ಪರಭಾಷಾ ಸಿನೆಮಾಗಳಿಗೆ ಅವರ ನೆಲದಲ್ಲಿಯೇ ಸೋಲಿನ ರುಚಿ ತೋರಿಸಿದ ಯಶ್: ಇವರು ಸೋಲಿಸಿರುವ ಅಷ್ಟು ಸಿನಿಮಾಗಳು ಟಾಪ್ ನಟರದ್ದೇ.. ಯಾರ್ಯಾರಿಗೆ ಗೊತ್ತೇ??
ಕೆಜಿಎಫ್2 ಸಿನಿಮಾ ವಿಶ್ವಾದ್ಯಂತ ಎಂಥಹ ದೊಡ್ಡ ಓಪನಿಂಗ್ ಪಡೆದುಕೊಂಡಿದೆ ಎನ್ನುವ ವಿಚಾರ ನಮಗೆಲ್ಲ ಗೊತ್ತಿದೆ. ಈಗಾಗಲೇ 1,200 ಕೋಟಿ ರೂಪಾಯಿ ಗಳಿಸಿ, ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಸಾಗುತ್ತಿದೆ ಕೆಜಿಎಫ್2 ಸಿನಿಮಾ. ಕನ್ನಡದ ನಮ್ಮ ಸಿನಿಮಾ ಪರಭಾಷೆಗಳಲ್ಲಿ ಇಷ್ಟರ ಮಟ್ಟಿಗೆ ಹವಾ ಸೃಷ್ಟಿಸಿರುವುದು ನಿಜಕ್ಕೂ ಬಹಳ ಶಾಕ್ ತರುವಂತಹ ವಿಚಾರ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಎಲ್ಲಾ ಕಡೆ ನಮ್ಮ ಕನ್ನಡ ಸಿನಿಮಾ ಅಲ್ಲಿನ ನಾಯಕರ ಸಿನಿಮಾಗಳನ್ನು ಡಲ್ ಆಗುವ ಹಾಗೆ ಮಾಡಿದೆ. ಅಷ್ಟರ ಮಟ್ಟಿಗೆ ಇದೆ ರಾಕಿ ಭಾಯ್ ಹವಾ. ಕೆಜಿಎಫ್2 ಎದುರು ಸೋತ ಸ್ಟಾರ್ ನಟರ ಸಿನಿಮಾಗಳು ಯಾವುವು ಗೊತ್ತಾ?
ಕೆಜಿಎಫ್2 ಎದುರು ಮೊದಲು ನಿಂತಿದ್ದು, ದಳಪತಿ ವಿಜಯ್ ಅವರ ಸಿನಿಮಾ ಬೀಸ್ಟ್. ಈ ಸಿನಿಮಾ ಏಪ್ರಿಲ್ 13 ರಂದು ತೆರೆಕಂಡಿತು. ಆದರೆ ಸಿನಿಮಾ ಕಥೆಯಲ್ಲಿ ಗ್ರಿಪ್ ಇರದೇ, ಡಿಸಾಸ್ಟರ್ ಆಗಿದೆ. ಬೀಸ್ಟ್ ಸಿನಿಮಾ ಬಿಡುಗಡೆಯಾಗಿ ಇಲ್ಲಿಯವರೆಗೂ ಗಳಿಸಿದ್ದು ಸುಮಾರು 250 ಕೋಟಿ ರೂಪಾಯಿಗಳು. ಬೀಸ್ಟ್ ಸಿನಿಮಾ ಇಷ್ಟು ಹಣ ಗಳಿಸಿಯಿ ಕೆಜಿಎಫ್2 ಎದುರು ಸೋತಿದೆ, ತಮಿಳುನಾಡಿನಲ್ಲೇ ಬೀಸ್ಟ್ ಸಿನಿಮಾ ಹವಾ ಕಡಿಮೆಯಾಗಿ, ತಮಿಳು ನಾಡಿನಲ್ಲೇ ಕೆಜಿಎಫ್2 ಸಿನಿಮಾ 130 ಕೋಟಿ ಗಳಿಸಿದೆ. ತಮಿಳು ನಾಡಿನಲ್ಲಿ ಡಬ್ ಆಗಿರುವ ಸಿನಿಮಾ, ಅದರಲ್ಲೂ ಕನ್ನಡ ಸಿನಿಮಾ ಇಷ್ಟು ಹಣ ಗಳಿಸಿರುವುದು ನಿಜಕ್ಕೂ ಮೆಚ್ಚುವ ವಿಷಯ.
