ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯ ಜೋಡಿಗಳ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ಸೆಲೆಬ್ರೆಟಿ ಗಳು ಎಷ್ಟೆಲ್ಲ ಅಂತರ ಇದ್ದರೂ ಮದುವೆಯಾಗಿದ್ದಾರೆ ಗೊತ್ತೇ??
ಮದುವೆ ಎನ್ನುವುದು ಒಂದು ಸುಂದರವಾದ ಅನುಬಂಧ. ಎರಡು ಮನಸ್ಸುಗಳ ಮಿಲನ. ಎಲ್ಲರ ಜೀವನದಲ್ಲೂ ಮದುವೆ ಎನ್ನುವುದು ತುಂಬಾ ಸ್ಪೆಷಲ್. ಎಲ್ಲರೂ ಮದುವೆ ಬಗ್ಗೆ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳ ಮದುವೆ ಅಂದ್ರೆ ಎಲ್ಲರಿಗೂ ಆಕರ್ಷಣೆ ಹೆಚ್ಚು. ನಮ್ಮ ಚಂದನವನದ ಸೆಲೆಬ್ರಿಟಿ ಜೋಡಿಗಳು ಒಬ್ಬರಿಗಿಂತ ಒಬ್ಬರು ಕ್ಯೂಟ್ ಆಗಿದ್ದಾರೆ. ಇಂದು ನಾವು ನಿಮಗೆ ನಣ್ಣ ಸೆಲೆಬ್ರಿಟಿ ಜೋಡಿಗಳ ನಡುವೆ ಇರುವ ವಯಸ್ಸಿನ ವ್ಯತ್ಯಾಸದ ಬಗ್ಗೆ ತಿಳಿಸಿಕೊಡಲಿದ್ದೇವೆ..
ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಎನ್ನಿಸಿಕೊಂಡಿದ್ದವರು ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಜೋಡಿ, ಚಿರು ಅವರು ಮೇಘನಾ ಅವರಿಗಿಂತ 5 ವರ್ಷ ದೊಡ್ಡವರು. ರಾಕಿಂಗ್ ಜೋಡಿ ಎನ್ನಿಸಿಕೊಂಡಿರುವವರು ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್. ಯಶ್ ಅವರಿಗಿಂತ ರಾಧಿಕಾ ಮೂರು ವರ್ಷ ದೊಡ್ಡವರು. ಚಂದನವನದ ಮತ್ತೊಂದು ಕ್ಯೂಟ್ ಜೋಡಿ ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ಪ್ರಜ್ವಲ್. ಪ್ರಜ್ವಲ್ ಅವರು ಪತ್ನಿ ರಾಗಿಣಿ ಅವರಿಗಿಂತ 3 ವರ್ಷ ದೊಡ್ಡವರು. ದೂದ್ ಪೇಡಾ ದಿಗಂತ್ ಅವರು ಮದುವೆಯಾಗಿದ್ದು ಬೆಂಗಾಲಿ ಬ್ಯೂಟಿ ಐಂದ್ರಿತಾ ಅವರೊಡನೆ, ಐಂದ್ರಿತಾ ಅವರಿಗಿಂತ ದಿಗಂತ್ 2 ವರ್ಷ ದೊಡ್ಡವರು. ಸ್ಯಾಂಡಲ್ ವುಡ್ ನ ಸೆನ್ಸೇಷನಲ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, ಮಿಲನಾ ಅವರಿಗಿಂತ ಕೃಷ್ಣ 4 ವರ್ಷ ದೊಡ್ಡವರು.
ಚಂದನವನದ ಆದರ್ಶ ದಂಪತಿಗಳಾಗಿದ್ದವರು ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್, ಅಶ್ವಿನಿ ಅವರಿಗಿಂತ ಅಪ್ಪು ಅವರು 2 ವರ್ಷ ದೊಡ್ಡವರು. ರಿಯಲ್ ಸ್ಟಾರ್ ಉಪೇಂದ್ರ ಅವರು ಬೆಂಗಾಲಿ ಬ್ಯೂಟಿ ಪ್ರಿಯಾಂಕ ಅವರೊಡನೆ ಮದುವೆಯಾದರು. ಪ್ರಿಯಾಂಕ ಅವರಿಗಿಂತ ಉಪೇಂದ್ರ ಅವರು 9 ವರ್ಷ ದೊಡ್ಡವರು. ನಿಖಿಲ್ ಕುಮಾರಸ್ವಾಮಿ ಅವರು ಪತ್ನಿ ರೇವತಿ ಅವರಿಗಿಂತ 4 ವರ್ಷ ದೊಡ್ಡವರು. ಖ್ಯಾತನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ತಮ್ಮ ಪತ್ನಿ ವಿದ್ಯಾ ಶ್ರೀಮುರಳಿ ಅವರಿಗಿಂತ 2 ವರ್ಷ ದೊಡ್ಡವರು. ನಿರ್ದೇಶಕ ಜೋಗಿ ಪ್ರೇಮ್ ಅವರು ಕ್ರೇಜಿಕ್ವೀನ್ ರಕ್ಷಿತಾ ಅವರೊಡನೆ ಮದುವೆಯಾದರು, ರಕ್ಷಿತಾ ಅವರಿಗಿಂತ 8 ವರ್ಷ ದೊಡ್ಡವರು. ಕನ್ನಡ ರಾಪರ್ ಚಂದನ್ ಶೆಟ್ಟಿ ಅವರು ಟಿಕ್ ಟಾಕ್ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರೊಡನೆ ಮದುವೆಯಾದರು. ನಿವೇದಿತಾ ಗಿಂತ ಚಂದನ್ 11 ವರ್ಷ ದೊಡ್ಡವರು. ನಟ ದರ್ಶನ್ ಅವರು ವಿಜಯಲಕ್ಷ್ಮೀ ಅವರನ್ನು ಪ್ರೀತಿಸಿ ಮದುವೆಯಾದರು. ಪತ್ನಿಗಿಂತ 5 ವರ್ಷ ದೊಡ್ಡವರು ಡಿಬಾಸ್. ನಟ ಸುದೀಪ್ ಅವರು ಪ್ರಿಯಾ ರಾಧಾಕೃಷ್ಣನ್ ಅವರನ್ನು ಪ್ರೀತಿಸಿ ಮದುವೆಯಾದರು, ಪ್ರಿಯಾ ಅವರಿಗಿಂತ 12 ವರ್ಷ ದೊಡ್ಡವರು ಸುದೀಪ್. ಸೆಂಚುರಿ ಸ್ಟಾರ್ ಶಿವಣ್ಣ ಅವರು ಪತ್ನಿ ಗೀತಾ ಅವರಿಗಿಂತ 5 ವರ್ಷ ದೊಡ್ಡವರು.
Comments are closed.