ಇನ್ನೇನು ಟ್ವಿಟ್ಟರ್ ಖರೀದಿ ಮಾಡುತ್ತಾರೆ ಎನ್ನುವಷ್ಟರಲ್ಲಿ ಎಲಾನ್ ಮಾಸ್ಕ ತಾತ್ಕಾಲಿಕ ಬ್ರೇಕ್ ಹಾಕಿದ್ದು ಯಾಕೆ ಗೊತ್ತೇ??
ಟೆಸ್ಲಾ ಕಂಪನಿಯ ಸಂಸ್ಥಾಪಕ ಮತ್ತು ಪ್ರಪಂಚದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು ಖರೀದಿ ಮಾಡುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಸುದ್ದಿಯಾಗಿದೆ. $44 ಶತ ಬಿಲಿಯನ್ ಮೊತ್ತಕ್ಕೆ ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು, ಸ್ವತಃ ಮಸ್ಕ್ ಅವರೇ ಈ ವಿಚಾರ ತಿಳಿಸಿದ್ದರು. ಆದರೆ ಈಗ ಮಸ್ಕ್ ಅವರು ಟ್ವೀಟ್ ಮಾಡಿರುವ ಪ್ರಕಾರ, ಟ್ವಿಟರ್ ಖರೀದಿ ಹೋಲ್ಡ್ ನಲ್ಲಿದೆ ಎಂದು ತಿಳಿಸಿದ್ದಾರೆ ಮಸ್ಕ್.
ಈ ಟ್ವೀಟ್ ಸಧ್ಯಕ್ಕೆ ಗೊಂದಲ ಸೃಷ್ಟಿಸಿದೆ. ಎಲಾನ್ ಮಸ್ಕ್ ಅವರು ನಿಜವಾಗಿಯೂ ಈ ರೀತಿ ಹೇಳುತ್ತಿದ್ದಾರಾ ಅಥವಾ, ತಮಾಷೆ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. 20 ದಿವಸಗಳಿಂದ ಮಸ್ಕ್ ಅವರು ಮಾಡುತ್ತಿದ್ದ ಟ್ವೀಟ್ ಗಳನ್ನು ಗಮನಿಸಿ ನೋಡಿದರೆ, ಈಗಿನ ಟ್ವೀಟ್ ನಲ್ಲಿ ಸ್ಪಷ್ಟತೆ ಇಲ್ಲದ ಹಾಗೆ ಕಾಣುತ್ತಿದೆ. ಈ ಟ್ವೀಟ್ ನಲ್ಲಿ ಟ್ವಿಟರ್ ಜೊತೆಗಿನ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಹೇಳಿದ್ದಾರೆ ಎಲಾನ್ ಮಸ್ಕ್. ರಾಯಿಟರ್ಸ್ ನೀಡಿರುವ ಪ್ರಕಾರ,ಟ್ವಿಟರ್ ಬಳಕೆದಾರರು, ಶೇ.5ರಷ್ಟು ಸ್ಪ್ಯಾಮ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಈ ವರದಿ ಸಕರಾತ್ಮಕವಾಗಿದ್ದರು ಸಹ ಮಸ್ಕ್ ಅವರು ಟ್ವಿಟರ್ ಖರೀದಿಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ.
ಮಸ್ಕ್ ಅವರ ಮೊದಲ ಆದ್ಯತೆ ಟೆಸ್ಲಾ ಆಗಿದೆ. ಟ್ವಿಟರ್ ಒಪ್ಪಂದದ ಸುದ್ದಿ ಹೊರಬಂದ ಬಳಿಕ ಟೆಸ್ಲಾ ಸ್ಟಾಕ್ ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ, ಇದು ಮಸ್ಕ್ ಅವರ ಸಂಪತ್ತನ್ನು ಕಡಿಮೆ ಮಾಡಿದೆ. ಹಾಗಾಗಿ ಟ್ವಿಟರ್ ಸ್ಟಾಕ್ ಹೇಗೆ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವುದನ್ನು ಗಮನಿಸಿ, ಟ್ವಿಟರ್ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಲು ಬಯಸುತ್ತಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ತಾವು ನಿರ್ಧಾರ ಮಾಡಿದ ಬೆಲೆಗೆ ಟ್ವಿಟರ್ ಸಿಗದೆ ಇದ್ದರೆ, ಅದರಿಂದ ಮಸ್ಕ್ ಅವರು ದೂರ ಸರಿಯಬಹುದು, ಆದರೆ ಒಂದು ವೇಳೆ ಮಸ್ಕ್ ಅವರು ಈ ಒಪ್ಪಂದದಿಂದ ಹಿಂದೆ ಸರಿದರೆ 1 ಬಿಲಿಯನ್ ಡಾಲರ್ ಗಳನ್ನು ಟ್ವಿಟರ್ ಸಂಸ್ಥೆಗೆ ಕಟ್ಟಿಕೊಡಬೇಕಾಗುತ್ತದೆ. ಹಾಗಾಗಿ ಮಸ್ಕ್ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ
Comments are closed.