ಇನ್ನು ತೆಲುಗಿನಲ್ಲಿ ಸಹ ಇದೇ ಕಥೆ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರು ಹಾಗೂ ರಾಮ್ ಚರಣ್ ಅವರು ಅಭಿನಯಿಸಿರುವ ಆಚಾರ್ಯ ಸಿನಿಮಾ ತೆರೆಕಂಡು, ದೊಡ್ಡ ಡಿಸಾಸ್ಟರ್ ಎನ್ನಿಸಿಕೊಂಡಿದೆ. ಈ ಸಿನಿಮಾ ಗಳಿಸಿದ್ದು ಕೇವಲ 80 ಕೋಟಿ ರೂಪಾಯಿಗಳು. ಸಿನಿಮಾದಲ್ಲಿ ಸ್ಟಾರ್ ನಟರಿದ್ದರೂ ಸಹ, ಹಳೆಯ ರೀತಿಯ ಕಥೆ ಪ್ರೆಸೆಂಟೇಶನ್ ಇಂದಾಗಿ, ಆಚಾರ್ಯ ಸಿನಿಮಾ ಸೋತಿದೆ. ತೆಲುಗಿನಲ್ಲಿ ದೊಡ್ಡ ಡಿಸಾಸ್ಟರ್ ಆಗಿದೆ ಆಚಾರ್ಯ. ಇನ್ನು ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟ ಸಿನಿಮಾ ಮೊನ್ನೆ ತೆರೆಕಂಡು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲ ದಿನವೇ ಮಹೇಶ್ ಬಾಬು ಅವರ ಸಿನಿಮಾ 75 ಕೋಟಿ ಗಳಿಸಿ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ.
ಮುಂದಿನ ದಿನಗಳಲ್ಲಿ ಸರ್ಕಾರು ವಾರಿ ಪಾಟ ಬ್ಲಾಕ್ ಬಸ್ಟರ್ ಆಗದೆ ಇದ್ದರೂ ಸಹ, ಡಿಸಾಸ್ಟರ್ ಅಂತೂ ಆಗುವುದಿಲ್ಲ ಎನ್ನಲಾಗುತ್ತಿದೆ. ಇದರಿಂದ ತೆಲುಗು ರಾಜ್ಯದಲ್ಲಿ ಸಹ ಕೆಜಿಎಫ್2 ಹವಾ ಜೋರಾಗಿಯೇ ಇದೆ, ಆಂಧ್ರ ಹಾಗೂ ತೆಲಂಗಾಣದಲ್ಲಿ ಸಹ ಕೆಜಿಎಫ್2 ನೂರು ಕೋಟಿ ಕಲೆಕ್ಷನ್ ದಾಟಿದೆ. ಇನ್ನು ಹಿಂದಿಯಲ್ಲಿ ಸಹ ಇದೇ ಸ್ಥಿತಿ ಆಗಿದೆ. ಕೆಜಿಎಫ್2 ನಂತರ ಹಿಂದಿಯಲ್ಲಿ ಬಿಡುಗಡೆ ಆಗಿದ್ದು, ಶಾಹಿದ್ ಕಪೂರ್ ಅಭಿನಯದ ಜೆರ್ಸಿ, ಅಜಯ್ ದೇವಗನ್ ಮತ್ತು ಅಮಿತಾಭ್ ಬಚ್ಚನ್ ಅಭಿನಯದ ರನ್ ವೇ ಹಾಗೂ ಟೈಗರ್ ಶ್ರಾಫ್ ಅಭಿನಯದ ಹೀರೊಪಂತಿ2. ಈ ಮೂರು ಸಿನಿಮಾಗಳು ಸಹ ಅಂದುಕೊಂಡಷ್ಟು ಯಶಸ್ಸು ಗಳಿಸಿಲ್ಲ.
