ಗಟ್ಟಿಮೇಳ ಧಾರಾವಾಹಿಯ ಮೂಲಕ ಕರ್ನಾಟಕದೆಲ್ಲೆಡೆ ಸದ್ದು ಮಾಡಿದ್ದ ಶರಣ್ಯ ರವರ ಹಿನ್ನೆಲೆ ಏನು ಗೊತ್ತೇ?? ಲೈಫ್ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು??
ಕನ್ನಡ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ಧಾರವಾಹಿ ಗಟ್ಟಿಮೇಳ. ಈ ಧಾರಾವಾಹಿಯಲ್ಲಿ ಸಾಹಿತ್ಯ ಎನ್ನುವ ವಿಲ್ಲನ್ ಪಾತ್ರ ಜನರಿಗೆ ಮೆಚ್ಚುಗೆಯಾಗಿದೆ. ಸಾಹಿತ್ಯ ಪಾತ್ರದಲ್ಲಿ ನಟಿಸುತ್ತಿರುವ ಶರಣ್ಯ ಶೆಟ್ಟಿ ನೆಗಟಿವ್ ಪಾತ್ರದಲ್ಲಿ ತಮ್ಮ ಅಭಿನಯದ ಮೂಲಕ ಜನರಿಗೆ ತುಂಬಾ ಇಷ್ಟವಾಗಿದ್ದಾರೆ. ಶರಣ್ಯ ಅವರು ನಿಜಕ್ಕೂ ಯಾರು ? ಅವರ ಹಿನ್ನಲೆ ಏನು ? ಶರಣ್ಯ ಲೈಫ್ ಸ್ಟೈಲ್ ಹೇಗಿದೆ? ತಿಳಿಸುತ್ತೇವೆ ನೋಡಿ..
ಶರಣ್ಯ ಶೆಟ್ಟಿ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಇವರಿಗೆ ಚಿತ್ರರಂಗವೇನು ಹೊಸದಲ್ಲ, ಇವರ ತಂದೆ ಸಿನಿಮಾ ಡಿಸ್ಟ್ರಿಬ್ಯುಟರ್, ಆದರೆ ಶರಣ್ಯ ಅವರ ತಂದೆಗೆ ಮಗಳು ಚಿತ್ರರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ಇವರ ತಂದೆ ತಾಯಿಗೆ ಮಗಳು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ಎನ್ನುವ ಆಸೆ ಇತ್ತಂತೆ. ಅದೇ ರೀತಿ ಶರಣ್ಯ ಇಂಜಿನಿಯರಿಂಗ್ ನಲ್ಲಿ ಪದವಿ ಸಹ ಪಡೆದಿದ್ದಾರೆ. ಇಂಜಿನಿಯರಿಂಗ್ ನಲ್ಲಿ ಶೇ.98ರಷ್ಟು ಸ್ಕೋರ್ ಮಾಡಿರುವ ಶರಣ್ಯ, ಕಾಲೇಜಿನಲ್ಲಿ ಮಾಡೆಲಿಂಗ್ ಟೀಮ್ ಗಳನ್ನು ಸೇರಿ ಸಾಕಷ್ಟು ರಾಂಪ್ ವಾಕ್ ಗಳನ್ನು ಮಾಡಿದ್ದಾರೆ. ಕ್ಯಾಟ್ ವಾಕ್ ಸೇರಿದಂತೆ ಮಾಡೆಲಿಂಗ್ ಬಗ್ಗೆ ಎಲ್ಲವನ್ನು ತಿಳಿದುಕೊಂಡಿದ್ದರು ಶರಣ್ಯ. ಮಿಸ್ ಬೆಂಗಳೂರು ಸ್ಪರ್ಧೆಗೆ ಆಯ್ಕೆಯಾಗಿದ್ದ ಶರಣ್ಯ, 2018ರಲ್ಲಿ ಮಿಸ್ ಇಂಡಿಯಾ ಕಾಂಟೆಸ್ಟ್ ನಲ್ಲಿ ಫೈನಲ್ಸ್ ವರೆಗೂ ತಲುಪಿದ್ದರು. 2019ರಲ್ಲಿ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಮಿಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್ ಸಹ ಆಗಿದ್ದರು.
ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡ ಶರಣ್ಯ, ಸಾಕಷ್ಟು ಸಿನಿಮಾಗಳಲ್ಲಿ ಮತ್ತು ಧಾರವಾಹಿಗಳಲ್ಲಿ ಸಹ ನಟಿಸಿದ್ದಾರೆ. ಆದರೆ ಶರಣ್ಯ ಅವರಿಗೆ ಸಕ್ಸಸ್ ತಂದುಕೊಟ್ಟಿದ್ದು, ಗಟ್ಟಿಮೇಳ ಧಾರವಾಹಿ. ನೆಗಟಿವ್ ಶೇಡ್ ನ ಪಾತ್ರವಾದರು ಸಹ ಇವರ ಅಭಿನಯವನ್ನು ಮೆಚ್ಚಿ ಎಲ್ಲರೂ ಇವರನ್ನು ಸಾಹಿತ್ಯ ಎಂದೇ ಗುರುತಿಸುತ್ತಾರೆ, ಅಷ್ಟರ ಮಟ್ಟಿಗೆ ಸಾಹಿತ್ಯ ಪಾತ್ರವನ್ನು ಜನರು ಒಪ್ಪಿಕೊಂಡಿದ್ದಾರೆ. ಗಟ್ಟಿಮೇಳ ಧಾರಾವಾಹಿಗಿಂತ ಮೊದಲು ಮುದ್ದು ಲಕ್ಷ್ಮಿ, ಆಕಾಶದೀಪ ಹಾಗೂ ಇನ್ನು ಕೆಲವು ಧಾರವಾಹಿಗಳಲ್ಲಿ ಶರಣ್ಯ ನಟಿಸಿದ್ದರು. ಇನ್ನು ರವಿ ಬೋಪಣ್ಣ, ಪೆಂಟಗನ್, ಪ್ಯಾರಲಲ್ ಯೂನಿವರ್ಸ್ ಸೇರಿದಂತೆ ಐದಾರು ಸಿನಿಮಾಗಳಲ್ಲಿ ನಟಿಸಿದ್ದಾರೆ ಶರಣ್ಯ. ಇವರು ನಟಿಸಿರುವ ಕೆಲವು ಸಿನಿಮಾಗಳು ತೆರೆಕಾಣಬೇಕಿದೆ. ರವಿ ಬೋಪಣ್ಣ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳ ಪಾತ್ರದಲ್ಲಿ ನಟಿಸಿದ್ದಾರೆ ಶರಣ್ಯ. ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಇನ್ನು ಹೆಚ್ಚು ಸಾಧನೆ ಮಾಡಬೇಕು ಎಂದುಕೊಂಡಿರುವ ಶರಣ್ಯ ಶೆಟ್ಟಿ ಅವರ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸೋಣ.
Comments are closed.