ದಿನೇ ದಿನೇ ಹೆಚ್ಚುತ್ತಿರುವ ತಾಪಮಾನದಿಂದ ನಿಮ್ಮ ಕಾರನ್ನು ರಕ್ಷಿಸುವುದು ಹೇಗೆ ಗೊತ್ತೇ?? ಸರಳ ಟಿಪ್ಸ್ ಮೂಲಕ ನಿಮ್ಮ ಕಾರು ರಕ್ಷಿಸಿ.
ಬೇಸಿಗೆಯ ಬಿರು ಬಿಸಿಲು ಈಗಾಗಲೇ ಶುರುವಾಗಿದೆ. ಎಲ್ಲೆಡೆ ತಾಪಮಾನ ಹೆಚ್ಚಾಗಿ, ಬಿಸಿಲಿನಲ್ಲಿ ಹೊರಗಡೆ ಬಂದು ಓಡಾಡುವುದು ಕಷ್ಟ ಎನ್ನುವ ಹಾಗಿದೆ. ಈ ಬಿಸಿಲಿನಲ್ಲಿ, ಯಾವ ಕೆಲಸ ಮಾಡಲಿ ಆಲಸ್ಯ ಆಗುತ್ತದೆ. ಬಿಸಿಲಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ, ನಮ್ಮ ಕಾರ್ ಗಳನ್ನು ಸಹ ರಕ್ಷಿಸಬೇಕು. ಕಾರ್ ಗಳು ನಿಮಗೆ ಬೇಕಾಗಿರುವ ವಸ್ತುಗಳನ್ನು ಕೊಂಡೊಕೊಂಡು ಬರಲು ಇರುವ ವಾಹನವಷ್ಟೇ ಅಲ್ಲ, ನೀವು ಪ್ರವಾಸಕ್ಕೆ ಹೋದಾಗ, ನಿಮ್ಮನ್ನು ಸೇಫ್ ಆಗಿ ಕರೆದುಕೊಂಡು ಹೋಗಿ ಬರಲು ಸಹಾಯವಾಗುತ್ತದೆ. ಈ ಬಿಸಿಲಿನಲ್ಲಿ ನಿಮ್ಮ ಕಾರ್ ಅನ್ನು ಹೇಗೆ ಪ್ರೊಟೆಕ್ಟ್ ಮಾಡುವುದು ಎನ್ನುವ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ ನೋಡಿ..
ಎಸಿ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷೆ ಮಾಡಿ :- ನಿಮ್ಮ ಕಾರಿನಲ್ಲಿ ಎಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲವಾದರೆ, ಮೊದಲಿಗೆ ಮೆಕ್ಯಾನಿಕ್ ಅವರ ಬಳಿ ಕಾರ್ ಅನ್ನು ತೆಗೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿ. ಯಾಕಂದ್ರೆ ಹೆಚ್ಚು ದಿನಗಳ ಕಾಲ ಎಸಿ ಕೆಲಸ ಮಾಡುತ್ತಿಲ್ಲ ಎಂದರೆ, ಮುಂದಿನ ದಿನಗಳಲ್ಲಿ ಅದು ದೊಡ್ಡ ಸಮಸ್ಯೆ ತರುವುದಂತೂ ಖಂಡಿತ. ಹಾಗಾಗಿ ಮೊದಲು ಎಸಿ ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಿ.
ಏರ್ ಫಿಲ್ಟರ್ ಶುಭ್ರವಾಗಿದೆಯೇ ಎಂದು ಪರೀಕ್ಷಿಸಿ :- ನಿಮ್ಮ ಮನೆಯಲ್ಲಿರುವ ಎಸಿಗೆ ಏರ್ ಫಿಲ್ಟರ್ ನೀಡುವ ಹಾಗೆ, ಕಾರ್ ನಲ್ಲಿರುವ ಎಸಿಗು ಏರ್ ಫಿಲ್ಟರ್ ನೀಡಿರುತ್ತಾರೆ. ಹಾಗಾಗಿ ಏರ್ ಫಿಲ್ಟರ್ ಕೊಳಕಾಗಿದೆಯೇ ಎನ್ನುವುದನ್ನು ನೋಡಿ ಆಗಾಗ ಕ್ಲೀನ್ ಮಾಡಿ. ಕೆಲವೊಮ್ಮೆ ತಾಪಮಾನ ಧೂಳಿನಿಂದ ಕೂಡಿದ್ದಾಗ, ಏರ್ ಫಿಲ್ಟರ್ ಒಳಗೆ ಧೂಳು ಸೇರಿಕೊಳ್ಳುತ್ತದೆ. ಹಾಗಾಗಿ ಅದೆಲ್ಲವನ್ನು ನೋಡಿ ಆಗಾಗ ಕ್ಲೀನ್ ಮಾಡಿಕೊಳ್ಳಬೇಕು. ಏರ್ ಫಿಲ್ಟರ್ ಅನ್ನು ಸಹ ಬದಲಾಯಿಸಬಹುದು.
