Neer Dose Karnataka
Take a fresh look at your lifestyle.

ನಿಮಗೆ ಬ್ಯಾಂಕ್ ಗಿಂತ ಹೆಚ್ಚು ಆದಾಯ ಬೇಕಾ?? ಹಾಗಿದ್ದರೆ ಪೋಸ್ಟ್ ಆಫೀಸ್ ನ ಈ ಯೋಜನೆ ಬಳಸಿಕೊಂಡು ಹಣ ಗಳಿಸಿ.

ಕಡಿಮೆ ಸಮಯದಲ್ಲಿ ಸೇಫ್ ಆಗಿ ಹೂಡಿಕೆ ಮಾಡಿ, ಒಳ್ಳೆಯ ಲಾಭ ಗಳಿಸಲು ನೀವು ಸಹ ಪ್ಲಾನ್ ಮಾಡಿದ್ದರೆ, ನಿಮಗೆ ಒಂದು ಉತ್ತಮವಾದ ಯೋಜನೆ ಬಗ್ಗೆ ತಿಳಿಸುತ್ತೇವೆ. ಇದು ಪೋಸ್ಟ್ ಆಫೀಸ್ ನ ಸ್ಥಿರ ಠೇವಣಿ ಅಂದರೆ ಎಫ್.ಡಿ ಯೋಜನೆ ಆಗಿದೆ. ಇದರ ಮೂಲಕ ನೀವು ಒಳ್ಳೆಯ ಆದಾಯವನ್ನು ಪಡೆಯಬಹುದು. ಈ ಯೋಜನೆಯಿಂದ ಲಾಭ ಸಿಗುವುದರ ಜೊತೆಗೆ ಸರ್ಕಾರದಿಂದ ಗ್ಯಾರಂಟಿ ಸಹ ಸಿಗುತ್ತದೆ. ಈ ಯೋಜನೆ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಅಂಚೆ ಕಚೇರಿಯಲ್ಲಿ ಎಫ್.ಡಿ ಮಾಡುವುದು ಬಹಳ ಸುಲಭ.. ಎಫ್.ಡಿ ಮಾಡುವುದು ಹೇಗೆ ಎನ್ನುವ ಬಗ್ಗೆ, ಇಂಡಿಯಾ ಪೋಸ್ಟ್ ನ ಅಧಿಕೃತ ವೆಬ್ ಸೈಟ್ ನಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಎಫ್.ಡಿ ಯೋಜನೆಯ ಪ್ರಕಾರ, 1,2,3 ಮತ್ತು 5 ವರ್ಷಗಳ ವಿಭಿನ್ನವಾದ ಯೋಜನೆಗಳ ಅಡಿಯಲ್ಲಿ ನೀವು ಸ್ಥಿರ ಠೇವಣಿ ಅಂದರೆ ಎಫ್.ಡಿ ಮಾಡಬಹುದು. ಈ ಎಫ್.ಡಿ ಯೋಜನೆಯಿಂದ ಏನೆಲ್ಲಾ ಲಾಭಗಳಿವೆ ಎಂದು ತಿಳಿಯೋಣ ಬನ್ನಿ..

ಎಫ್.ಡಿ ಯೋಜನೆಯ ಲಾಭಾಗಳು :-
1.ಅಂಚೆ ಕಚೇರಿಯಲ್ಲಿ ಎಫ್.ಡಿ ಮಾಡುವುದರಿಂದ ನಿಮ್ಮ ಹೂಡಿಕೆಗೆ ಭಾರತ ಸರ್ಕಾರ ಗ್ಯಾರಂಟಿ ನೀಡುತ್ತಿದೆ.
2.ಹೂಡಿಕೆ ಮಾಡುವವರ ಹಣ ಸುರಕ್ಷಿತವಾಗಿರುತ್ತದೆ.
3.ಈ ಯೋಜನೆಗೆ ನೀವು ಹಣವನ್ನು ಆಫ್ ಲೈನ್ ಮೂಲಕ ಅಥವಾ ಆನ್ ಲೈನ್ ( ನೆಟ್ ಬ್ಯಾಂಕಿಂಗ್ ) ಮೂಲಕ ಆದರು ಸಹ ಹಣ ಹೂಡಿಕೆ ಮಾಡಬಹುದು.
4.ಅಂಚೆ ಕಚೇರಿಯಲ್ಲಿ ಒಂದಕ್ಕಿಂತ ಹೆಚ್ಚು ಎಫ್.ಡಿ ಮಾಡಬಹುದು.
5.ಅಂಚೆ ಕಚೇರಿಯಲ್ಲಿ ನೀವು ಜಂಟಿ ಎಫ್.ಡಿ.ಖಾತೆಯನ್ನು ಸಹ ಶುರು ಮಾಡಬಹುದು.
6.5 ವರ್ಷಗಳಿಗೆ ಎಫ್.ಡಿ ಮಾಡುವ ಮೂಲಕ ನೀವು ITR ತೆರಿಗೆ ಸಲ್ಲಿಸುವಲ್ಲಿ ವಿನಾಯಿತಿ ಪಡೆಯಬಹುದು.
7.ಒಂದು ಪೋಸ್ಟ್ ಆಫೀಸ್ ಇಂದ ಮತ್ತೊಂದು ಪೋಸ್ಟ್ ಆಫೀಸ್ ಗೆ ಸುಲಭವಾಗಿ ವರ್ಗಾವಣೆ ಮಾಡಿಕೊಳ್ಳಬಹುದು.

ಚೆಕ್ ಅಥವಾ ಕ್ಯಾಶ್ ನೀಡಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬಹುದು. ಈ ಯೋಜನೆಗೆ ಕನಿಷ್ಠ ₹1000 ರೂಪಾಯಿ ಠೇವಣಿ ಇರಿಸಬೇಕು. ಗರಿಷ್ಠ ಠೇವಣಿ ಹಣಕ್ಕೆ ಮಿತಿ ಇಲ್ಲ..
ಇದಕ್ಕೆ ಸಿಗುವ ಬಡ್ಡಿ ಎಷ್ಟು:-
1.7 ದಿನಗಳಿಂದ 1 ವರ್ಷದ ವರೆಗಿನ ಎಫ್.ಡಿ ಯೋಜನೆಗೆ ಶೇ.5.50 ಅಷ್ಟು ಬಡ್ಡಿ ಸಿಗುತ್ತದೆ.
2. 1 ವರ್ಷದ 1 ದಿನದಿಂದ ಶುರುವಾಗಿ, 2 ವರ್ಷದ ವರೆಗಿನ ಎಫ್.ಡಿ ಯೋಜನೆಗೆ ಸಹ ಇಷ್ಟೇ ಬಡ್ಡಿ ಹಣ ಸಿಗುತ್ತದೆ.
3. 3 ವರ್ಷದ ವರೆಗೂ ಇರುವ ಯೋಜನೆಗೂ ಸಹ ಶೇ.5.50 ಅಷ್ಟು ಬಡ್ಡಿ ಹಣ ಸಿಗಲಿದೆ.
4. 3 ವರ್ಷದಿಂದ 5 ವರ್ಷಗಳ ಸ್ಥಿರ ಠೇವಣಿಯ ಮೇಲೆ ಶೇ.6.70 ಅಷ್ಟು ಬಡ್ಡಿ ಸಿಗುತ್ತದೆ.

Comments are closed.