ಇದ್ದಕ್ಕಿದ್ದ ಹಾಗೆ ಬಾಡಿಗೆ ಮನೆಯಲ್ಲಿ ಕಾಸರಗೋಡಿನ ನಟಿಯ ಸಾವು, ಷಾಕಿಂಗ್ ರಹಸ್ಯ ಬಿಚ್ಚಿಟ್ಟ ತಾಯಿ ಹೇಳಿದ್ದೇನು ಗೊತ್ತೇ??
ಕಲಾವಿದರ ಜೀವನ ಯಾವಾಗ ಹೇಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಂದು ಚೆನ್ನಾಗಿರುವವರು, ನಾಳೆ ಎಲ್ಲವನ್ನು ಕಳೆದುಕೊಳ್ಳಬಹುದು. ತಪ್ಪು ನಿರ್ಧಾರಗಳಿಂದ ಪ್ರಾಣಕ್ಕೆ ಆಪತ್ತು ಬರಬಹುದು. ಕೆಲವರು ತಮ್ಮಿಂದ ಆದ ತಪ್ಪಿನಿಂದಲೋ, ತಪ್ಪಿನ ನಿರ್ಧಾರದಿಂದಲೋ ಜೀವನವನ್ನು ನರಕ ಮಾಡಿಕೊಂಡಿರುತ್ತಾರೆ. ಇದರಿಂದಾಗಿ ಅವರ ಜೀವನವೇ ಹಾಳಾಗಿ ಹೋಗುತ್ತದೆ ಇಂಥದ್ದೇ ಒಂದು ಘಟನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಇದೀಗ ಕೇರಳ ಮೂಲದ ನಟಿಯೊಬ್ಬರು, ಕಾಸರಗೋಡಿನ ಬಳಿ ಮನೆಯೊಂದರಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಷ್ಟಕ್ಕೂ ಆ ಹುಡುಗಿ ಯಾರು?
ನಡೆದಿದ್ದೇನು? ತಿಳಿಸುತ್ತೇವೆ ನೋಡಿ..
ಈ ಹುಡುಗಿಯ ಹೆಸರು ಸಹನಾ. ಈಕೆಗೆ ಈಗ 20 ವರ್ಷ ವಯಸ್ಸು ಎಂದು ತಿಳಿದುಬಂದಿದೆ. ಈಕೆ ಕಾಸರಗೋಡಿನ ಚೆರುವತೂರು ಎನ್ನುವ ಊರಿನಲ್ಲಿ ವಾಸವಾಗಿದ್ದರು. ಈಕೆ ಕೊಯಿಕ್ಕೊಡ್ ನ ಬಾಡಿಗೆ ಮನೆಯಲ್ಲೂ ವಾಸ ಮಾಡುತ್ತಿದ್ದರು, ಅದೇ ಮನೆಯಲ್ಲಿ ನಿನ್ನೆ ರಾತ್ರಿ ಇವರ ಮೃತ ದೇಹ ಪತ್ತೆಯಾಗಿದೆ. ಮನೆಯಲ್ಲಿನ ಕಿಟಕಿಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಸಹನಾ. ಇದ್ದಕ್ಕಿದ್ದ ಹಾಗೆ ಈ ಹುಡುಗಿ ಈ ರೀತಿ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಈಕೆ ಚೆನ್ನಾಗಿಯೇ ಇದ್ದರು, ಚಿತ್ರರಂಗದಲ್ಲಿ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಬೇಕು ಎನ್ನುವ ಕನಸುಗಳನ್ನು ಇಟ್ಟುಕೊಂಡಿದ್ದ ಹುಡುಗಿ ಆಗಿದ್ದರು ಸಹನಾ..
ಆದರೆ ಇದ್ದಕ್ಕಿದ್ದ ಹಾಗೆ ಆ ಸ್ಥಿತಿಯಲ್ಲಿ ಇವರು ಸಿಕ್ಕಿದ್ದಾರೆ. ಇದೀಗ ಸಹನಾ ಅವರ ಗಂಡನ ಮೇಲೆ ಆಕೆಯ ತಾಯಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಒಂದೂವರೆ ವರ್ಷಗಳ ಹಿಂದೆ ಸಾಜದ್ ಎನ್ನುವವರ ಜೊತೆ ಮದುವೆಯಾಗಿದ್ದರು ಸಹನಾ. ಇವರಿಬ್ಬರ ವೈವಾಹಿಕ ಜೀವನ ಚೆನ್ನಾಗಿರಲಿಲ್ಲ, ಇಬ್ಬರು ಹೆಚ್ಚಾಗಿ ಪ್ರತಿದಿನ ಜಗಳ ಆಡುತ್ತಿದ್ದರು ಎಂದು ತಿಳಿದುಬಂದಿದ್ದು, ಕೆಲ ಸಮಯದ ಹಿಂದೆ ಆತ ಕೊಲೆ ಬೆದರಿಕೆ ಸಹ ಹಾಕಿದ್ದನು ಎನ್ನಲಾಗಿದೆ. ಹಾಗಾಗಿ ಈಗ ಸಾಜದ್ ಅವರ ಮೇಲೆ ಅನುಮಾನ ಮೂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ
Comments are closed.