ರನ್ ವೇ ಸಿನಿಮಾ ಮೊದಲ ದಿನ ಗಳಿಸಿದ್ದು 32 ಕೋಟಿ, ಇನ್ನು ಹೀರೋಪಂತಿ 2 ಸಿನಿಮಾ ಮೊದಲ ದಿನ ಗಳಿಸಿದ್ದು 30 ಕೋಟಿ ರೂಪಾಯಿಗಳು. ಹಾಗೂ ಜೆರ್ಸಿ ಸಿನಿಮಾ ಮೊದಲ ದಿನ ಗಳಿಸಿದ್ದು ಕೇವಲ 3 ರಿಂದ 7 ಕೋಟಿ ರೂಪಾಯಿ ಎಂದು ಮಾಹಿತಿ ಸಿಕ್ಕಿದೆ.
ಹಿಂದಿ ಸಿನಿಮಾಗಳು ಸಹ ಕೆಜಿಎಫ್2 ಎದುರು ಡಲ್ ಹೊಡೆಯುತ್ತಿದೆ. ಹಿಂದೆಯಲ್ಲೇ 400 ಕೋಟಿಗಿಂತ ಹೆಚ್ಚಿನ ಹಣಗಳಿಕೆ ಮಾಡಿದೆ ಕೆಜಿಎಫ್2. ಹಿಂದಿಯಲ್ಲಿ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿದೆ. ಹಿಂದಿ ಭಾಷೆಯಲ್ಲಿ ಇದುವರೆಗೂ ಇಷ್ಟು ಕಡಿಮೆ ಸಮಯದಲ್ಲಿ ಯಾವ ಸ್ಟಾರ್ ನಟರ ಸಿನಿಮಾ ಸಹ ಇಷ್ಟು ದೊಡ್ಡ ಮಟ್ಟದಲ್ಲಿ ಹಣ ಗಳಿಕೆ ಮಾಡಿರಲಿಲ್ಲ ಎನ್ನಲಾಗುತ್ತಿದೆ.
ಇನ್ನು ಆಮೀರ್ ಖಾನ್ ಅವರು ಅಭಿನಯಿಸಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸಹ ಕೆಜಿಎಫ್2 ಜೊತೆ ಬಿಡುಗಡೆ ಆಗಬೇಕಿತ್ತು, ಆದರೆ ಆಮೀರ್ ಖಾನ್ ಅವರು ರಿಲೀಸ್ ಡೇಟ್ ಪೋಸ್ಟ್ ಪೋನ್ ಮಾಡಿದರು. ಆಗಸ್ಟ್ ತಿಂಗಳಿನಲ್ಲಿ ಲಾಲ್ ಸಿಂಗ್ ಚಡ್ಡಾ ಬಿಡುಗಡೆ ಆಗಲಿದೆ.ದಾಖಲೆಯ ಹಣಗಳಿಕೆ ಮಾಡಿದ್ದ ಆರ್.ಆರ್.ಆರ್ ಸಿನಿಮಾದ ಕಲೆಕ್ಷನ್ ಮೀರಿಸಿ ಸಾಗುತ್ತಿದೆ ಕೆಜಿಎಫ್2. ಇನ್ನು ವಿಶ್ವಮಟ್ಟದಲ್ಲಿ ನೋಡುವುದಾದರೆ, ಇಷ್ಟು ಹಣಗಳಿಕೆ ಮಾಡಿರುವ ಮೂರನೇ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕೆಜಿಎಫ್2 ಸಿನಿಮಾ ಪಾತ್ರವಾಗಿದೆ. ಕೆಜಿಎಫ್2 ಹವಾ ಮುಂದಿನ ದಿನಗಳಲ್ಲಿ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.
Comments are closed.