ನೀರಿನ ಮಟ್ಟ ಎಷ್ಟಿದೆ ಪರೀಕ್ಷಿಸಿ :- ಮನುಷ್ಯರ ದೇಹಕ್ಕೆ ಹೇಗೆ ಫ್ಲೂಯಿಡ್ ಅವಶ್ಯಕತೆ ಇದೆಯೋ ಅದೇ ರೀತಿ ಕಾರ್ ನ ಕೆಲವು ಪಾರ್ಟ್ ಗಳು ಉತ್ತಮವಾಗಿ ಕೆಲಸ ಮಾಡಲು ಫ್ಲೂಯಿಡ್ ಅವಶ್ಯಕ. ಈ ಬೇಸಿಗೆಯಲ್ಲಿ ಫ್ಲೂಯಿಡ್ ಗಳು ಬಹಳ ಬೇಗ ಆವಿಯಾಗಿ ಬಿಡುತ್ತದೆ. ಟ್ರಾನ್ಸ್ಮಿಶನ್ ಫ್ಲೂಯಿಡ್, ಪವರ್ ಫ್ಲೂಯಿಡ್, ಸ್ಟೀರಿಂಗ್ ಫ್ಲೂಯಿಡ್, ಕೂಲಂಟ್ ಮತ್ತು ವಿಡ್ ಶೀಲ್ಡ್ ವೈಪರ್ ಇದೆಲ್ಲವೂ ಸರಿ ಇದೆಯೇ ಎಂದು ಪರೀಕ್ಷೆ ಮಾಡಿ.
ಬ್ರೇಕ್ ಪರೀಕ್ಷಿಸಿ :- ನಿಮ್ಮ ಕಾರ್ ನ ಬ್ರೇಕ್ ಸರಿ ಇದೆಯೋ ಇಲ್ಲವೋ ಎನ್ನುವುದು ಕಾರ್ ಚಲಿಸುವಾಗ ನಿಮಗೆ ಗೊತ್ತಾಗುವುದಿಲ್ಲ. ಹಾಗಾಗಿ ಆಗಾಗ ಕಾರ್ ನ ಬ್ರೇಕ್ ಪರಿಶೀಲಿಸಿ. ಕಾರ್ ಬ್ರೇಕ್ ಹಾಕುವಾಗ ಏನಾದರೂ ಶಬ್ಧವಾದರೆ, ಕಾರ್ ಗೆ ನೇರವಾಗಿ ಬ್ರೇಕ್ ಹಾಕಿದಾಗ ಪಕ್ಕಕ್ಕೆ ಎಳೆದ ಹಾಗೆ ಆದರೆ, ಸಮಸ್ಯೆ ಇದೆ ಎಂದು ಅರ್ಥ. ಹಾಗಾಗಿ ಆಗಾಗ ಬ್ರೇಕ್ ಸರಿ ಇದೆಯೇ ಎಂದು ಪರೀಕ್ಷೆ ಮಾಡಿ. ಟೈರ್ ನ ಪ್ರೆಶರ್ ಹೇಗಿದೆ ಎಂದು ಸಹ ಆಗಾಗ ಚೆಕ್ ಮಾಡಿಸಿ. ತಾಪಮಾನ ಹೆಚ್ಚಾದ ಹಾಗೆ, ಟೈರ್ ನ ಒಳಗೆ ಗಾಳಿ ಬಿಸಿಯಾಗಿ, ಅದು ಹಿಗ್ಗಬಹುದು. ಇದನ್ನು ನೀವು ಸರಿಯಾಗಿ ಚೆಕ್ ಮಾಡದೆ ಇದ್ದರೆ, ಗಂಭೀರವಾದ ಸಮಸ್ಯೆ ಆಗಬಹುದು.
Comments are closed.