವರು ಒಂದು ಪಾತ್ರದಲ್ಲಿ ನಟಿಸಿದ್ದು, ಅವರ ಪಾತ್ರ ಜನರಿಗೆ ಬಹಳ ಇಷ್ಟವಾಗಿತ್ತು. ಇದೀಗ ಜಿಜಿ ಅವರು ಯಶ್ ಅವರ ಒಳ್ಳೆಯ ಗುಣದ ಬಗ್ಗೆ ತಿಳಿಸಿದ್ದು ಯಶ್ ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ.
Comments are closed.