ಮತ್ತೊಮ್ಮೆ ಕಡಿಮೆ ಮೊತ್ತಕ್ಕೆ ಔಟ್ ಆದ ವಿರಾಟ್ ಕೊಹ್ಲಿ ಕುರಿತು ನಾಯಕ ಡುಪ್ಲೆಸಿಸ್ ಹೇಳಿದ್ದೇನು ಗೊತ್ತೇ?? ಒಂದು ಕಾಲದ ಕಿಂಗ್ ಗೆ ಇಂತಹ ಪರಿಸ್ಥಿತಿ ಯಾಕೆ?
ಈ ವರ್ಷವಾದರು ನಮ್ಮ ಆರ್.ಸಿ.ಬಿ ತಂಡ ಗೆಲ್ಲಲಿ ಎನ್ನುವುದೇ ಎಲ್ಲಾ ಅಭಿಮಾನಿಗಳ ಆಸೆ. ಆದರೆ ಆರ್.ಸಿ.ಬಿ ಸೋಲುಗಳಿಂದ ಕಂಗೆಡುತ್ತಿದೆ. ನಿನ್ನೆ ಪಂಜಾಬ್ ಸೂಪರ್ ಕಿಂಗ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಆರ್.ಸಿ.ಬಿ ತಂಡ ಹೀನಾಯವಾದ ಸೋಲು ಕಂಡಿತು. ಈ ಮೂಲಕ ಆರ್.ಸಿ.ಬಿ ಪ್ಲೇ ಆಫ್ಸ್ ತಲುಪುವ ಹಾದಿ ಇನ್ನು ಕಷ್ಟವಾಗಿದೆ. ಆರ್.ಸಿ.ಬಿ ಪಂದ್ಯಕ್ಕೆ ಇರುವುದು ಇನ್ನೊಂದು ಪಂದ್ಯ, ಅದು ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಮೇ 19ರಂದು ನಡೆಯಲಿದೆ. ಆ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಸೋತರೆ, ಐಪಿಎಲ್ ಇಂದ ಹೊರಬೀಳಲಿದೆ ಆರ್.ಸಿ.ಬಿ.
ಆರ್.ಸಿ.ಬಿ ತಂಡದ ಬಲಿಷ್ಠ ಆಟಗಾರ ವಿರಾಟ್ ಕೋಹ್ಲಿ ಅವರು ಈ ವರ್ಷ ಫಾರ್ಮ್ ಕಳೆದುಕೊಂಡಿದ್ದಾರೆ. ಮೂರು ಬಾರಿ ಡಗ್ ಔಟ್ ಆಗಿದ್ದ ವಿರಾಟ್ ಕೋಹ್ಲಿ ಅವರು, ಒಂದೇ ಒಂದು ಅರ್ಧ ಶತಕ ಬಾರಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಉತ್ತಮವಾದ ಆರಂಭವನ್ನು ಮಾಡಿದ ವಿರಾಟ್ ಅವರು, ಬಿಗ್ ಹಿಟ್ಸ್ ಗಳನ್ನೇ ನೀಡುತ್ತಾ ಉತ್ತಮವಾಗಿ ರನ್ ಗಳನ್ನು ಕಲೆಹಾಕುತ್ತಿದ್ದರು. 20 ರನ್ ಗಳನ್ನು ಗಳಿಸಿ, ಮುಂದಿನ ಬಾಲ್ ಗಳನ್ನು ಅದ್ಭುತವಾಗಿ ಆಡಿ ದೊಡ್ಡ ಸ್ಕೋರ್ ಮಾಡುತ್ತಾರೆ ಎನ್ನುವ ಭರವಸೆ ಮೂಡುವಾಗಲೇ, ವಿರಾಟ್ ಅವರು ರಬಾಡಾ ಅವರ ಬೌಲಿಂಗ್ ಗೆ ಔಟ್ ಆದರು. ಕಗಿಸೋ ರಬಾಡಾ ಅವರು ಬಾಲ್ ಹಾಕಿದಾಗ, ಲೆಗ್ ಸ್ಟಮ್ಪ್ ಮೇಲೆ ಬಂದ ಬಾಲ್ ಅನ್ನು ಫ್ಲಿಕ್ ಮಾಡುವ ಪ್ರಯತ್ನದ ವೇಳೆ, ಸ್ಕ್ವೇರ್ ಲೆಗ್ ನಲ್ಲಿ ಕ್ಯಾಚ್ ಕೊಟ್ಟರು ವಿರಾಟ್ ಕೋಹ್ಲಿ. ಈ ಮೂಲಕ ಔಟ್ ಆದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್.ಸಿ.ಬಿ ನಾಯಕ ಫಾಫ್ ಡು ಪ್ಲೆಸಿಸ್ ಅವರು, “ಪಿಕೆಬಿಎಸ್ ತಂಡ ಅತ್ಯುತ್ತಮವಾದ ಸ್ಕೋರ್ ಮಾಡಿದರು. ಜಾನಿ ಬೈರ್ ಸ್ಟೋವ್ ಅವರ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನಮ್ಮ ಬೌಲರ್ ಗಳ ಮೇಲೆ ಒತ್ತಡ ಹಾಕಿತು. ಇಂದಿನ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಉತ್ತಮವಾದ ಆರಂಭ ಮಾಡಿದರು. ಇನ್ನು ಒಳ್ಳೆಯ ರೀತಿಯಲ್ಲಿ ಮುಂದು ವರೆಯುತ್ತಾರೆ ಎನ್ನುವುದು ನಮ್ಮ ಆಶಯವು ಆಗಿತ್ತು. ಆದರೆ ಅನಿರೀಕ್ಷಿತವಾಗಿ ಔಟ್ ಆದರು ವಿರಾಟ್. ಕಠಿಣ ಪರಿಶ್ರಮ ಪಟ್ಟಿರುವ ವಿರಾಟ್ ಅವರು ಇಂದಿಗೂ ಅದನ್ನು ಮುಂದುವರೆಸುತ್ತಿದ್ದಾರೆ. ಎಲ್ಲಾ ಆಟಗಾರರಿಗೂ ಈ ರೀತಿಯ ಕಠಿಣ ದಿನಗಳು ಬಂದೇ ಬರುತ್ತವೆ..” ಎಂದು ವಿರಾಟ್ ಅವರ ಬಗ್ಗೆ ಹೇಳಿದ್ದಾರೆ ಫಾಫ್ ಡು ಪ್ಲೆಸಿಸ್.
Comments are closed.