ನಿಜಕ್ಕೂ ಕೆಜಿಎಫ್-3 ಬರುತ್ತಿದೆಯೇ? ಹಾಗಿದ್ದರೆ ಚಿತ್ರೀಕರಣ ಯಾವಾಗ?? ಕೊನೆಗೂ ನಿರ್ಮಾಪಕರು ಕೊಟ್ಟರು ಸಿಹಿ ಸುದ್ದಿ. ಡೇಟ್ ನೀಡಿ ಹೇಳಿದ್ದೇನು ಗೊತ್ತೇ??
ಕೆಜಿಎಫ್2 ಸಿನಿಮಾ ಚಿತ್ರರಂಗದಲ್ಲಿ ಎಷ್ಟು ದೊಡ್ಡ ಕ್ರೇಜ್ ಸೃಷ್ಟಿಸಿದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಸಿನಿಮಾದ ಪ್ರತಿಕ್ಷಣವನ್ನು ಸಿನಿಪ್ರಿಯರು ಎಂಜಾಯ್ ಮಾಡುತ್ತಾ ನೋಡಿದ್ದಾರೆ. ಸಿನಿಮಾ ನೋಡುತ್ತಿದ್ದ ವೀಕ್ಷಕರಿಗೆ ರೋಮಾಂಚನವಾದ ಕ್ಷಣ, ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ಎಂದರೆ ತಪ್ಪಾಗುವುದಿಲ್ಲ. ಕ್ಲೈಮ್ಯಾಕ್ಸ್ ನಲ್ಲಿ ಪ್ರಶಾಂತ್ ನೀಲ್ ಅವರು ಕೆಜಿಎಫ್ ಚಾಪ್ಟರ್3 ಬಗ್ಗೆ ಸುಳಿವನ್ನು ನೀಡಿದ್ದಾರೆ. ಇದನ್ನು ಕಂಡ ಸಿನಿಪ್ರಿಯರು ಸೆಲೆಬ್ರೇಟ್ ಮಾಡಿದ್ದಂತೂ ಸತ್ಯ. ಇದೀಗ ಎಲ್ಲರಲ್ಲೂ ಕೆಜಿಎಫ್3 ಸಿನಿಮಾ ಶುರುವಾಗೋದು ಯಾವಾಗ, ತೆರೆಕಾಣೋದು ಯಾವಾಗ ಎನ್ನುವ ಕುತೂಹಲ ಶುರುವಾಗಿದೆ.
ಪ್ರಶಾಂತ್ ನೀಲ್ ಅವರು ಒಂದು ಸಂದರ್ಶನದಲ್ಲಿ ಮಾತನಾಡಿ, ಕೆಜಿಎಫ್3 ಸಿನಿಮಾ ಇನ್ನು 8 ವರ್ಷಗಳಾದ ಮೇಲೆ ತೆರೆಕಾಣುತ್ತದೆ ಎನ್ನುವ ಉತ್ತರ ನೀಡಿದ್ದರು. ಆದರೆ ಈಗ ನಿರ್ಮಾಪಕ, ಹೊಂಬಾಳೆ ಫಿಲ್ಮ್ಸ್ ನ ಮುಖ್ಯಸ್ಥರಾದ ವಿಜಯ್ ಕಿರಗಂದೂರ್ ಅವರು ಕೆಜಿಎಫ್3 ಬಗ್ಗೆ ಸುಳಿವು ಕೊಟ್ಟಿದ್ದು, ಸಿನಿಮಾ ಬಿಡುಗಡೆ ಯಾವಾಗ ಎಂದು ಸಹ ತಿಳಿಸಿದ್ದಾರೆ. ವಿಜಯ್ ಕಿರಗಂದೂರ್ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ಕೆಜಿಎಫ್3 ಸಿನಿಮಾ ಚಿತ್ರೀಕರಣ ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗಲಿದೆ ಎಂದು ಹೇಳಿದ್ದಾರೆ. ಇನ್ನು ಸಿನಿಮಾ ಬಿಡುಗಡೆ ಆಗುವುದು, 2024 ಆಗಬಹುದು ಎಂದು ಹೇಳಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್.
ಇದಲ್ಲದೆ, ಮತ್ತೊಂದು ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಕೆಜಿಎಫ್3 ಸಿನಿಮಾದಲ್ಲಿ ಮಾರ್ವೆಲ್ ಸಿನಿಮಾಗಳ ಹಾಗೆ ಯೂನಿವರ್ಸ್ ನಿರ್ಮಿಸಲಿದ್ದು, ಬೇರೆ ಸಿನಿಮಾಗಳ ಪ್ರಮುಖ ಪಾತ್ರಗಳು ಸಹ ಕೆಜಿಎಫ್3 ನಲ್ಲಿ ಇರಲಿದೆ ಎನ್ನುವ ಅಂಶವನ್ನು ತಿಳಿಸಿದ್ದಾರೆ. ಇನ್ನು ಕೆಜಿಎಫ್3 ಸಿನಿಮಾಗಳ ಬೇರೆ ಸಿನಿಮಾಗಳ ವಿಲ್ಲನ್ ಗಳು ಸಹ ಮೋಡಿ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹೀರೋಗಳು ಸಹ ಇರುತ್ತಾರೆ ಎನ್ನಲಾಗುತ್ತಿದೆ. ಕೆಜಿಎಫ್2 ಸಿನಿಮಾದಲ್ಲಿ ಜಿಜಿ ಗೌಡ ಅವರು ಕೆಜಿಎಫ್ ಚಾಪ್ಟರ್3 ಪುಸ್ತಕವನ್ನು ಸರಿಸುವ ಅದೇ ಸಮಯಕ್ಕೆ, ರಮಿಕಾ ಸೇನ್ ಯು.ಎಸ್. ಆರ್ಮಿ ಕಳಿಸುವ ರಾಕಿ ಫೈಲ್ ಅನ್ನು ಓಪನ್ ಮಾಡುತ್ತಾರೆ. ಹಾಗಾಗಿ ಕೆಜಿಎಫ್3 ಸಿನಿಮಾ, ರಾಕಿ ಭಾಯ್ ವಿದೇಶಗಳಲ್ಲಿ ಮಾಡಿರುವ ಅಪರಾಧಗಳ ಬಗ್ಗೆ ಇರಬಹುದಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ. ಏನೇ ಆದರೂ ಸಿನಿಮಾ ಬಗ್ಗೆ ತಿಳಿಯಲು 2024ರ ವರೆಗೂ ಕಾಯಬೇಕಿದೆ.
Comments are closed.