ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸುತ್ತಿರುವ ಸರ್ಕಾರೀ ವಾರಿ ಪಾಠ ಚಿತ್ರಕ್ಕೆ ಮಹೇಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ??
ಟಾಲಿವುಡ್ ನ ಖ್ಯಾತ ನಟ ಹಾಗೂ ನೋಡಲು ಬಹಳ ಮುದ್ದಾಗಿರುವ ನಟ ಟಾಲಿವುಡ್ ಪ್ರಿನ್ಸ್, ಸೂಪರ್ ಸ್ಟಾರ್ ಮಹೇಶ್ ಬಾಬು. ಮಹೇಶ್ ಬಾಬು ಅವರು ಪ್ಯಾನ್ ಇಂಡಿಯಾ ಸಿನಿಮಾ ಮಾಡದೆ ಇದ್ದರೂ ಸಹ ಇವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಇತ್ತೀಚಿನ ವರ್ಷಗಳಲ್ಲಿ ಮಹೇಶ್ ಬಾಬು ಅವರು ಸಮಾಜಕ್ಕೆ ಯಾವುದಾದರೂ ಒಂದು ಸಂದೇಶ ನೀಡುವ ಸಿನಿಮಾಗಳಲ್ಲೇ ನಟಿಸುತ್ತಿದ್ದಾರೆ. ಮಹೇಶ್ ಬಾಬು ಅವರಿಗೆ ಫ್ಯಾಮಿಲಿ ಆಡಿಯನ್ಸ್ ಜಾಸ್ತಿ. ಕುಟುಂಬ ಸಮೇತ ಥಿಯೇಟರ್ ಗೆ ಬಂದು, ಅಭಿಮಾನಿಗಳು ಮಹೇಶ್ ಬಾಬು ಅವರ ಸಿನಿಮಾ ನೋಡುತ್ತಾರೆ.
ನಿನ್ನೆಯಷ್ಟೇ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿರುವ ಸರ್ಕಾರು ವಾರಿ ಪಾಟ ಸಿನಿಮಾ ಬಿಡುಗಡೆಯಾಗಿ, ಸಿನಿಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರು, ಮಧ್ಯಮ ವರ್ಗದ ಜನರ ಕಷ್ಟ, ಬ್ಯಾಂಕಿಂಗ್ ಲೋನ್ ಗಳಿಂದ ಜನರು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವ ವಿಚಾರಗಳನ್ನಿ ನೈಜವಾಗಿ ತೋರಿಸಲಾಗಿದೆ. ಹಾಗಾಗಿ ಸರ್ಕಾರು ವಾರಿ ಪಾಟ ಸಿನಿಮಾ ಜನರಿಗೆ ತುಂಬಾ ಇಷ್ಟವಾಗಿದೆ. ಸಿನಿಮಾ ಮೆಚ್ಚಿರುವ ಪ್ರೇಕ್ಷಕರು, ಸಿನಿಮಾ ಬಗ್ಗೆ ಭಾರಿ ಚರ್ಚೆ ಮಾಡುತ್ತಿದ್ದಾರೆ. ಇದರ ಜೊತೆಗೆ ಸರ್ಕಾರು ವಾರಿ ಪಾಟ ಸಿನಿಮಾಗೆ ಮಹೇಶ್ ಬಾಬು ಅವರು ಪಡೆದಿರುವ ಸಂಭಾವನೆ ವಿಚಾರ ಭಾರಿ ಚರ್ಚೆಯಾಗುತ್ತಿದೆ.
ಸಿಕ್ಕಿರುವ ಮಾಹಿತಿಯ ಪ್ರಕಾರ ಮಹೇಶ್ ಬಾಬು ಅವರು ಸರ್ಕಾರು ವಾರಿ ಪಾಟ ಸಿನಿಮಾಗೆ 45 ರಿಂದ 50 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ವಿಶ್ಲೇಷಕ ರಮೇಶ್ ಅವರು ತಿಳಿಸಿರುವ ಮಾಹಿತಿ ಪ್ರಕಾರ ಮಹೇಶ್ ಬಾಬು ಅವರು ಒಂದು ಸಿನಿಮಾಗೆ 35 ರಿಂದ 50 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ. ಸಾಕಷ್ಟು ಜಾಹೀರಾತಿನಲ್ಲಿ ಸಹ ಮಹೇಶ್ ಬಾಬು ಅವರು ಕಾಣಿಸಿಕೊಳ್ಳುತ್ತಾರೆ, ಅವುಗಳಿಗೂ ಸಹ ಮಹೇಶ್ ಬಾಬು ಅವರು ದುಬಾರಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತಿನಿಂದ ಸಂಪಾದಿಸಿದ ಹಣದಿಂದಲೇ ಆಸ್ತಿಯನ್ನು ಸಹ ಖರೀದಿ ಮಾಡಿದ್ದಾರೆ
Comments are closed.